No menu items!
26.3 C
Munich
Wednesday, September 16, 2026

ಡಾ. ರಾಜ್‌ ಕುಮಾರ್ ಬಳಿಕ ಅನಂತ್ ನಾಗ್‌ʼಗೆ ದಾದಾಸಾಹೇಬ್ ಫಾಲ್ಕೆ ಗೌರವ: ಕನ್ನಡ ಚಿತ್ರರಂಗಕ್ಕೆ ಒಲಿದ ಮತ್ತೊಂದು ಐತಿಹಾಸಿಕ ಪ್ರಶಸ್ತಿ!

Must read

ಡಾ. ರಾಜ್‌ ಕುಮಾರ್ ಬಳಿಕ ಅನಂತ್ ನಾಗ್‌ʼಗೆ ದಾದಾಸಾಹೇಬ್ ಫಾಲ್ಕೆ ಗೌರವ: ಕನ್ನಡ ಚಿತ್ರರಂಗಕ್ಕೆ ಒಲಿದ ಮತ್ತೊಂದು ಐತಿಹಾಸಿಕ ಪ್ರಶಸ್ತಿ!

ಬೆಂಗಳೂರು: ಭಾರತೀಯ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆ ಹಾಗೂ ಶ್ರೇಷ್ಠ ಸಿನಿ ಪಯಣಕ್ಕಾಗಿ ಹಿರಿಯ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಒಲಿದುಬಂದಿದೆ. ಆ ಮೂಲಕ ವರನಟ ಡಾ. ರಾಜ್‌ಕುಮಾರ್ ಅವರ ಬಳಿಕ ಈ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗುತ್ತಿರುವ ಕನ್ನಡದ ಎರಡನೇ ನಟ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಅನಂತ್ ನಾಗ್ ಪಾತ್ರರಾಗಿದ್ದಾರೆ.

ಸೆಪ್ಟೆಂಬರ್ 22ರಂದು ಗುಜರಾತ್‌ನ ಕೆವಾಡಿಯಾದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಗುವುದು. ಕನ್ನಡ ಚಿತ್ರರಂಗಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ 1995ರ ಸಾಲಿನಲ್ಲಿ (43ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ) ಡಾ. ರಾಜ್‌ಕುಮಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸುದೀರ್ಘ ವರ್ಷಗಳ ನಂತರ ಇದೀಗ ಫಾಲ್ಕೆ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಅನಂತ್ ನಾಗ್ ಅವರು ಈ ಪ್ರಶಸ್ತಿಗೆ ಭಾಜನರಾಗಿರುವುದು ಕನ್ನಡಿಗರ ಹಿರಿಮೆ ಮತ್ತು ಸಂತಸವನ್ನು ದ್ವಿಗುಣಗೊಳಿಸಿದೆ.

ಅನಂತ್ ನಾಗ್ ಅವರಿಗೆ ಈ ಗೌರವ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, “ಹತ್ತಾರು ವರ್ಷಗಳಿಂದ ತಮ್ಮ ಸಹಜ ಅಭಿನಯ, ಅದ್ಭುತ ವೈವಿಧ್ಯತೆ ಹಾಗೂ ಅಪಾರ ಪ್ರತಿಭೆಯ ಮೂಲಕ ಅನಂತ್ ನಾಗ್ ಅವರು ಭಾರತೀಯ ಹಾಗೂ ಕನ್ನಡ ಚಿತ್ರರಂಗದ ಮೇಲೆ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ತಾವು ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿರುವ ಶ್ರೇಷ್ಠ ಕಲಾವಿದರೊಬ್ಬರಿಗೆ ಸಂದಿರುವ ಈ ಗೌರವ ಸಂಪೂರ್ಣವಾಗಿ ಅರ್ಹವಾದದ್ದು” ಎಂದು ಪ್ರಶಂಸಿದ್ದಾರೆ.

- Advertisement -spot_img

More articles

- Advertisement -spot_img

Latest article