No menu items!
9.2 C
Munich
Friday, May 1, 2026

ಅವತ್ತಿನ ಸ್ಮಶಾನದಲ್ಲಿ ಇವತ್ತು ಕ್ರಿಕೆಟ್ ಕಲರವ…!

Must read

ಹಿಂದಿನ ಸ್ಮಶಾನ ಇಂದು ಕ್ರಿಕೆಟ್ ಮೈದಾನ..! ಅವತ್ತು ಶವಗಳಿಗಾಗಿ ಮೀಸಲಿದ್ದ ಜಾಗದಲ್ಲೀಗ ಕ್ರಿಕೆಟ್ ಕಲರವ..! ಪ್ರವಾಸಿ ಆಸ್ಟ್ರೇಲಿಯಾ ಮತ್ತು ಅತಿಥೇಯ ಭಾರತ ತಂಡದ ನಡುವಿನ ಎರಡನೇ ಟಿ20 ಸಮರಕ್ಕೆ ಈ ಇತಿಹಾಸದ ಸ್ಮಶಾನ ಸಾಕ್ಷಿಯಾಗಲಿದೆ..!
ಹೌದು, ಇವತ್ತು ವಿರಾಟ್ ಕೋಹ್ಲಿ ನಾಯಕತ್ವದ ಟೀಂ ಇಂಡಿಯಾ ಹಾಗೂ ಡೇವಿಡ್ ವಾರ್ನರ್ ಮುಂದಾಳತ್ವದ ಆಸ್ಟ್ರೇಲಿಯಾ ತಂಡಗಳ ನಡುವಿನ 3 ಪಂದ್ಯಗಳ ಟಿ-20 ಸರಣಿಯ 2ನೇ ಪಂದ್ಯಕ್ಕೆ ಗುವಾಹಟಿಯ ಬರ್ಸಪರ ಕ್ರೀಡಾಂಗಣ ಸಜ್ಜಾಗಿದೆ.


ನಿಮಗಿದು ಗೊತ್ತೇ..? 2012ಕ್ಕಿಂತ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದ ಜಾಗ ಸ್ಮಶಾನವಾಗಿತ್ತು..! ಅಸ್ಸಾಂ ಕ್ರಿಕೆಟ್ ಸಂಸ್ಥೆ ತನ್ನ ಒಡೆತನದ ಕ್ರೀಡಾಂಗಣವನ್ನು ಹೊಂದುವ ಉದ್ದೇಶದಿಂದ 2012ರಲ್ಲಿ ಸ್ಮಶಾನವಾಗಿದ್ದ ಪ್ರದೇಶವನ್ನು ಖರೀದಿಸಿ ಕ್ರೀಡಾಂಗಣ ನಿರ್ಮಿಸಿತು. ಇವತ್ತು ಈ ಕ್ರೀಡಾಂಗಣದ ಭಾರತದಲ್ಲಿಯೇ ಅತ್ಯಂತ ದೊಡ್ಡ ಡ್ರೆಸಿಂಗ್ ರೂಂ ಹೊಂದಿರೋ ಕ್ರೀಡಾಂಗಣ ಎಂಬ ಖ್ಯಾತಿಗೆ ಪಾತ್ರವಾಗಿದೆ.


ಇಂದು ಭಾರತ-ಆಸೀಸ್ ನಡುವೆ ನಡೆಯುವ ಪಂದ್ಯ ಈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಈಗಾಗಲೇ ಮೊದಲ ಟಿ-20 ಪಂದ್ಯವನ್ನು ಗೆದ್ದಿರುವ ಭಾರತ ಗೆಲುವಿನ ಅಭಿಯಾನ ಮುಂದುವರೆಸುವ ಉತ್ಸಾಹದಲ್ಲಿದೆ. ಭಾರತಕ್ಕೆ ಬಂದಲ್ಲಿಂದ ಕೇವಲ ಒಂದು ಪಂದ್ಯದ ಗೆಲುವಿಗೆ ತೃಪ್ತಿಪಟ್ಟಿರುವ ಆಸೀಸ್ ಈ ಪಂದ್ಯವನ್ನು ಗೆಲ್ಲಲೇ ಬೇಕೆಂಬ ಹಠದಲ್ಲಿದೆ. ಯಾರಿಗೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಕಾದುನೋಡ್ಬೇಕು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article