ರಾಜ್ಯದ ಜನತೆಗೆ ಹಾಲಿನ ದರ ಏರಿಕೆ ಶಾಕ್: ಲೀಟರ್ ಗೆ ₹8 ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ!
ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಹಾಲಿನ ದರವನ್ನು ಲೀಟರ್ಗೆ 8 ರೂಪಾಯಿ ಹೆಚ್ಚಿಸಲು ಅಕ್ಟೋಬರ್ 29ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪರಿಷ್ಕೃತ ದರವು ನವೆಂಬರ್ 1ರಿಂದ ಜಾರಿಗೆ ಬರಲಿದೆ.
ರೈತರು ಮತ್ತು ಒಕ್ಕೂಟಗಳ ಲಾಭದ ಹಂಚಿಕೆ (90:10): ಹೆಚ್ಚಳವಾಗುತ್ತಿರುವ 8 ರೂಪಾಯಿ ಪೈಕಿ 7 ರೂಪಾಯಿ ನೇರವಾಗಿ ರೈತರಿಗೆ ತಲುಪಲಿದ್ದು, ಉಳಿದ 1 ರೂಪಾಯಿ ಹಾಲು ಒಕ್ಕೂಟಗಳಿಗೆ ಸಿಗಲಿದೆ.
• ಹಾಲಿನ ದರ ಏರಿಕೆಯಲ್ಲಿ 70:30 ಅನುಪಾತದಲ್ಲಿ ಹಂಚಿಕೆ ಮಾಡುವಂತೆ ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿದ್ದವು.
• ಆರಂಭದಲ್ಲಿ 80:20 ರಂತೆ ದರ ಏರಿಕೆ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದರು.
• ಆದರೆ, ಅಂತಿಮವಾಗಿ ರೈತರಿಗೆ ಹೆಚ್ಚಿನ ಅನುಕೂಲವಾಗುವಂತೆ 90:10 ಅನುಪಾತದಲ್ಲಿ ದರ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ.
ಬಸ್ ಟಿಕೆಟ್ ದರ ಏರಿಕೆ ಕುರಿತು ಚರ್ಚೆ: ಇದೇ ಸಚಿವ ಸಂಪುಟ ಸಭೆಯಲ್ಲಿ ಬಸ್ ಟಿಕೆಟ್ ದರ ಏರಿಕೆಯ ಕುರಿತೂ ಚರ್ಚೆ ನಡೆದಿದೆ. ಆದರೆ, ದರ ಏರಿಕೆಯ ಅಂತಿಮ ನಿರ್ಧಾರವನ್ನು ಸಂಪುಟವು ಸಾರಿಗೆ ಇಲಾಖೆಗೆ ವಹಿಸಿದೆ. ಇಲಾಖೆಯು ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ನವೆಂಬರ್ 5ರಂದು ಸಾರಿಗೆ ದರ ಹೆಚ್ಚಳದ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.



