ರಾತ್ರಿ ಬೆಳಗಾಗುವುದರಲ್ಲಿ ಬೆಳೆಯಬೇಕು. ತಕ್ಷಣವೇ ತಾನು ಜನಪ್ರಿಯತೆಯನ್ನು ಪಡೆಯಬೇಕೆಂದರೆ ಆಗುವುದಿಲ್ಲ. ಸತತ ಪರಿಶ್ರಮ ಮತ್ತು ತಾಳ್ಮೆಯಿಂದ ಮಾತ್ರ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ. ತಾಳ್ಮೆಯೇ ಯಶಸ್ಸಿನ ಮೂಲ ಎಂದು ಹೇಳುತ್ತಾರೆ ಪಬ್ಲಿಕ್ ಟಿವಿಯ ನಿರೂಪಕ, ವರದಿಗಾರ ಮಾರುತೇಶ್ ಹುಣಸನಹಳ್ಳಿ.
ಇದು ಮಾರುತೇಶ್ ಅವರು ಹೇಳೋ ವೇದಾಂತವಲ್ಲ…! ಅವರ ಅನುಭವದ ಮಾತು. ತಾಳ್ಮೆ ಮತ್ತು ಪರಿಶ್ರಮಕ್ಕೆ ಒಬ್ಬ ವ್ಯಕ್ತಿಯನ್ನು ತುಂಬಾ ಎತ್ತರಕ್ಕೆ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ಮಾರುತೇಶ್ ಹುಣಸನಹಳ್ಳಿ ಅವರೇ ಸಾಕ್ಷಿ.
ಇವತ್ತು ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು ಮಾರುತೇಶ್ ಅವರದ್ದು. ಇಂದಿವರು ಈ ಮಟ್ಟದಲ್ಲಿದ್ದಾರೆಂದರೆ ಇವರು ಅನುಭವಿಸಿದ ನೋವು, ಸೋಲು, ಕಷ್ಟಗಳೇ ಕಾರಣ. ಬಾಲ್ಯದಿಂದಲೂ ಇವರು ನಡೆದಿದ್ದು ಕಲ್ಲು-ಮುಳ್ಳಿನ ಹಾದಿಯಲ್ಲಿ.
ಚಿಕ್ಕಮಗಳೂರು ಜಿಲ್ಲೆಯ ಹುಣಸನಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದವರು ಮಾರುತೇಶ್. ತಂದೆ ತಿಮ್ಮಣ್ಣ, ತಾಯಿ ಹನುಮಕ್ಕ. ಅಣ್ಣ ಬಸವರಾಜ್, ವೃತ್ತಿಯಲ್ಲಿ ಉಪನ್ಯಾಸಕರು. ದಿ.ಅಂಬಿಕ. ಪ್ರೀತಿಸಿ ಕೈ ಹಿಡಿದ ಬಾಳಸಂಗಾತಿ ವಿದ್ಯಾ. ಮಗಳು ದ್ವಿತಿ ಚಾನಸ್ಯ.
ಮಾರುತೇಶ್ ಅವರು ಪ್ರಾಥಮಿಕ ಶಿಕ್ಷಣವನ್ನು ಹುಣಸಹಳ್ಳಿಯಲ್ಲಿ, ಪ್ರೌಢಶಿಕ್ಷಣವನ್ನು ಲಕ್ಕವಳ್ಳಿಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಪಡೀತಾರೆ. ಪಿಯುಸಿಯಲ್ಲಿ ಮಾಡಿದ್ದು ಜೆಒಸಿ ಎಂಬ ವೃತ್ತಿಪರ ಕೋರ್ಸ್ ಅನ್ನು. ಇದು ನಂತರದಲ್ಲಿ ಕ್ಲೋಸ್ ಆಗಿದೆ.
