1 ರೂಪಾಯಿ ನೋಟಿನ ಬೆಲೆ 99 ರೂಪಾಯಿ..! ಆನ್ ಲೈನ್ ತಾಣದಲ್ಲಿ ಮಾರಾಟಕ್ಕಿದೆ ನೋಟು

admin
2 Min Read

ನಮ್ಮ ಮಂದಿ ಆನ್ ಲೈನ್ ಮಾರಾಟ ತಾಣದಲ್ಲಿ ಸಿಗುವ ಯಾವುದೇ ವಸ್ತುವನ್ನೂ ಬಿಡುವುದಿಲ್ಲ ಅಂತಾರೆ..! ಆದ್ದರಿಂದ ಮೊಬೈಲ್ ನಿಂದ ಹಿಡಿದು ತರಕಾರಿಯವೆಗೂ ಎಲ್ಲಾ ವಸ್ತುಗಳೂ ಆನ್ ಲೈನ್ ಮಾರಾಟ ತಾಣಗಳಲ್ಲಿ ಸಿಗುತ್ತಿವೆ. ಆದರೆ ಈಗ ಅದಕ್ಕೆ ಹೊಸ ಸೇರ್ಪಡೆಯಾಗಿದೆ. ಅದೇನಪ್ಪಾ ಅಂದರೆ ಭಾರತೀಯ ನೋಟುಗಳು..! ಅದರಲ್ಲೂ ಒಂದು ರೂಪಾಯಿ ನೋಟಿಗೆ ಇನ್ನಿಲ್ಲದ ಬೇಡಿಕೆ ವ್ಯಕ್ತವಾಗಿದೆ. ಆದ್ದರಿಂದ ಅದರ ಬೆಲೆ ಸುಮಾರು 100 ಪಟ್ಟು ಹೆಚ್ಚಾಗಿದೆ.
ಯೆಸ್.. ಒಂದು ರೂಪಾಯಿ ಮುಖಬೆಲೆಯ ನೋಟನ್ನು ಖರೀದಿಸಲು 99 ರೂಪಾಯಿ ನೀಡಬೇಕಂತೆ. ಅದೂ ಕೂಡಾ ಆರ್ ಬಿ ಐನ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಮುದ್ರಿಸಿರುವ ಒಂದು ರೂಪಾಯಿ ನೋಟನ್ನು ಇ-ಬೇ ಸೇರಿದಂತೆ ಅಂತರ್ಜಾಲ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಒಂದು ರೂಪಾಯಿಯ ನೋಟನ್ನು ಖರೀದಿಸಲು 49 ರೂಪಾಯಿ ನೀಡಬೇಕು. ಅಲ್ಲದೇ ಕೊರಿಯರ್ ಶುಲ್ಕವೂ ಸೇರಿ ಬರೋಬ್ಬರಿ 100 ರೂಪಾಯಿ ಖರ್ಚಾಗುತ್ತದೆ. 1,200 ರೂಪಾಯಿಗೆ ಒಂದು ರೂಪಾಯಿ ಮುಖಬೆಲೆಯ 100 ನೋಟುಗಳನ್ನು ಮಾರಾಟ ಮಾಡಲಾಗುತ್ತಿದೆ.
ಅದರಲ್ಲೂ ಇತ್ತೀಚೆಗೆ 1935ರಲ್ಲಿ ಮುದ್ರಣಗೊಂಡಿದ್ದ 1 ರೂಪಾಯಿ ಮುಖ ಬೆಲೆಯ ನೋಟಿನ ಬೆಲೆಯನ್ನು 7 ಲಕ್ಷಕ್ಕೆ ನಿಗದಿಗೊಳಿಸಲಾಗಿತ್ತು. ಆದರೂ ಆ ನೋಟಿಗೆ ಭಾರೀ ಬೇಡಿಕೆ ವ್ಯಕ್ತವಾಗಿತ್ತು. ಏಕೆಂದರೆ ನೋಟು ಸಂಗ್ರಹಿಸುವ ಹವ್ಯಾಸ ಹೊಂದಿರುವವರು ಈ ನೋಟು ತಮ್ಮ ಬಳಿ ಇರಲೇಬೇಕು ಎಂದು ಮುಗಿಬೀಳುತ್ತಾರೆ ಎಂದು ಆ ಆನ್ ಲೈನ್ ಮಾರಾಟ ತಾಣ ಇಬೇ ಐಡಿಯಾ ಮಾಡಿತ್ತು. ಆದರೆ ಎಷ್ಟು ಜನ ಈ ನೋಟಿನತ್ತ ಆಕರ್ಷಿತರಾದರೋ ಇಬೇ ಗೇ ಗೊತ್ತು. ಇನ್ನು 1949ರ ನೋಟಿಗೆ 6,000 ರೂಪಾಯಿ ಮತ್ತು 1957, 1964ರ ನೋಟಿಗಳಿಗೂ ತುಸು ಹೆಚ್ಚೇ ಬೆಲೆ ನಿಗದಿ ಮಾಡಲಾಗಿತ್ತು.
ನಮ್ಮ ದೇಶದ ಜನರು ಯಾವುದೇ ಆಕರ್ಷಕ ಹಾಗೂ ತಮ್ಮ ಬಳಿ ಇರಲೇಬೇಕು ಎಂದು ಬಯಸುವ ವಸ್ತುಗಳನ್ನು ಬಿಡುವಿದೇ ಇಲ್ಲ. ಅದಕ್ಕೆ ಉದಾಹರಣೆ ಎಂಬಂತೆ 1 ರೂಪಾಯಿ ನೋಟು ನಮ್ಮ ಮುಂದಿದೆ.

  • ರಾಜಶೇಖರ ಜೆ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಬೆಂಗಳೂರಿನ ಜನ ಮಲ್ಟಿಪ್ಲೆಕ್ಸ್ ಗಳಲ್ಲಿ ಬಕ್ರಾ ಆಗ್ತಿದೀರಿ..! ಯಾಕ್ರೀ ಮಾಮೂಲಿಗಿಂತ ಜಾಸ್ತಿ ದುಡ್ಡು ಕೊಡಬೇಕು…? – ಕಿರಿಕ್ ಕೀರ್ತಿ ಪ್ರಶ್ನೆ..!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!

ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!

ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!

ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!

ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

Share This Article
Leave a Comment