ಸಾಧನೆಯ ಹಸಿವಿಗಾಗಿ ಉಪವಾಸವಿದ್ದ ನಿರೂಪಕಿ…!

1
621

ಬೆಂಗಳೂರಿಗೆ ಬಂದ ಆರಂಭದ ದಿನಗಳವು. ಮಾಧ್ಯಮ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲ್ಲೇ ಬೇಕಾದ ಅನಿವಾರ್ಯತೆ ಇತ್ತು. ಒಪ್ಪತ್ತಿನ ಊಟಕ್ಕೂ ಹಣವಿಲ್ಲದ ಪರಿಸ್ಥಿತಿ…! ಆದರೆ, ಸಾಧನೆಯ ಹಸಿವಿನ ಮುಂದೆ ಹೊಟ್ಟೆಯ ಹಸಿವು ಮೌನವಾಗಿತ್ತು…! ಏನಾದರೂ ಮಾಡಿ ಇಲ್ಲಿ ಉಳಿದುಕೊಳ್ಳಲೇ ಬೇಕು, ಇದ್ದು ಜಯಿಸಲೇ ಬೇಕೆಂದು ಪಣತೊಟ್ಟರು. ಸಾಧನೆಯ ಹಸಿವಿಗಾಗಿ ಉಪವಾಸವಿದ್ದರು…!


ಈ ನಿರೂಪಕಿ ಯಾರು…? ಕನಿಷ್ಟ 15-20 ವರ್ಷ ಅನುಭವವಿರೋ ನಿರೂಪಕಿಯ ಬಗ್ಗೆ ಹೇಳ್ತಿದ್ದೀನಿ ಅನ್ಕೊಂಡ್ರ…? ಖಂಡಿತಾ ಅಲ್ಲ, ಇದು ಯುವ ನಿರೂಪಕಿಯ ಸಾಧನೆಯ ಹಾದಿಯ ಚಿತ್ರಣ. ಕೇವಲ 3 ವರ್ಷದ ಹಿಂದಿನ ಕಥೆ…! ಅಂದ್ರೆ, ಮೂರೇ ಮೂರು ವರ್ಷ ಎಕ್ಸ್‍ಪಿರಿಯನ್ಸ್ ಇರೋ ಚಂದದ ನಿರೂಪಕಿಯ ಲೈಫ್ ಸ್ಟೋರಿ.


ಇವರು ಪ್ರಜಾ ಟಿವಿಯ ನಿರೂಪಕಿ, ಮಲೆನಾಡ ಬೆಡಗಿ ನೀತಿ ಶ್ರೀನಿವಾಸ್. ಈ ಸ್ಪುರದ್ರುಪಿ ನಿರೂಪಕಿ ಬೆಳೆದು ಬಂದ ಹಾದಿ, ಎದುರಿಸಿದ ಕಷ್ಟಗಳ ಬಗ್ಗೆ ಒಮ್ಮೆ ಹಿಂತಿರುಗಿ ನೋಡಿದರೆ ಅದೆಂಥವರ ಕಣ್ಣಾಲಿಗಳು ತೇವಗೊಳ್ಳುತ್ತವೆ….! ಕೆನ್ನೆಯ ಮೇಲೆ ಜಾರುತ್ತಿರೋ ಕಣ್ಣೀರನ್ನು ಒರೆಸಿಕೊಂಡು ಹೇಳ್ತೀರಿ, ‘ನೀತಿ ರಿಯಲ್ಲಿ ಯೂ ಆರ್ ಗ್ರೇಟ್…’! ಅಂತ.


ನಿಜ, ನೀತಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರದ ಬಡ ರೈತ ಕುಟಂಬದಲ್ಲಿ ಹುಟ್ಟಿದ ಹೆಣ್ಣುಮಗಳು. ಅಪ್ಪ ಶ್ರೀನಿವಾಸ್, ಅಮ್ಮ ಪ್ರೇಮ. ಅಕ್ಕ ನವ್ಯ, ಬಾವ ಸಚಿನ್.


ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಎನ್.ಆರ್‍ಪುರದ ದೀಪ್ತಿ ಶಾಲೆಯಲ್ಲಿ ಪೂರೈಸಿ, ತದನಂತರ ಕೊಪ್ಪ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ರು. ಎಸ್‍ಎಸ್‍ಎಲ್‍ಸಿ ಮುಗಿದ ತರುವಾಯ ಮನೆಯಲ್ಲಿ ಸೈನ್ಸ್ ತೆಗೆದುಕೊಳ್ಳೋಕೆ ಹೇಳಿದ್ರು. ಆದ್ರೆ ನೀತಿ ಅದು ಕಷ್ಟ ಆಗುತ್ತೆ ಅಂತ ಕಾಮರ್ಸ್ ಆಯ್ಕೆ ಮಾಡಿಕೊಂಡ್ರು.


ಪಿಯುಸಿ ಆದ್ಮೇಲೆ ಬಿಸಿಎ ಮಾಡುವಂತೆ ಮನೆಯವರು ಹಾಗೂ ಸಂಬಂಧಿಕರು ಸಲಹೆ ನೀಡಿದ್ರು. ಸರಿ ಎಂದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಹೋದ್ರು. ಅದಾಗಲೇ ಸೀಟ್ ಫುಲ್ ಆಗಿತ್ತು…ಹಾಗಾಗಿ ಬಿಸಿಎ ಮಾಡೋಕೆ ಆಗ್ಲಿಲ್ಲ.


ನಂತರ ಕಲಾವಿಭಾಗದತ್ತ ಮನಸ್ಸು ಮಾಡಿದ್ರು. ಆಟ್ರ್ಸ್ ಅಂದ್ರೆ ಕೆಲವರು ತಾತ್ಸಾರ ಮಾಡ್ತಾರೆ, ಏನ್ ಮಾಡೋದು ಎನ್ನುವ ಯೋಚನೆಯೂ ಬಂದಿತ್ತು. ