ಕ್ರಿಕೆಟ್ ಲೋಕದ ದಿಗ್ಗಜರ ಸಮಾಗಮ..! ಮಾಜಿ ಕ್ರಿಕೆಟಿಗರ ಆಟವನ್ನು ಮತ್ತೆ ಸವಿಯುವ ಅವಕಾಶ ಅಭಿಮಾನಿಗಳ ಪಾಲಿಗೆ..! ಮತ್ತೆ ಸಚಿನ್-ವಾರ್ನ್ ಮುಖಾಮುಖಿ..! ಮತ್ತೆ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ಸಚಿನ್-ಸೌರವ್ ಆಡುವ ನಿರೀಕ್ಷೆ..! ಇಂಥಾ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿದೆ ಪ್ರಸಿದ್ಧ ಬೇಸ್ ಬಾಲ್ ಮೈದಾನ ನ್ಯೂಯಾರ್ಕ್ ನ `ಯಾಂಕಿ ಸ್ಟೇಡಿಯಂ’..! ಸಚಿನ್, ಸೌರವ್, ವಿವಿಎಸ್, ವೀರೂ, ವಾಸಿಂಅಕ್ರಂ, ಅಕ್ತರ್, ವಾರ್ನ್, ಸಂಗಕ್ಕಾರ, ಲಾರ, ಜಾಂಟಿ ರೋಡ್ಸ್, ಕಾಲಿಸ್ ಮೊದಲಾದ ಘಟಾನುಘಟಿಗಳು ಮತ್ತೆ ಕ್ರಿಕೆಟ್ ಆಡ್ತಾ ಇದ್ದಾರೆ..! ವಿಶ್ವಕಂಡ ಇಂಥಾ ಶ್ರೇಷ್ಠ ಆಟಗಾರರ ಆಟವನ್ನು ಮತ್ತೆ ನೋಡೋ ಭಾಗ್ಯ ನಮ್ಮಂಥಾ ಅಭಿಮಾನಿಗಳಿಗೆ ಸಾಧ್ಯವಾಗ್ತಾ ಇದೆ..! ಇದು ಸಾಧ್ಯವಾಗುತ್ತಿರುವುದು, ಶೇನ್ ವಾರ್ನ್ ಮತ್ತು ಸಚಿನ್ ತೆಂಡುಲ್ಕರ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಆಲ್ ಸ್ಟಾರ್ಸ್ ಟಿ20 ಸರಣಿಯಿಂದಾಗಿ..!
ಸಚಿನ್ ಮತ್ತು ವಾರ್ನ್ ಪರಿಶ್ರಮದಿಂದ ಅಮೇರಿಕಾದಲ್ಲಿ ಆಲ್ ಸ್ಟಾರ್ಸ್ ಕ್ರಿಕೆಟ್ ಕದನ ಶುರುವಾಗ್ತಾ ಇದೆ..! ಈ ಕ್ಷಣಕ್ಕೆ ನಾವೆಲ್ಲಾ ಅದೆಷ್ಟೋ ದಿನದಿಂದ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದೆವಲ್ಲಾ..! ಅಂತೂ ಇಂತೂ ಈ ಟೂರ್ನಿ ಶುರುವಾಗಿಯೇ ಬಿಡಲಿದೆ..! ಈ ಅಪರೂಪದ ಅವಿಸ್ಮರಣೀಯ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ..! ವಿಶ್ವಕ್ರಿಕೆಟಿನ ಘಟಾನುಘಟಿ ಮಾಜಿ ಆಟಗಾರರು ಇಂದೇ ತಮ್ಮ ಅಭಿಮಾನಿಗಳಿಗೆ ರಸದೌತಣ ಉಣಬಡಿಸಲಿದ್ದಾರೆ..! ಇನ್ನೊಂದು ವಿಶೇಷ ಅಂದ್ರೆ ಅಮೇರಿಕಾದಲ್ಲಿ ಇದೇ ಮೊದಲಬಾರಿಗೆ ಕ್ರಿಕೆಟ್ ಕಲರವ ಶುರುವಾಗಿದೆ.
