ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!

admin
By admin
2 Min Read

ನೋಟು ಬ್ಯಾನ್ ಆದ ದಿನದಿಂದ ಜನ ಸಾಮಾನ್ಯರು ಒಂದಿಲ್ಲೊಂದು ಸಮಸ್ಯೆಗೆ ತಗಲಾಕೊಳ್ತಾ ಇದಾರೆ. ಒಂದ್ಕಡೆ ಕ್ಯೂನಲ್ಲಿ ನಿಂತ್ರೂ ಹಣ ಸಿಗದೆ ಪರದಾಡ್ತಾ ಇದ್ರೆ, ಇನ್ಕೊಂದ್ಕಡೆ ಸಿಕ್ಕ ನೋಟಿನಲ್ಲಿ ಹಲವಾರು ಲೋಪದೋಷಗಳನ್ನು ಕಾಣಿಸಿಕೊಂಡು ಖೋಟಾ ನೋಟು ಅಂತ ಎಕ್ಸ್ ಚೇಂಜ್ ಮಾಡೋಕು ಭಯ ಪಡ್ತಾ ಇದಾರೆ. ಇನ್ನು ಆರ್‍ಬಿಐ ಕಥೆ ಮಾತ್ರ ಆ ದೇವರೆ ಬಲ್ಲ..! ಜನರಿಗೆ ಹಣದ ಸಮಸ್ಯೆಯನ್ನು ಹೇಗಾದ್ರೂ ಮಾಡಿ ತಡೆಗಟ್ಬೇಕು ಅನ್ನೋ ಭರದಲ್ಲಿ ನೋಟಿನಲ್ಲಿ ಅನೇಕ ತಪ್ಪುಗಳನ್ನು ಮಾಡಿ ತಾನೆ ಸಮಸ್ಯೆಯ ಸುಳಿಯಲ್ಲಿ ಸಿಕ್ಕಾಕೊಳ್ತಾ ಇದೆ. ಅದಕ್ಕೆ ಸೂಕ್ತ ಉದಾಹರಣೆಯಾಗಿ ಈ ಹಿಂದೆ ಮುದ್ರಿಸಲಾದ ಹೊಸ 500ರೂ. ನೋಟುಗಳಲ್ಲಿ ಬಂದ ತಪ್ಪುಗಳು ನೋಡ್ಬೋದು..! ಆದ್ರೆ ಈಗ 2000 ನೋಟಿನ ಸರದಿ ಬಂದಿದೆ..! ಮಧ್ಯಪ್ರದೇಶದ ಶೋಪೋರ್ ಜಿಲ್ಲೆಯ ರೈತರು ಕಷ್ಟ ಕಟ್ಟು 2000ರೂ ಮುಖಬೆಲೆಯ ನೋಟುಗಳನ್ನು ಪಡೆದರೆ ಆ ನೋಟಿನಲ್ಲಿ ಗಾಂಧೀಜಿ ಅವರ ಫೋಟೋನೆ ಮಾಯಾವಾಗಿದೆ ನೋಡಿ..! ಬ್ಯಾಂಕ್‍ನಲ್ಲಿ ನೊಟ್‍ನ ಬಗ್ಗೆ ಅಷ್ಟೆನೂ ಗಮನ ಹರಿಸದ ಇಬ್ಬರು ರೈತರು, ಮಾರುಕಟ್ಟೆಗೆ ಅದನ್ನು ಕೊಂಡೊಯ್ದಾಗ ನೋಟಿನಲ್ಲಿ ಗಾಂಧೀಜಿ ಚಿತ್ರ ಮಾಯವಾಗಿರೋದು ಗಮನಕ್ಕೆ ಬಂದಿದೆ..! ಕೂಡಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಧಾವಿಸಿ ಬ್ಯಾಂಕ್ ಅಧಿಕಾರಿಗಳಿಗೆ ನಮಗೆ ಖೋಟಾ ನೋಟು ಕೊಟ್ಟಿದ್ದೀರಾ ಅಂತ ತರಾಟೆಗೆ ತಗೊಂಡಿದ್ದಾರೆ. ಆದ್ರೆ ನೋಟು ನಕಲಿ ಅಲ್ಲ. ಇದು ಅಸಲಿ ನೋಟು ಎಂದ ಬ್ಯಾಂಕ್ ಸಿಬ್ಬಂಧಿಗಳು, ನೋಟು ಮುದ್ರಣದ ವೇಳೆ ಗಾಂಧಿ ಚಿತ್ರ ಮುದ್ರಣ ಮಾಡಲು ಬಿಟ್ಟ ಸ್ಥಳ ಪ್ರಿಂಟ್ ಆಗಿಲ್ಲ ಎಂದು ಬೇರೆ ಹೊಸ ನೋಟು ಕೊಟ್ಟು ಕಳುಹಿಸಿದ್ದಾರೆ..!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!

ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?

ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!

ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!

Share This Article