ನವದೆಹಲಿ : ಲಿಂಗ ಪರಿವರ್ತನೆ ಮಾಡ್ಕೊಂಡು ಕೆಲ್ಸ ಕಳ್ಕೊಂಡ ನಾವಿಕನ ಸ್ಟೋರಿ ಇದು..! ಅವ್ರ ಹೆಸರು ಮನೀಷ್ ಗಿರಿ ಅಂತ. ವಿಶಾಖಪಟ್ಟಣದಲ್ಲಿ ನೌಕ ಸೇವೆಗೆ ನಿಯೋಜನೆಗೊಂಡಿದ್ರು..! ಇವ್ರು ಪುರುಷ ಅಂಥ ಕೆಲ್ಸಕ್ಕೆ ಸೇರಿದ್ದ ಇವ್ರು ಮಹಿಳೆಯಾಗಿ ಪರಿವರ್ತನೆ ಹೊಂದಿದ ತಪ್ಪಿಗೆ ಕೆಲ್ಸ ಕಳ್ಕೊಂಡಿದ್ದಾರೆ..!
ಆಗಸ್ಟ್‍ನಲ್ಲಿ ರಜೆಯಲ್ಲಿದ್ದಾಗ ಹೇಳ್ದೆ ಕೇಳ್ದೆ ಲಿಂಗಪರಿವರ್ತನೆ ಚಿಕಿತ್ಸೆಗೆ ಒಳಗಾಗಿ ಗಿರಿ ಸಬಿಯಾಗಿ ಮಾರ್ಪಡಾಗಿದ್ರು..! ಹಿರಿಯ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿಕೊಟ್ಟಿರ್ಲಿಲ್ಲ..! ಈಗ ಗಿರಿಯವರನ್ನು ಕೆಲ್ಸದಿಂದ ತೆಗೆದುಹಾಕಿದ್ದಾರೆ..! ಇದು ತೃತೀಯ ಲಿಂಗಿಗಳಿಗೆ ಮಾಡ್ತಿರೋ ತಾರತಮ್ಯ ಅಂತ ಗಿರಿ ಕೋರ್ಟ್ ಮೆಟ್ಟಿಲೇರಿದ್ದಾರೆ..!
ಭಾರತೀಯ ನೌಕೆಯಲ್ಲಿ ನಾವಿಕನಾಗಿ ಸೇರುವಾಗ ಇದ್ದ ನೇಮಕಾತಿ ನಿಯಮ ಹಾಗೂ ಅರ್ಹತಾ ಮಾನದಂಡವನ್ನ ಉಲ್ಲಂಘಿಸಿ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದಾರೆ..!