ಅಪ್ಪ ಬಡ ರೈತರು. ಕಷ್ಟಪಟ್ಟು ಸಾಲ ಮಾಡಿ ಓದಿಸಿದ್ರು. ಇವರ ವಿದ್ಯಾಭ್ಯಾಸಕ್ಕೆಂದು ಅಣ್ಣ ಬಸವರಾಜ್ ಕೂಡ ಎಸ್‍ಎಸ್‍ಎಲ್‍ಸಿ ಆದ್ಮೇಲೆ ಓದು ನಿಲ್ಲಿಸಿ ಕೆಲಸಕ್ಕೆ ಹೋಗಲಾರಂಭಿಸಿದ್ರು. ಇವರ ಪಿಯುಸಿ ಮುಗಿದ ಬಳಿಕ ಅಣ್ಣ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದ್ರು.
ಪಿಯುಸಿ ಬಳಿಕ ವಿದ್ಯಾಭ್ಯಾಸವನ್ನು ನಿಲ್ಲಿಸಿದ ಮಾರುತೇಶ್ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೋರಿಯಾಗ್ರಫರ್ ಆಗಿ ಕೆಲಸ ಮಾಡಿದ್ರು. ಇದಕ್ಕು ಮುನ್ನವೇ ಅಂದರೆ 7ನೇ ತರಗತಿಯಿಂದಲೇ ಪಾರ್ಟ್ ಟೈಮ್ ಕೆಲಸ ಮಾಡ್ತಿದ್ರು. 30 ರೂ ದಿನಗೂಲಿಗೆ ದುಡಿದಿದ್ದರು ಬಾಲಕ ಮಾರುತೇಶ್…!
ವಿದ್ಯಾರ್ಥಿ ದೆಸೆಯಲ್ಲಿ ಕೆಲಸ ಮಾಡಿದ್ದಾರೆ. ಗಾರೆ ಕೆಲಸಕ್ಕೂ ಹೋಗಿದ್ದಾರೆ. ಭಾನುವಾರ, ಬೇಸಿಗೆ ರಜಾದಿನಗಳಲ್ಲಿ ಸ್ನೇಹಿತರೆಲ್ಲಾ ಆಟ ಆಡ್ತಿದ್ರೆ ಮಾರುತೇಶ್ ಕೆಲಸಕ್ಕೆ ಹೋಗುತ್ತಿದ್ದರು…! ಪಿಜಿ ಓದುವಾಗ ಕುವೆಂಪು ವಿವಿಯಲ್ಲೇ ಕನ್ಸ್ಟ್ರಕ್ಷನ್ ಕೆಲಸ ನಡೀತಿತ್ತು. ಅಲ್ಲೂ ಕೆಲಸ ಮಾಡಿದ್ದರು.
ಈ ಕಷ್ಟಗಳು ಸಾಲದು ಎಂಬಂತೆ ತಂದೆ ಅನಾರೋಗ್ಯಕ್ಕೆ ತುತ್ತಾದರು. ಕಿಡ್ನಿ ಸಮಸ್ಯೆ, ಹೃದಯದ ತೊಂದರೆಗಳಿಂದ ಬಳಲಿದರು. ಆ ದಿನಗಳಲ್ಲಿ ಸಿಕ್ಕಾಪಟ್ಟೆ ಖರ್ಚಾಯಿತು. ಇಂಥಾ ಕಷ್ಟದ ಪರಿಸ್ಥಿತಿಯಲ್ಲಿಯೂ ಇವರು ಓದುವ ಆಸಕ್ತಿಯನ್ನು ಕಳೆದುಕೊಳ್ಳಲಿಲ್ಲ. ತಂದೆಯ ಆರೋಗ್ಯ ಮತ್ತು ವಿದ್ಯಾಭ್ಯಾಸ ಎರಡರ ಕಡೆಗೂ ಗಮನ ನೀಡಿದರು. ತಂದೆ ಗುಣಮುಖರಾದರು.
ಇಂಜಿನಿಯರಿಂಗ್ ಮಾಡಬೇಕೆಂಬ ಆಸೆ ಇತ್ತು. ಬಡತನದ ಜೊತೆಗೆ ತಂದೆಯ ಅನಾರೋಗ್ಯದ ಸಮಸ್ಯೆಯಿಂದ ಇಂಜಿನಿಯರಿಂಗ್ ಗೆ ಹೋಗಲು ಸಾಧ್ಯವಾಗಲಿಲ್ಲ.
