ಒಂದು ಕಾರು, 111 ದಿನ, 22,780 ಕಿ.ಮೀ ರಸ್ತೆ ಪ್ರಯಾಣ..! ಬೆಂಗಳೂರು ಫ್ಯಾಮಿಲಿಯ ಭರ್ಜರಿ ಟ್ರಿಪ್..!

1
88

ಆನಂದ್ (37), ಪುನಿತಾ (36), ಯಶ್ (12), ದುೃತಿ (8) ಎಂಬ ನಾಲ್ಕು ಸದಸ್ಯರಿದ್ದ ಆ ಕುಟುಂಬಕ್ಕೆ ದೇಶ ಸುತ್ತಬೇಕು ಎಂಬ ಆಸೆಯಿತ್ತು. ಅದರಲ್ಲೂ ಹೊಸದೊಂದು ಸಾಧನೆ ಮಾಡುವ ತುಡಿತವಿತ್ತು. ಆದ್ದರಿಂದ ಅವರು ಒಂದೇ ಕಾರಿನಲ್ಲಿ ಬೆಂಗಳೂರಿನಿಂದ ಫ್ರಾನ್ಸ್ ದೇಶದ ಪ್ಯಾರಿಸ್ ಗೆ ಟೂರ್ ಹೋಗಲು ನಿರ್ಧರಿಸಿದರು. ಆ ಕುಟುಂಬ 111 ದಿನಗಳಲ್ಲಿ ಆ ಟೂರ್ ಮುಗಿಸಿತ್ತು. ಆ ಟೂರ್ ಹೇಗಿತ್ತು, ಅದರ ವೈಶಿಷ್ಟ್ಯಗಳೇನು ನೀವೇ ನೋಡಿ.

ವಿಶ್ವಪರ್ಯಟನೆ ಮಾಡುತ್ತಾ ಫ್ರಾನ್ಸ್ ಗೆ ಹೋಗುವ ಇವರ ಆಸೆಯ ಮೊದಲ ಹಂತದಲ್ಲೇ ಆನಂದ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ತಮ್ಮ ಮಕ್ಕಳಿಗೆ ಹೆಚ್ಚು ದಿನದ ರಜೆ ಬೇಕು ಎಂದು ಶಾಲೆಗಳಿಂದ ಅನುಮತಿಯನ್ನೂ ಪಡೆದುಕೊಂಡರು. ನಂತರ ಭಾರತ>ನೇಪಾಳ>ಚೀನಾ>ಕಿರ್ಗಿಸ್ತಾನ್>ಉಜ್ಬೆಕಿಸ್ತಾನ್>ತುರ್ಕಮೆನಿಸ್ತಾನ್>ಇರಾನ್>ಟರ್ಕಿ>ಇಟಲಿ>ಸ್ವಿಟ್ಜರ್ ಲ್ಯಾಂಡ್>ಸ್ಪೇನ್>ಫ್ರಾನ್ಸ್ ಈ ರೀತಿ ಹೋಗಬೇಕು ಎಂಬುದು ಅವರ ನೀಲನಕ್ಷೆಯಾಗಿತ್ತು. ಏಪ್ರಿಲ್ 8 2015ರಂದು ಆರಂಭವಾಗಿದ್ದೇ ಅವರನ ಕನಸಿನ ಯಾತ್ರೆ.
ಬೆಂಗಳೂರಿನ ಈ ಕುಟುಂಬದ ಕನಸಿನ ಯಾತ್ರೆ ನಿರೀಕ್ಷೆಗಿಂತ ಅದ್ಭುತವಾಗಿತ್ತು. ಚೀನಾದ ಮರಳು ದಿನ್ನೆಗಳು, ತುರ್ಕಮೆನಿಸ್ತಾನದ ಡೋರ್ ಟು ಹೆಲ್, ಕಿರ್ಗಿಸ್ತಾನದ ಅದ್ಭುತ ಹುಲ್ಲುಗಾವಲು, ಇರಾನ್ ನ ಅದ್ಭುತ ಮಸೀದಿಗಳು, ಸಸ್ಯಾಹಾರಿ ಊಟಗಳು, ಗ್ರೀಸ್ ನ ಕ್ರಿಸ್ಟಲ್ ಸಮುದ್ರವನ್ನು ಆ ಕುಟುಂಬ ಕಣ್ತುಂಬಿಕೊಂಡಿತು. ಆದರೆ ಈ ಕುಟುಂಬದ ಜರ್ನಿಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಏಕೆಂದರೆ ನೇಪಾಳ ತಲುಪಿದಾಗ ಭೀಕರ ಭೂಕಂಪ ಸಂಭವಿಸಿ ಐದು ದಿನಗಳ ಕಾಲ ಆತಂಕದ ಮಧ್ಯದಲ್ಲೇ ಜೀವಿಸಿವಂತಾಗಿತ್ತು. ಅದರ ಮಧ್ಯೆ ಮಕ್ಕಳಿಗೆ ಚಿಕ್ಕಪುಟ್ಟ ಆರೋಗ್ಯದ ಸಮಸ್ಯೆಗಳು, ಆಯಾ ದೇಶಗಳ ಪೊಲೀಸರು, ಸೈನಿಕರ ಕಾಟ ಬಿಟ್ಟರೆ ಮತ್ತಿನ್ಯಾವ ಸಮಸ್ಯೆಯೂ ಇವರ ಹತ್ತಿರಕ್ಕೂ ಸುಳಿಯಲಿಲ್ಲ.
ಈ ಕುಟುಂಬದ ಸಾಹಸಯಾತ್ರೆ ರೋಡ್ ಟ್ರಿಪ್ ಹೊರಡಬೇಕು ಎಂದು ಬಯಸುವವರಿಗೆ ದಾರಿದೀಪದಂತಿದೆ. ಅಲ್ಲದೇ ಕೇವಲ ದೇಶವನ್ನಷ್ಟೇ ಸುತ್ತಿದರೆ ಸಾಲದು ಇಡೀ ವಿಶ್ವವನ್ನೇ ಸುತ್ತಿ ನೋಡಬೇಕು ಎಂಬುದನ್ನು ಈ ಕುಟುಂಬ ಸಾರಿ ಹೇಳಿದೆ ಅಲ್ಲವೇ..?

