No menu items!
14.4 C
Munich
Saturday, June 13, 2026

ಮಸೀದಿ ಮಂದಿರದ ಬಾಗಿಲಲಿ

Must read

ಮಸೀದಿ ಮಂದಿರದ ಬಾಗಿಲಲಿ

ಎತ್ತ ನೋಡಲಿ ಜಗದ ಕತ್ತಲು
ಸುತ್ತಲೂ ಸುತ್ತುತಿಹುದು
ತಿಲಕವಿಟ್ಟವನು ಮಾತಿನ ತಲವಾರು ಹಿಡಿದಿಹನು
ಮೀಸೆ ಇಲ್ಲದ ಗಡ್ಡವು
ಹೊಸ ಪಕ್ಷದ ಪೋಷಾಕು ತೊಟ್ಟಿಹುದು
ಏನಿದೇನಿದು.. ರಣರಂಗವೋ – ಸಂಗದಿ ಸಂಧಿಸಿಹ
ಗುಲಾಮಗಿರಿಯ ಹೋರಾಟವೋ ನಾನರಿಯೆ.
ಚೂರಿ ಇರಿದವ ರಂಗನಾದರೆ
ತುಪಾಕಿ ಹಿಡಿದವ ರಹೀಮನೆಂಬ
ಪಟ್ಟ ಕಟ್ಟಿಹರು ಓ ಕಾವ್ಯದತ್ತ
ಎತ್ತ ಸಾಗುತಿದೆ ಈ ಜಗದ ಚಿತ್ತ
ಶ್ರೀಮಂತನ ಮನೆಯ ಗುದ್ದಲಿ ಪೂಜೆಗೆ
ರಾಮ-ರಹೀಮರ ಬಲಿ ಕೊಡಬೇಕೇ..?
ಹೋರಾಡುವ ಸಮಚಿತ್ತದಿ
ಮಸೀದಿಯ-ದೇಗುಲದ ರಕ್ತ ಒಂದೇ
ಸಂಯುತ್ತವಾಗಿ ಸಮಸ್ಯೆಯ ಶಿಖರವ
ಪುಡಿಗೈಯುವ ವಿಶ್ವಮಾನವತೆಯ
ಮಂತ್ರವ ಬಿಗಿದಪ್ಪುವ.⭐
✍?ದತ್ತರಾಜ್ ಪಡುಕೋಣೆ✍?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article