No menu items!
5.2 C
Munich
Friday, April 24, 2026

ಮೂರು ಲಕ್ಷಕ್ಕೂ ಅಧಿಕ ನಗದು ವ್ಯವಹಾರ ನಡೆಸಿದರೆ ಶೇ.100ರಷ್ಟು ಟ್ಯಾಕ್ಸ್..!

Must read

ನೋಟ್‍ಬ್ಯಾನ್ ಬಳಿಕ ಕ್ಯಾಶ್‍ಲೆಸ್ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ಕೈಗೊಂಡಿದ್ದು, ಅದರ ಇನ್ನೊಂದು ಭಾಗವಾಗಿ ಮೂರು ಲಕ್ಷಕ್ಕೂ ಅಧಿಕ ನಗದು ವ್ಯವಹಾರ ನಡೆಸಿದ್ದೆ ಆದಲ್ಲಿ ಅದಕ್ಕೆ ಶೇ.100ರಷ್ಟು ತೆರಿಗೆ ವಿಧಿಸುವ ಕಠಿಣ ನಿಯಮ ಜಾರಿಗೊಳಿಸುವ ಯೋಜನೆ ಹಾಕಿಕೊಂಡಿದೆ. ಈ ಯೋಜನೆ ಮುಂದಿನ ಏಪ್ರಿಲ್ 1ರಿಂದಲೇ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು 3 ಲಕ್ಷಕ್ಕೂ ಅಧಿಕ ವಹಿವಾಟಿಗೆ ಶೇ.100ರಷ್ಟು ತೆರಿಗೆ ವಿಧಿಸುವ ನಿಯಮ ಜಾರಿಗೆ ಬರಲಿದೆ. ಈ ನಿಯಮದ ಪ್ರಕಾರ ಗ್ರಾಹಕರು 4 ಲಕ್ಷ ಹಣದ ವಹಿವಾಟು ನಡೆಸಿದರೆ ಅದಕ್ಕೆ 4 ಲಕ್ಷ ತೆರಿಗೆ, 20 ಲಕ್ಷ ಪಡೆದರೆ ಅದಕ್ಕೆ 20 ಲಕ್ಷ ತೆರಿಗೆ ವಿಧಿಸುವ ಕಠಿಣ ನಿಯಮ ಜಾರಿಗೊಳಿಸಲಿದೆ. ಆದರೆ ಈ ನಿಯಮ ಬ್ಯಾಂಕ್ ಹಾಗೂ ಅಂಚೆ ಕಛೇರಿ ಹಾಗೂ ಸಹಕಾರಿ ಬ್ಯಾಂಕ್‍ಗಳಿಗೆ ಅನ್ವಯವಾಗೋದಿಲ್ಲ. 2017ನೇ ಬಜೆಟ್ ಮಂಡನೆ ವೇಳೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ 3 ಲಕ್ಷಕ್ಕೂ ಅಧಿಕ ಹಣದ ವ್ಯವಹಾರವನ್ನು ನಿಯಂತ್ರಿಸುವ ಪ್ರಸ್ತಾಪ ಮಾಡಿದ್ದರು. ಕಪ್ಪುಹಣ ಸೃಷ್ಠಿಗೆ ಮೂಲ ಕಾರಣವಾಗಿರುವ ನಗದು ವಹಿವಾಟನ್ನು ತಗ್ಗಿಸುವ ಸಲುವಾಗಿ ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ಈಗಿರುವ 2 ಲಕ್ಷ ನಗದು ಮಿತಿಗೆ ಪಾನ್ ಕಾರ್ಡ್ ಕಡ್ಡಾಯ ನಿಯಮವೂ ಜಾರಿಯಲ್ಲಿರುವ ಸಾಧ್ಯತೆ ಇದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ವಿಷ್ಣುದಾದರಿಂದ ಸೂಪರ್‍ಸ್ಟಾರ್ ಆದ್ರಂತೆ ಈ ನಟ..!

ಸತ್ರೂ ಲವ್ ಮ್ಯಾರೇಜ್ ಆಗಲ್ವಂತೆ ಈ ನಟಿ.

ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ

ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article