ಈ ಟೂರ್ನಿಯಿಂದ ಅಮೇರಿಕದಲ್ಲೂ ಕ್ರಿಕೆಟ್ ಕ್ರೇಜ್ ನಿರ್ಮಾಣವಾಗುತ್ತದೋ ಇಲ್ಲವೋ ಗೊತ್ತಿಲ್ಲ..! ಆದರೆ, ಕ್ರಿಕೆಟ್ ಅಭಿಮಾನಿಗಳು ಮಾತ್ರ ಸಖತ್ ಸಂಭ್ರಮಿಸಲಿದ್ದಾರೆ..! ತಮ್ಮ ನೆಚ್ಚಿನ ಮಾಜಿ ಆಟಗಾರರ ಆಟವನ್ನು ನೋಡುವ ಭಾಗ್ಯ ಯಾರಿಗುಂಟು ಯಾರಿಗಿಲ್ಲಾ..! ಒಂದು ತಂಡದಲ್ಲಿ ಸಚಿನ್ ನಾಯಕರಾಗಿದ್ದರೆ, ಇನ್ನೊಂದಕ್ಕೆ ಶೇನ್ ವಾರ್ನ್ ಕಪ್ತಾನರು..! ಶೇನ್ ವಾರ್ನ್ ನಾಯಕತ್ವದ `ವಾರಿಯರ್ಸ್’ ಮತ್ತು ಮಾಸ್ಟರ್ ಬ್ಲಾಸ್ಟರ್ ನೇತೃತ್ವದ `ಬ್ಲಾಸ್ಟರ್ಸ್’ ತಂಡಗಳು ಇಂದು ಯಾಂಕಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ..! ವಾರ್ನ್ ಅವರ ಸ್ಪಿನ್ ಮೋಡಿಗೆ ನಮ್ಮ ಸಚಿನ್ ಅವರ ಬ್ಯಾಟ್ ಎಂಥಾ ಉತ್ತರ ಕೊಡುತ್ತೆ…! ಸಚಿನ್ ವಾರ್ನ್ ಮೋಡಿಗೆ ಹೇಗೆ ಬ್ಯಾಟ್ ಬೀಸ್ತಾರೆ..! ಅನ್ನೋ ಕುತೂಹಲ ಪ್ರತಿಯೊಬ್ಬರಲ್ಲೂ ಇದ್ದೇ ಇದೆ..! ಸೌರವ್ ಗಂಗೂಲಿಯವರಿಂದ ಅತ್ಯುತ್ತಮ ಆಫ್ ಡ್ರೈವ್ ಗಳು ಬರುವ ನಿರೀಕ್ಷೆಯಲ್ಲಿ ಸ್ವತಃ ಸಚಿನ್ರೇ ಇದ್ದಾರೆ…! ಹೀಗಿರುವಾಗ ದಾದಾರ ಅಭಿಮಾನಿಗಳಿನ್ನೆಷ್ಟು ಕಾತುರದಿಂದ ನಾಳಿನ ಪಂದ್ಯಕ್ಕೆ ಕಾಯ್ತಾ ಇರಬಹುದು..! ನಮ್ಮ ಸೌರವ್ ಸಿಕ್ಸರ್, ಬೌಂಡರಿ ಸುರಿಮಳೆ ಸುರಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಲೇ ಬೇಕಾಗಿದೆ..! ಇನ್ನು ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿರುವ ಡ್ಯಾಶಿಂಗ್ ಓಪನರ್ ವೀರೂ ಕೂಡ ಸಚಿನ್ ನಾಯಕತ್ವದ ತಂಡದಲ್ಲೇ ಇದ್ದಾರೆ..! ಕಲಾತ್ಮಕ ಆಟಗಾರರಾದ ವಿವಿಎಸ್ ಲಕ್ಷ್ಮಣ್ ಕೂಡ ಸಚಿನ್ ಜೊತೆಯಲ್ಲಿ ಆಡ್ತಾ ಇದ್ದಾರೆ..! ಇವರಷ್ಟೇ ಅಲ್ಲ ಬ್ರಿಯಾನ್ ಲಾರ, ಮಹೇಲಾ ಜಯವರ್ಧನೆ, ಕಾರ್ಲ್ ಹೂಪರ್, ಮೋಹಿನ್ ಖಾನ್, ಮುತ್ತಯ್ಯ ಮುರುಳೀಧರನ್, ಗ್ಯಾಮ್ ಸ್ವ್ಯಾನ್, ಶಾನ್ ಪೊಲಾಕ್, ಯ್ಯಾಂಬ್ರೋಸ್, ಮೆಗ್ರಾತ್, ಕ್ಲೂಸನರ್, ಶೋಯಬ್ ಅಕ್ತರ್ ಸಚಿನ್ ನಾಯಕತ್ವದಡಿಯಲ್ಲಿ ಆಡ್ತಾ ಇದ್ದಾರೆ..! ಇನ್ನುಳಿದಂತೆ ವಾನ್ ಮುಂದಾಳತ್ವದ ತಂಡದಲ್ಲಿ ಭಾರತದ ವೇಗಿ ಅಜಿತ್ ಅಗರ್ಕರ್ ಇದ್ದಾರೆ. ಅದೇರೀತಿ ಹೇಡನ್, ವಾನ್, ರಿಕಿಪಾಂಟಿಂಗ್, ಜಾಂಟಿರೋಡ್ಸ್, ಕಾಲಿಸ್, ಸೈಮಂಡ್ಸ್, ಸಂಗಕ್ಕಾರ, ವಿಟೋರಿ, ಕರ್ಟ್ನಿ ವಾಲ್ಶ್, ವಾಸಿಂ ಅಕ್ರಂ, ಅಲಾನ್ ಡೊನಾಲ್ಡ್ ಇದ್ದಾರೆ.