ಪಿಯುಸಿ ಆದಮೇಲೆ ಒಂದು ವರ್ಷದ ಅಂತರದ ಬಳಿಕ ಮಾರುತೇಶ್ ಅವರಿಗೆ ಪದವಿ ಮಾಡಬೇಕೆಂದೆನಿಸಿತು. ವಾಣಿಜ್ಯಶಾಸ್ತ್ರದ ಗಂಧಗಾಳಿ ಗೊತ್ತಿರದೇ ಇದ್ದರೂ ಶಂಕರಘಟ್ಟದ ರಂಭಾಪುರಿ ಕಾಲೇಜಿನಲ್ಲಿ ಬಿಕಾಂ ಪದವಿಗೆ ಸೇರಿದ್ರು. ಮೊದಲ ಸೆಮಿಸ್ಟರ್ ಫೇಲ್ ಆದ್ರು…! ಆದ್ರೆ, ಅಂತಿಮ ಸೆಮಿಸ್ಟರ್ ನಲ್ಲಿ ಇವರೇ ಫಸ್ಟ್…!
ಶಿವು (ಕೀರ್ತಿ ಶಂಕರಘಟ್ಟ ಅವರ ತಮ್ಮ), ರಮ್ಯಾ, ಶಾಂತಕುಮಾರಿ ಮೊದಲಾ ಫ್ರೆಂಡ್ಸ್ ಗಳು ಸಿಕ್ಕರು. ಎಲ್ಲರೂ ಜೊತೆಯಾಗಿ ಓದಿದದ ದಿನಗಳನ್ನು, ಲೋಕೇಶ್ ಎಂಬುವವರು ವಿದ್ಯಾಭ್ಯಾಸಕ್ಕೆ ಮಾಡಿದ ಸಹಾಯವನ್ನು ಮಾರುತಿ ಸ್ಮರಿಸಿಕೊಳ್ತಾರೆ.
ಅಂತಿಮ ಸೆಮಿಸ್ಟರ್ ಪರೀಕ್ಷೆ ಮುಗಿದ ಮೇಲೆ ಮಾರುತಿ ದುಡಿಮೆಯ ಹಾದಿ ಹಿಡಿದಿದ್ರು. ರಿಸೆಲ್ಟ್ ಕೂಡ ತಲೆಯಲ್ಲಿರಲಿಲ್ಲ. ರಿಸೆಲ್ಟ್ ಬಂದಾಗ ಸ್ನೇಹಿತೆ ರಮ್ಯ ಕರೆಮಾಡಿ ‘ರಿಸೆಲ್ಟ್ ಬಂದಿದೆ, ನೀನು ಫಸ್ಟ್’ ಅಂದಾಗ ಮಾರುತಿ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
ಬಳಿಕ ರಮ್ಯಾ ಅವರು ಎಂಕಾಂ ಮಾಡೋಣ ಅಂದ್ರು. ಸರಿ ಅಂತ ಅಪ್ಲಿಕೇಶನ್ ಹಾಕಿದ್ರು. ಯಾವುದಕ್ಕೂ ಒಂದಿರಲಿ ಅಂತ ಜರ್ನಲಿಸಂಗೂ ಅಪ್ಲೇ ಮಾಡಿದ್ರು. ರಮ್ಯಾ ಅವರಿಗೆ ಕುವೆಂಪು ವಿವಿಯಲ್ಲಿ ಎಂಕಾಂಗೆ ಸೀಟ್ ಸಿಗಲಿಲ್ಲ. ಅವರು ಬೇರೆ ವಿವಿಗೆ ಹೋಗಬೇಕಾಯ್ತು. ಆದ್ದರಿಂದ ಮಾರುತೇಶ್ ಜರ್ನಲಿಸಂ ಅನ್ನೇ ಅಂತಿಮವಾಗಿ ಆಯ್ಕೆಮಾಡಿಕೊಂಡ್ರು. ಎಜುಕೇಷನ್ ಲೋನ್ ಮಾಡಿ ಓದಿದ್ರು.
