ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ , ರಿಯಲ್ ಸ್ಟಾರ್ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತಿತರ ಸ್ಟಾರ್ ನಟರು ಪೊಲೀಸ್ ಪಾತ್ರದಲ್ಲಿ ಮಿಂಚಿರೋದು ಗೊತ್ತೇ ಇದೆ…! ಇದೀಗ ಈ ನಟರ ಹಾದಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಇದ್ದಾರೆ.
ಪವನ್ ಒಡಯರ್ ನಿರ್ದೇಶನದ ಗೂಗ್ಲಿಚಿತ್ರದಲ್ಲಿ ಖಾಕಿ ಧಿರಿಸಿನಲ್ಲಿ ಒಂದೆರಡು ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಯಶ್ ಈಗ ಸಿನಿಮಾವೊಂದರಲ್ಲಿ ಪೂರ್ಣಪ್ರಮಾಣದಲ್ಲಿ ಖಾಕಿ ತೊಟ್ಟು ಪೊಲೀಸ್ ಖದರ್ ತೋರಿಸಲು ರೆಡಿಯಾಗಿದ್ದಾರೆ.
ಸದ್ಯ ಉಗ್ರಂ ಖ್ಯಾತಿಯ ಪ್ರಶಾಂತ್ ನಿರ್ದೇಶನದ ಕೆಜಿಎಫ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಯಶ್ ಅವರ ಮುಂದಿನ ಚಿತ್ರವನ್ನು ಹರ್ಷ ಅವರು ನಿರ್ದೇಶಿಸಲಿದ್ದಾರೆ. ಹರ್ಷ ನಿರ್ದೇಶನದ ‘ರಾಣ’ ಚಿತ್ರದಲ್ಲಿ ಯಶ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.