No menu items!
9.3 C
Munich
Wednesday, April 29, 2026

ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕಿಯರು…?!

Must read

1ಸಾವಿರ ರೂ ಕದ್ದಿದ್ದಾರೆ ಎಂದು ಆರೋಪಿಸಿ ಶಿಕ್ಷಕಿಯರು ಇಬ್ಬರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿರೋ ಆರೋಪ ಕೇಳಿ ಬಂದಿದೆ.
ಜನವರಿ 8ರಂದು ಮಧ್ಯಪ್ರದೇಶದ ಅಲಿರಾಜ್ಪುರ್ ಜಿಲ್ಲೆಯ ಜೋಬಾತ್ ನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದಾರೆ. 11ನೇ ತರಗತಿ ಓದುತ್ತಿರೋ ಈ ವಿದ್ಯಾರ್ಥಿನಿಯರ ಮೇಲೆ ಸಹಪಾಠಿಗಳಿಂದಲೇ ಹಣ ಕಳವು ಆರೋಪ ಮಾಡಲಾಗಿತ್ತು. ಬಳಿಕ ಶಿಕ್ಷಕಿಯರು ಆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿದ್ದಾರೆ ಎನ್ನಲಾಗಿದ್ದು, ಇದನ್ನು ಮುಖ್ಯೋಪದ್ಯಾಯರು ತಳ್ಳಿಹಾಕಿದ್ದಾರೆ. ಹಣ ಕದ್ದ ಆರೋಪದ ಮೇಲೆ ವಿಚಾರಣೆ ನಡೆಸಲಾಗಿತ್ತೇ ವಿನಃ ಈ ರೀತಿ ಯಾರೂ ನಡೆದುಕೊಂಡಿಲ್ಲ ಅನ್ನೋದು ಮುಖ್ಯೋಪದ್ಯಾಯರ ಮಾತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article