ಆಗ ಕೀರ್ತಿ ಶಂಕರಘಟ್ಟ (ಕಿರಿಕ್ ಕೀರ್ತಿ) ಸುವರ್ಣ ನ್ಯೂಸ್ ನಲ್ಲಿದ್ದರು. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ನಂತರ ಮಾರುತೇಶ್ ಅವರಿಗೆ ಸುವರ್ಣದಲ್ಲಿ ಇಂಟರ್ನಿಶಿಪ್ ಮಾಡಲು ಅವರಕಾಶ ಮಾಡಿಕೊಟ್ರು.
ಇಂಟರ್ನಿಶಿಪ್ ಮುಗಿದ ಬಳಿಕ ಅಂದು ಸಂಸ್ಥೆಯ ಸಂಪಾದಕೀಯ ವಿಭಾಗದ ಮುಖ್ಯಸ್ಥರಾಗಿದ್ದ ಎಚ್.ಆರ್ ರಂಗನಾಥ್ ಅವರು ಉದ್ಯೋಗ ಕರುಣಿಸಿದ್ರು. 2011ರಲ್ಲಿ ಮಾರುತಿ ಅವರ ಮಾಧ್ಯಮ ಜರ್ನಿ ಆರಂಭವಾಯ್ತು.
ವರದಿಗಾರರಾಗಿ ಕೆಲಸ ಶುರುಮಾಡಿದ ಮಾರುತಿ ಅವರಿಗೆ ಮೆಟ್ರೋ ಬ್ಯೂರೋ ಮುಖ್ಯಸ್ಥರಾಗಿದ್ದ ಅವಿನಾಶ್ ಅವರು ಸಪೋರ್ಟ್ ಮಾಡಿದ್ರು. ಸುವರ್ಣದಲ್ಲಿ 11 ತಿಂಗಳು ಕೆಲಸ ಮಾಡಿದ್ರು. ಬಳಿಕ ರಂಗನಾಥ್ ಅವರು ಸುವರ್ಣ ಬಿಟ್ಟು ತನ್ನ ಕನಸಿನ ಪಬ್ಲಿಕ್ ಟಿವಿಯನ್ನು ಹುಟ್ಟಿಹಾಕಲು ಮುಂದಾದ್ರು. ಮಾರುತೇಶ್ ಅವರು ಕೂಡ ಸುವರ್ಣ ಬಿಟ್ಟು ರಂಗನಾಥ್ ಅವರ ಪಬ್ಲಿಕ್ ಟಿವಿಗೆ ಸೇರಿದ್ರು.
2012ರಲ್ಲಿ ಪಬ್ಲಿಕ್ ಟಿವಿ ಆರಂಭದ ದಿನಗಳಿಂದ ಇವತ್ತಿನವರೆಗೂ ಮಾರುತೇಶ್ ಪಬ್ಲಿಕ್ ಕುಟುಂಬದಲ್ಲಿದ್ದಾರೆ. ವರದಿಗಾರರಾಗಿದ್ದ ಮಾರುತೇಶ್ ಅವರನ್ನು ರಂಗನಾಥ್ ಅವರು ನಿರೂಪಕರನ್ನಾಗಿಯೂ ಮಾಡಿದರು. ಬದಲಾದ ಸನ್ನಿವೇಶಗಳಲ್ಲಿ ಹಿರಿಯ ನಿರೂಪಕರು ಸಂಸ್ಥೆಯನ್ನು ಬಿಟ್ಟಾಗ, ಪೂರ್ಣಪ್ರಮಾಣದ ನಿರೂಪಕರಾದ್ರು. ಜ್ಯೋತಿಷ್ಯ ಕಾರ್ಯಕ್ರಮ ಬಿಟ್ಟು ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಬಿಗ್ ಬುಲೆಟಿನ್ ನಲ್ಲಿ ಕುಳಿತಿದ್ದು ಇವರಿಗೆ ಮರೆಯಲಾಗದ ನೆನಪು.
ಒಮ್ಮೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3.45ರವರೆಗೆ ಸತತವಾಗಿ ನ್ಯೂಸ್ ಆ್ಯಂಕರಿಂಗ್, ಸಂದರ್ಶನ, ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ ಮಾರುತೇಶ್.
