ನೋಟು ನಿಷೇಧಗೊಂಡ ದಿನದಿಂದ ಜನಸಾಮಾನ್ಯರು ಸಮಸ್ಯೆಗಳ ಸುಳಿಯಲ್ಲಿ ಸಿಲಿಕಿದ್ದು ಯಾರಿಗೆ ಗೊತ್ತಾಯ್ತೊ ಇಲ್ಲೊ ಮೈಸೂರಿನ ಕೆನರಾ ಬ್ಯಾಂಕ್ ಎಟಿಎಂಗೆ ಗೊತ್ತಾಗಿದೆ ಅನ್ಸುತ್ತೆ. ದಿನಕ್ಕೆ 4 ಸಾವಿರ ಹಣ ಜನರಿಗೆ ಎಲ್ಲಿ ಸಾಕಾಗುತ್ತೆ ಅಂತ ಅರ್ಥ ಮಾಡ್ಕೊಂಡ ಎಟಿಎಂ ಮೆಷಿನ್ ತನ್ನ ಉದಾರತೆ ಮೆರೆದಿದೆ ನೋಡಿ..! ಎಟಿಎಂ ತೋರಿದ ಉದಾರತೆ ಕೇಳುದ್ರೆ ನಿಮ್ಗೂ ಕೂಡ ಅಚ್ಚರಿಯಾಗುತ್ತೆ..! ಎಟಿಂನಲ್ಲಿ 4 ಸಾವಿರ ಹಣ ಡ್ರಾ ಮಾಡೋಕೆ ಹೋದ ಗ್ರಾಹಕರಿಗೆ 80 ಸಾವಿರ ಹಣ ನೀಡಿ ಜನರ ಕಷ್ಟ ಏನಂತ ಅರ್ಥ ಮಾಡ್ಕೊಂಡಿದೆ ನೋಡಿ..! ಕುಂಬಾರಕೊಪ್ಪಲಿನ ಕೆನರಾಬ್ಯಾಂಕ್ ಎಟಿಎಂ ಈ ರೀತಿ ಹೆಚ್ಚುವರಿ ಹಣ ನೀಡಿ ಉದಾರತೆ ಮೆರೆದಿದ್ದು, ಅಚ್ಚರಿಗೊಂಡ ಜನರು ಅಲ್ಲಿದ್ದ ಭದ್ರತಾ ಸಿಬ್ಬಂಧಿಗೆ ವಿಷಯ ಮುಟ್ಟಿಸಿದ್ದಾರೆ..! ಸುಮಾರು 2-3 ಗಂಟೆಯವರೆಗೂ ಇದು ಈಗೆ ಮುಂದುವರೆದಿದೆ..! ಎಟಿಎಂನಲ್ಲಿ ಈ ಹಿಂದೆ ಹಣ ವಿತ್ ಡ್ರಾ ಮಾಡ್ಕೊಂಡು ಹೋದ ಕೆಲ ವ್ಯಕ್ತಿಗಳಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಬಂದಿದ್ದೆ ಶಾಕ್ ಜೊತೆ ಬಯಸದೇ ಬಂದ ಭಾಗ್ಯ ಅಂತ ಬಂದ ಹಣವನ್ನ ಜೇಬಲ್ಲಿ ಇಟ್ಕೊಂಡ್ ಸುಮ್ಮನೆ ಏನು ನಡದೇ ಇಲ್ಲ ಅನ್ನೊ ತರ ಪರಾರಿಯಾಗಿದ್ದಾರೆ..! ವಿಷಯ ತಿಳಿದ ಭದ್ರತಾ ಸಿಬ್ಬಂದಿ ತಾಂತ್ರಿಕ ಸಿಬ್ಬಂದಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಬಂದ ಅವರು ಎಟಿಎಂ ಯಂತ್ರವನ್ನು ಸರಿಪಡಿಸಿದ್ದಾರೆ..! ಇನ್ನು ಹೆಚ್ಚುವರಿ ಹಣ ಪಡೆದ ಗ್ರಾಹಕರ ಖಾತೆಗಳ ಮಾಹಿತಿ ಪಡೆದಿದ್ದು, ಅಂತಹ ಗ್ರಾಹಕರ ಖಾತೆಯಿಂದ ಬಂದ ಹೆಚ್ಚುವರಿ ಹಣವನ್ನು ಮರಳಿ ಪಾವತಿಗೆ ಕ್ರಮ ಕೈಗೊಳ್ಳಿ ಅಂತ ಆಯಾ ಬ್ಯಾಂಕ್‍ಗಳಿಗೆ ಪತ್ರ ಬರೆದಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ವಲ್ಲಾ ಅಂತ ಹಣ ತಗೊಂಡ ಗ್ರಾಹಕರು ಹಣ ಮರು ಪಾವತಿಗೆ ತೆರಳಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಫಿಲ್ಮ್ ಫೇರ್‍ಗೆ ಸನ್ನಿ ಶಾರ್ಟ್ ಫಿಲ್ಮ್ !
ದಂಪತಿಗಳಿಗೆ ಉಡುಗೊರೆಯಾಗಿ ಕಾಂಡೋಮ್ ನೀಡಲಿದೆ ಸರ್ಕಾರ..!
ಸ್ಯಾಂಡಲ್‍ವುಡ್ ಕ್ವೀನ್‍ನ ಹಿಂದಿಕ್ಕಿದ್ದಾಳಂತೆ ಈ ನಟಿಮಣಿ?
ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!
ಕ್ಯಾಪ್ಟನ್ ಕೂಲ್ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾದ್ರೂ ಯಾಕೆ..?
ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!