No menu items!
3.2 C
Munich
Friday, April 24, 2026

ಸುಧಾಕರ್ ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದು ಯಾಕೆ ಗೊತ್ತಾ..?

Must read

ಬೆಂಗಳೂರು ನಗರದ ಎಟಿಎಂ ಒಂದರಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆಕೆಯಿಂದ ಹಣ ದೋಚಿ ಪರಾರಿಯಾಗಿ ಸುಮಾರು ಮೂರು ವರ್ಷಗಳ ನಂತರ ಸೆರೆ ಸಿಕ್ಕ ಸೈಕೋ ಸುಧಾಕರ್ ತಾನು ಮಾಡುವ ಎಲ್ಲಾ ಕೃತ್ಯಕ್ಕೆ ಕಾರಣ ಏನು ಎಂಬುದನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಪೊಲೀಸರ ಮುಂದೆ ಒಂದೊಂದೆ ಸತ್ಯವನ್ನು ಬಾಯ್ಬಿಡ್ತಿರೊ ಸುಧಾಕರ್ ತಾನು ಹಲ್ಲೆ ಮಾಡೋಕೆ ಕಾರಣ ಊಟದ ದುಡ್ಡಿಗಾಗಿ ಎಂಬ ಅಚ್ಚರಿಯ ಸತ್ಯವನ್ನು ಬಾಯ್ಬಿಟ್ಟಿದ್ದಾನೆ..! ಮಹಿಳೆಯರ ಮೇಲೆ ಹಲ್ಲೆ ಮಾಡೋಕೆ ಕಾರಣ ಊಟ ಮಾಡೊ ದುಡ್ಡಿಗಾಗಿ ಎಂದೇಳುವ ಮೂಲಕ ಪೊಲೀಸರಿಗೆ ದಿಗುಲು ಮುಟ್ಟಿಸಿದ್ದಾನೆ. ಆಂಧ್ರದಲ್ಲಿ ಕೊಲೆ ಮಾಡಿ ಅಲ್ಲಿಂದ ತಲೆ ಮರೆಸಿ ಬೆಂಗಳೂರಿಗೆ ಬಂದ ಸುಧಾಕರ್ ತನ್ನಲ್ಲಿದ್ದ ಅಲ್ಪ ಸ್ವಲ್ಪ ಹಣದಲ್ಲೆ ದಿನ ಸಾಗಿಸ್ತಾ ಇದ್ನಂತೆ. ಆದ್ರೆ ಹಣವೆಲ್ಲಾ ಖಾಲಿಯಾಗಿ ಎರಡು ದಿನ ಉಪವಾಸ ಮಲಗಿದ್ದ ಈತನಿಗೆ ಊಟದ ದುಡ್ಡಿಗಾಗಿ ಪ್ರತಿ ನಿತ್ಯ ಎಟಿಎಂ ಬಳಿ ಹೊಂಚು ಹಾಕ್ತಾ ಇದ್ನಂತೆ. ಆದ್ರೆ ಎಲ್ಲಾ ಎಟಿಎಂಗಳಲ್ಲಿ ಜನಸಂದಣಿ ಇರ್ತಾ ಇದ್ದ ಕಾರಣ ಆತನಿಗೆ ಹಲ್ಲೆ ಮಾಡೋಕೆ ಭಯ ಆಗ್ತಾ ಇತ್ತು ಎಂದು ಹೇಳಿದ್ದಾನೆ. ಕೊನೆಗೆ ಕಾರ್ಪೋರೇಷನ್ ಎಟಿಎಂಗೆ ಒಂಟಿ ಮಹಿಳೆಯೊಬ್ಬಳು ಹಣ ಡ್ರಾ ಮಾಡೋಕೆ ಹೋಗೋದನ್ನು ನೋಡಿದ ಸುಧಾಕರ್ ನೇರ ಎಟಿಎಂಗೆ ನುಗ್ಗಿ ಮಹಿಳೆಗೆ ಪಿನ್ ನಂಬರ್ ಹೇಳು ಎಂದು ಬೆದರಿಕೆ ಹಾಕಿದ್ದಾನೆ. ಈ ವೇಳೆ ಮಹಿಳೆ ಪಿನ್‍ಕೋಡ್ ಹೇಳದೆ ಇದ್ದ ಕಾರಣ ನಾನು ಮಚ್ಚಿನಿಂದ ಹಲ್ಲೆ ಮಾಡಿದೆ ಎಂದು ಪೊಲೀಸರ ಮುಂದೆ ಸತ್ಯ ಒಪ್ಕೊಂಡಿದ್ದಾನೆ. ಇದಕ್ಕೂ ಮೊದ್ಲು ಕೊಲೆ ಮಾಡಿ ಬೆಂಗಳೂರಿಗೆ ಬಂದಿದ್ದ ಸುಧಾಕರ್ ಎರಡು ದಿನಗಳ ಕಾಲ ಕಬ್ಬನ್ ಪಾರ್ಕ್‍ನಲ್ಲಿ ಕಾಲ ಕಳೆದಿದ್ದ. ಮಚ್ಚನ್ನು ಕದ್ದು ತಂದಿದ್ದ ಆತ ಅದನ್ನೆ ಎಟಿಎಂನಲ್ಲಿ ಅಸ್ತ್ರವಾಗಿ ಬಳಸಿಕೊಂಡಿದ್ದ. ಸದ್ಯಕ್ಕೆ ಕ್ರೈಂ ಬ್ರ್ಯಾಂಚ್ ಪೊಲೀಸರು ಮದನಪಲ್ಲಿಯಲ್ಲಿ ಬೀಡು ಬಿಟ್ಟಿದ್ದು ಮತ್ತಷ್ಟು ಮಾಹಿತಿಯನ್ನು ಕಲೆ ಹಾಕ್ತಾ ಇದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ವಿಷ್ಣುದಾದರಿಂದ ಸೂಪರ್‍ಸ್ಟಾರ್ ಆದ್ರಂತೆ ಈ ನಟ..!

ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.

ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ

ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article