ನೀವು ಈ ಕುಟುಂಬದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರ..! ಇಡೀ ಕುಟುಂಬನ ಒಂದ್ಸಾರಿ ನೀವು ನೋಡ್ಬಿಟ್ರೆ ಒಂದು ಕ್ಷಣ ಬಾಯಿಮೇಲೆ ಬೆರೆಳಿಟ್ಟು ನೋಡ್ತೀರಾ. ಸರ್ವೇ ಸಾಮಾನ್ಯವಾಗಿ ಒಂದು ಮನೆಯಲ್ಲಿ ಮ್ಯಾಕ್ಸಿಮಮ್ ಅಂದ್ರೂ 50 ಇಲ್ವೋ 100 ಜನರನ್ನು ಕಾಣ್ಬೋದು. ಆದ್ರೆ ಈ ಕುಟುಂಬದಲ್ಲಿ ಬರೋಬ್ಬರಿ 500 ಜನ್ರು ಇದ್ದಾರಂತೆ ನೋಡಿ..!
ನಾವ್ಯಾವ್ದೊ ಕಥೆ ಕಟ್ತಾ ಇದೀವಿ ಅಂತ ನಿಮ್ಗೆ ಅನ್ಸಿದ್ರೆ ಖಂಡಿತ ಇಲ್ಲ. ಈ ಇಡೀ ಕುಟುಂಬದ 500 ಸದಸ್ಯರನ್ನೂ ಒಟ್ಟುಗೂಡಿಸಿ ಫೋಟೋ ಶೂಟ್ ಮಾಡಿದ್ದಾರೆ ಜೆನ್ ಎಂಬ ವ್ಯಕ್ತಿ. 500ಜನರನ್ನು ಒಟ್ಟಿಗೆ ಸೇರಿಸಿ ಫೋಟೊ ಶೂಟ್ ಮಾಡೋದು ಅಷ್ಟು ಸುಲಭದ ಕೆಲಸ ಅಲ್ಲ. ಸಣ್ಣ ಸಣ್ಣ ಮಕ್ಕಳನ್ನು ಬೇಕಾದ್ರೆ ಹಿಡಿದು ಒಂದ್ಕಡೆ ಕೂರುಸ್ಬೋದು ಆದ್ರೆ ಬುದ್ದಿ ಇರೋ ದೊಡ್ಡವರನ್ನು ನಿಭಾಯಿಸೊದು ಸುಲಭದ ಕೆಲಸ ಅಲ್ಲ.
ಇದು ನಡ್ದಿರೊದು ನಮ್ಮ ನೆರೆಯ ರಾಷ್ಟ್ರ ಚೀನಾದಲ್ಲಿ. ರೆನ್ ಎನ್ನುವ ಕುಟುಂಬ ಈ ಸಾಹಸಕ್ಕೆ ಕೈ ಹಾಕಿ ಗೆದ್ದಿದೆ. ರೆನ್ ತೌಂಜಿಯಾ ಎನ್ನುವ ವ್ಯಕ್ತಿ ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಲು ಬರೊಬ್ಬರಿ ಎರಡು ವರ್ಷ ತೆಗೆದುಕೊಂಡಿದ್ದಾನಂತೆ ಅಷ್ಟೇ ಅಲ್ಲ ಚೀನಾದ ಶಿಷೆ ಪ್ರಾಂತ್ಯದ ಬೆಟ್ಟದ ಮೇಲೆ 500 ಜನರನ್ನು ಫೋಟೊಗೆ ನೆರೆವಾಗುವಂತೆ ನಿಲ್ಲಿಸಲು 30 ನಿಮಿಷ ತೆಗೆದುಕೊಂಡಿದ್ದಾನಂತೆ ನೋಡಿ.
ಅಷ್ಟೇ ಅಲ್ಲ ರೆನ್ ತೌಂಜಿಯ ಮುಂದಿನ ವರ್ಷಕ್ಕೆ ಮತ್ತೆ ಮಿಸ್ ಆದವರನ್ನೆಲ್ಲಾ ಸೇರಿಸಿ 1000 ಕುಟುಂಬಸ್ಥರ ಜೊತೆ ಪೋಟೋ ಶೂಟ್ ಮಾಡುವ ಪ್ಲಾನ್ ಮಾಡ್ಕೊಂಡಿದಾರಂತೆ..! ಸತ್ತಮೇಲೂ ನಮ್ಮ ನೆನಪುಗಳಿರಬೇಕು ಎಂದು ಏಳು ತಲೆಮಾರಿನವರನ್ನು ಸೇರಿಸಿ ಪೋಟೋ ಕ್ಲಿಕಿಸಿದ್ದಾರೆ.. ಈತನ ಸಾಧನೆಯನ್ನ ಮೆಚ್ಚಲೆ ಬೇಕು ಅಲ್ವಾ..
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಶಾಹಿದ್‍ರನ್ನು ಕೊಲ್ಲಲು ಬಯಸಿದ್ರು ಸಾನಿಯಾ ಯಾಕೆ ಗೊತ್ತಾ..?
ಪ್ರಥಮ್- ರಿಷಿಕಾ ಲಾಂಗ್ ಡ್ರೈವ್ ವೇಳೆ ಸ್ಮಾಲ್ ಆಕ್ಸಿಡೆಂಟ್..! ಮುಂದೇನಾಯ್ತು..?
ಆಡಿದ್ದು 72 ಬಾಲ್ ಗಳಿಸಿದ್ದು 300 ರನ್..! ಲಾರಿ ಚಾಲಕನ ಮಗನ ಬ್ಯಾಟಿಂಗ್ ಕಮಾಲ್..
ಈ ನಟನ ಪ್ರತಿ ತಿಂಗಳ ಖರ್ಚು 13.5 ಕೋಟಿ ಅಂತೆ
ನನ್ನನ್ನು ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ರು: ಪನ್ನೀರ್ ಸೆಲ್ವಂನ ಹೊಸ ಬಾಂಬ್..!