ಹಾಲು ಕುಡಿಯದ ಮಗುವಿಗೆ ಎಂಥಾ ಶಿಕ್ಷೆ..!!!? ಮಗು ಕಾಣೆಯಾಗುವ ಮುನ್ನ.

Date:

ಅಯ್ಯೋ ದೇವ್ರೆ ಎಂಥೆಂಥಾ ಭೂಪ ಮಹಾಶಯರು ಇರ್ತಾರೆ..? ಮಕ್ಕಳಿಗೆ ಸ್ವಲ್ಪ ಬೈಬೇಕು ನಿಜ, ನೋವಾಗದಂತೆ ಒಂದೆರಡು ಏಟ್ ಬೇಕಾದ್ರೂ ಹೊಡೀಲಿ…! ಆದ್ರೆ, ಮಗು ಹಾಲು ಕುಡೀಲಿಲ್ಲ ಅಂತ ಯಾವಾನಾದ್ರು ರಾತ್ರಿಯೇ ಮಗುವನ್ನು ಮನೆಯಿಂದ ಹೊರಗೆ ಹಾಕ್ತಾರ..? ಇಂಥಾ ಜನ ಕೂಡ ಇದ್ದಾರೆ ಸ್ವಾಮಿ..! ಮಾಡೋದ್ ಮಾಡ್ಕೊಂಡು ಈಗ ಮಗು ಕಾಣೆಯಾಗಿದೆ ಅಂತ ಬಾಯ್ ಬಾಯ್ ಬಡ್ಕಂಡು ಪೊಲೀಸರಿಗೆ ಕಂಪ್ಲೆಂಟ್ ಕೊಟ್ಟಿದ್ದಾನೆ ಒಬ್ಬ ಪುಣ್ಯಾತ್ಮ..!
ಆ ಮಗುನಾ ನೋಡಿದ್ರೆ ತುಂಬಾ ಖುಷಿ ಆಗುತ್ತೆ..! ಬೇಜಾರೆಲ್ಲಾ ಮರೆತು ಹೋಗುತ್ತೆ..! ಅಷ್ಟೊಂದು ಮುದ್ದು ಮುದ್ದಾಗಿದೆ ಆ 3 ವರ್ಷದ ಮಗು ಶೆರಿನ್..!


ಕಾಣೆಯಾಗಿರೋ ಶೆರಿನ್ ಹುಟ್ಟಿದ್ದು ಭಾರತದಲ್ಲಿ..! ಅಮೇರಿಕಾಕ್ಕೆ ಬರುವ ಮೊದ್ಲು ಅಪೌಷ್ಠಿಕತೆಯಿಂದ ಬಳಲ್ತಾ ಇದ್ಲಂತೆ..! ಮ್ಯಾಥ್ಯೂಸ್ ಫ್ಯಾಮಿಲಿ ಈಕೆಯನ್ನು ದತ್ತು ಪಡೆದಿದ್ದರಂತೆ..!
ಟೆಕ್ಸಾಸ್‍ನ ಸಬ್ ಅರ್ಬನ್ ಡಲ್ಲಾಸ್ ಈ ಮಗು ಮೊನ್ನೆ ಹಾಲು ಕುಡೀಲಿಲ್ಲಂತೆ. ಅದಕ್ಕೆ ಅಪ್ಪ ವೆಸ್ಲೀ ಮ್ಯಾಥ್ಯೂಸ್ (37 ವರ್ಷ) ಮಗುನಾ ರಾತ್ರಿ ವೇಳೆ ಮನೆಯ ಹಿಂದಿನ ಕಾಲುದಾರೀಲಿ ನಿಲ್ಲುವಂತೆ ಶಿಕ್ಷೆ ಕೊಟ್ಟಿದ್ರು..!
ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಹೀಗೆ ಮಗುವನ್ನು ಮನೆ ಆಚೆ ಕಳುಹಿಸಿದ ಮ್ಯಾಥ್ಯೂಸ್ 15 ನಿಮಿಷಗಳ ಬಳಿಕ ನೋಡಿದಾಗ ಅವಳು ಅಲ್ಲಿ ಇರಲಿಲ್ಲವಂತೆ..! ಇದೀಗ ರಿಚರ್ಡ್‍ಸನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..!

Share post:

Subscribe

spot_imgspot_img

Popular

More like this
Related

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ ಬೆಂಗಳೂರು:...

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ!

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ! ಗರ್ಭಾವಸ್ಥೆಯಲ್ಲಿ ಮಹಿಳೆ ಅನುಭವಿಸುವ...

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ ನವದೆಹಲಿ:...

ನೈಋತ್ಯ ರೈಲ್ವೆಗೆ ₹7,748 ಕೋಟಿ ಅನುದಾನ: 2009–14ಕ್ಕೆ ಹೋಲಿಸಿದರೆ 9 ಪಟ್ಟು ಹೆಚ್ಚಳ – ಅಶ್ವಿನಿ ವೈಷ್ಣವ್

ನೈಋತ್ಯ ರೈಲ್ವೆಗೆ ₹7,748 ಕೋಟಿ ಅನುದಾನ: 2009–14ಕ್ಕೆ ಹೋಲಿಸಿದರೆ 9 ಪಟ್ಟು...