  • ರಾಜಶೇಖರ ಜೆ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಇದು ನಮ್ಮ ಕನ್ನಡ…ಇವರು ನಮ್ಮ ಕನ್ನಡಿಗರು..! ಬೆಂಗಳೂರಿನ ಜನರಿಗೆ ಕಿರಿಕ್ ಕೀರ್ತಿ ಪ್ರಶ್ನೆಗಳು..!

ಅವಳು ಸುಶ್ರಾವ್ಯ, ಇವನು ಸುಶಾಂತ್..! ಅವರ ಪ್ರೀತಿ ಕುರುಡಲ್ಲ…! ಅವನು ನೂರು ಸಲ ಐ ಲವ್ ಯೂ ಅಂದ್ರೂ ಅವಳು ಏನೂ ಹೇಳಲಿಲ್ಲ..

ನಿಮಗೆ ಸ್ಟೇಜ್ ಫಿಯರ್ ಇದ್ಯಾ..? ಡೋಂಟ್ ವರಿ ಭಯದ ಮುಂದೆ ಜಯವಿದೆ..! ಈ ಸ್ಟೋರಿ ಓದಿ..!

ಬರಲಿದೆ `ಬಲೂನ್ ಇಂಟರ್ನೆಟ್..’! ಹೊಸ ಯೋಜನೆಯಲ್ಲಿ ಭಾರತ ಸರ್ಕಾರದ ಜೊತೆ ಕೈ ಜೋಡಿಸಿದ ಗೂಗಲ್..!

ದೇಶದ ಮೊದಲ `ಅಂಧರ ಸ್ನೇಹಿ’ ರೈಲ್ವೇ ನಿಲ್ದಾಣ..! ಮೈಸೂರು ರೈಲ್ವೇ ನಿಲ್ದಾಣದಲ್ಲೀಗ ಬ್ರೈಲ್ ಲಿಪಿಯಲ್ಲಿ ರೈಲ್ವೇ ವೇಳಾಪಟ್ಟಿ..!

ನಮ್ ಟೈಮು ಸರಿಇಲ್ಲ ಅಂತಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ…?! ಕನ್ನಡದ ಹುಡುಗರು ಮಾಡಿದ ಈ ಕಿರುಚಿತ್ರ ನೋಡಿ ಗೊತ್ತಾಗುತ್ತೆ..!

ಸ್ಮೋಕಿಂಗ್ ಈಸ್ ಇಂಜ್ಯೂರಿಯಸ್ ಟು ಹೆಲ್ತ್, ಹಾರ್ಟ್ ಅಂಡ್ ಫ್ಯಾಮಿಲಿ..! ಧೂಮಪಾನ ತ್ಯಜಿಸಿದ 20 ನಿಮಿಷದಿಂದಲೇ ಹಂತಹಂತವಾಗಿ ಮೊದಲಿನಂತೆಯೇ ಆಗ್ತೀರಿ..!

ಚೋಟಾ ಟೀಚರ್ ಬಂದ್ರು ದಾರಿ ಬಿಡಿ..! 11ರ ಪೋರ 125 ಗ್ರಾಮಕ್ಕೆ ಅಕ್ಷರದಾನ ಮಾಡುತ್ತಿದ್ದಾನೆ..!

`ವಾಸ್ತುಪ್ರಕಾರ’ ಮನೆಮುಂದೆ ಮರಗಳು ಇರಬಾರದಂತೆ..! ವಾಸ್ತುಪ್ರಕಾರ ಮರಗಳನ್ನು ಸಾಯಿಸುತ್ತಿರೊ ಇವರೆಂಥಾ ಅವಿವೇಕಿಗಳು..!

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

17ರ ಪೋರ ಈಗ `ನಾಸ’ ಉದ್ಯೋಗಿ..! ಕ್ಯಾವೆಲಿನ್ ಗೆ ಇನ್ನೂ 17ವರ್ಷ ಈಗಲೇ ವಿಮಾನ ಹಾರಿಸಬಲ್ಲ..!

1 COMMENT

LEAVE A REPLY

Please enter your comment!
Please enter your name here