ರಂಗನಾಥ್ ಸರ್ ನೀಡುವ ಪ್ರೋತ್ಸಾಹವನ್ನು ಆ್ಯಂಕರ್ ಚೀಫ್ ಆಗಿದ್ದ ರಾಧ ಹಿರೇಗೌಡರು ನೀಡಿದ ಮಾರ್ಗದರ್ಶನವನ್ನು ಸದಾ ನೆನೆಯುತ್ತಾರೆ ಮಾರುತೇಶ್. 2016ರ ನವೆಂಬರ್ ನಲ್ಲಿ ಸಿಂಗಾಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದು ತುಂಬಾ ಖುಷಿ ಕೊಟ್ಟಿದೆ ಎನ್ನುತ್ತಾರೆ.
ಬೆಂಗೂರಿಂದ ಚೆನ್ನೈಗೆ ಮೊಟ್ಟ ಮೊದಲ ಬಾರಿಗೆ ಹಾರ್ಟ್ ಟ್ರಾನ್ಸ್ ಪ್ಲಾಂಟ್ ಮಾಡಿದಾಗ 2.30ಗಂಟೆಗಳ ಕಾಲ ಲೈವ್ ಮಾಡಿದ್ದು ಸಹ ಇವರಿಗೆ ಸ್ಮರಣೀಯ.
ಅಕ್ಕ ಅಂಬಿಕ ಅವರು ವಿಧಿವಶರಾಗಿದ್ದು ಹಾಗೂ ಪಿಜಿಯಲ್ಲಿರುವಾಗ ಫ್ರೆಂಡ್ ಕಾವ್ಯಶ್ರೀ ಕ್ಯಾನ್ಸರ್ ಗೆ ಬಲಿಯಾಗಿದ್ದು ತುಂಬಾ ದುಃಖ ತಂದ ಘಟನೆಗಳು ಎಂದು ಮಾರುತೇಶ್ ಭಾವುಕರಾಗುತ್ತಾರೆ.
‘ಪತ್ನಿ ಹೆಚ್ಚು ಪ್ರೋತ್ಸಾಹ ನೀಡ್ತಾರೆ. ಅದೇ ಖುಷಿ. ನನ್ನ ಕಷ್ಟ ಸುಖ ಎಲ್ಲದರಲ್ಲೂ ಆಕೆಯ ಪಾಲಿದೆ. ಸಹೋದ್ಯೋಗಿ ರಕ್ಷಾ ಕಟ್ಟೆಬೆಳಗುಳಿ ನನ್ನ ಅಕ್ಕನ ಸ್ಥಾನತುಂಬಿ ನಂಗೆ ಧೈರ್ಯ ಮತ್ತು ಮಾರ್ಗದರ್ಶನ ನೀಡ್ತಿದ್ದಾರೆ’ ಎಂದು ಹೇಳುತ್ತಾರೆ ಮಾರುತೇಶ್.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್
49) 28ಡಿಸೆಂಬರ್ 2017 : ಸುಗುಣ
50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ
ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.
51) 01ಜನವರಿ 2018 :ಐಶ್ವರ್ಯ ಎ.ಎನ್
52) 02ಜನವರಿ 2018 :ಶ್ರೀಧರ್ ಆರ್
53) 03ಜನವರಿ 2018 : ದಿವ್ಯಶ್ರೀ
54) 04ಜನವರಿ 2018 : ಮಂಜುಳ ಮೂರ್ತಿ
55) 05ಜನವರಿ 2018 : ಅಭಿಷೇಕ್ ರಾಮಪ್ಪ
56) 06ಜನವರಿ 2018 : ರೋಹಿಣಿ ಅಡಿಗ
57) 07ಜನವರಿ 2018 :ಮಾದೇಶ್ ಆನೇಕಲ್
58) 08ಜನವರಿ 2018 :ಶ್ರುತಿ ಕಿತ್ತೂರು
59) 09ಜನವರಿ 2018 : ಕೆ.ಸಿ ಶಿವರಾಂ
ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
60) 11ಜನವರಿ 2018 : ಮಾರುತೇಶ್