ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) 2016ರಲ್ಲಿ ಬಿಸಿಸಿಐನಿಂದ ಮಾನ್ಯತೆ ಪಡೆದ ಕ್ರಿಕೆಟಿಗರನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಿದ್ದು, ಭಾರತದ ಕ್ರಿಕೆಟಿಗ ಉದ್ದೀಪನ ಮದ್ದು ಸೇವಿಸಿರೋ ಪ್ರಕರಣ ಬೆಳಕಿಗೆ ಬಂದಿದೆ. ಓರ್ವ ಆಟಗಾರ ಉದ್ದೀಪನ ಮದ್ದು ಸೇವೆ ಮಾಡಿರೋದು ತಿಳಿದು ಬಂದಿದೆ ಎಂದು ಹೇಳಿರೋ ವಾಡ ಆರೋಪಿ ಕ್ರಿಕೆಟಿಗನ ಹೆಸರು ಹೇಳಿಲ್ಲ.
ವಾಡಾದಿಂದ ಯಾವುದೇ ವರದಿ ಕೈ ಸೇರದೇ ಇರೋ ಕಾರಣ ಆ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ. ಹಿಂದೆ 2013ರ ಐಪಿಎಲ್ ಆವೃತ್ತಿ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಪ್ರದೀಪ್ ಸಾಂಗ್ವಾನ್ ಡೋಪಿಂಗ್ ಆರೋಪದಲ್ಲಿ ಸಿಕ್ಕಿಬಿದ್ದಿದ್ರು. ಇದೀಗ ಇನ್ನೊಬ್ಬ ಆಟಗಾರನ ಹೆಸರು ಕೇಳಿಬರ್ತಾ ಇರೋದು ನಿಜಕ್ಕೂ ಆಘಾತಕಾರಿ ಸಂಗತಿ. ಆತ ಯಾರು ಎನ್ನೋದು ಬಹಿರಂಗವಾಗಬೇಕಿದೆ.