ಒಟ್ಟು ಮೂರು ಟಿ20 ಪಂದ್ಯಗಳು ನಡೆಯಲಿದ್ದು ಮೊದಲನೇ ಪಂದ್ಯ ಇಂದು(ನವೆಂಬರ್7) ನ್ಯೂಯಾರ್ಕ್ ಯಾಂಕಿ ಬೇಸ್ ಬಾಲ್ ಮೈದಾನದಲ್ಲಿ ನಡೆಯಲಿದೆ..! ಎರಡನೇ ಪಂದ್ಯ 11ರಂದು ಚಿಕಾಗೋದಲ್ಲಿ, ಮೂರನೇ ಪಂದ್ಯ 14ರಂದು ಲಾಸ್ ಏಂಜೆಲೀಸ್ ನಲ್ಲಿ ನಡೆಯಲಿದೆ. ಈ ಅವಿಸ್ಮರಣೀಯಾ ಅಪರೂಪದ ಟಿ20 ಸರಣಿಯನ್ನು ತಪ್ಪದೇ ನೋಡೋಣ..! ಪುನಃ ಇಂಥಾ ಅಪೂರ್ವ ಅವಕಾಶ ಸಿಗುವುದು ಕಷ್ಟ..! ತಪ್ಪದೇ ನೋಡಿ.
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಇದು ನಮ್ಮ ಕನ್ನಡ…ಇವರು ನಮ್ಮ ಕನ್ನಡಿಗರು..! ಬೆಂಗಳೂರಿನ ಜನರಿಗೆ ಕಿರಿಕ್ ಕೀರ್ತಿ ಪ್ರಶ್ನೆಗಳು..!
ನಿಮಗೆ ಸ್ಟೇಜ್ ಫಿಯರ್ ಇದ್ಯಾ..? ಡೋಂಟ್ ವರಿ ಭಯದ ಮುಂದೆ ಜಯವಿದೆ..! ಈ ಸ್ಟೋರಿ ಓದಿ..!
ಬರಲಿದೆ `ಬಲೂನ್ ಇಂಟರ್ನೆಟ್..’! ಹೊಸ ಯೋಜನೆಯಲ್ಲಿ ಭಾರತ ಸರ್ಕಾರದ ಜೊತೆ ಕೈ ಜೋಡಿಸಿದ ಗೂಗಲ್..!
ಚೋಟಾ ಟೀಚರ್ ಬಂದ್ರು ದಾರಿ ಬಿಡಿ..! 11ರ ಪೋರ 125 ಗ್ರಾಮಕ್ಕೆ ಅಕ್ಷರದಾನ ಮಾಡುತ್ತಿದ್ದಾನೆ..!
`ವಾಸ್ತುಪ್ರಕಾರ’ ಮನೆಮುಂದೆ ಮರಗಳು ಇರಬಾರದಂತೆ..! ವಾಸ್ತುಪ್ರಕಾರ ಮರಗಳನ್ನು ಸಾಯಿಸುತ್ತಿರೊ ಇವರೆಂಥಾ ಅವಿವೇಕಿಗಳು..!
ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!
ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು
17ರ ಪೋರ ಈಗ `ನಾಸ’ ಉದ್ಯೋಗಿ..! ಕ್ಯಾವೆಲಿನ್ ಗೆ ಇನ್ನೂ 17ವರ್ಷ ಈಗಲೇ ವಿಮಾನ ಹಾರಿಸಬಲ್ಲ..!