ಬದುಕ ಬೆಳಗು
ಬದುಕು ಬದುಕಿನೊಳು ಬದುಕುವಾಸೆ
ಬದುಕೇ ಬರಡಾದ ಬದುಕಿನೊಳು
ಬದುಕನರಸುವ ಬದುಕ ಬದಲಾಯಿಸಿ
ಬೆಸದ ಬದುಕಲಿ ಬದಲಿ ಬದುಕುವ
ಬದುಕು ಬಿದಿರಿನಂಚಿನ ಬಿರುಕು
ಬದುಕಲಿ ಬಂದಿಳಿದು ಬಿರುಗಾಳಿಯ
ಬೀಸುವ ಬದುಕ ಬದುಕಿಸಲಾರದೆ
ಬೆಚ್ಚಿತಿಂದು ಬದುಕು
ಕಾವ್ಯದತ್ತನ ಬದುಕಲಿ ಬಸಿದ
ಬೇಸಿಗೆಯು ಭಾಸ್ಕರನ ಬಣ್ಣಿಸಿ
ಬರಡಾದಾಗ ಬದುಕೇ ಬದಲಾಗದೇ
ಬಿರುಸಿನಿಂದಲಿ ಬಂಡೆಯಂತಾಯಿತು ಬದುಕು⭐
✍?ದತ್ತರಾಜ್ ಪಡುಕೋಣೆ✍?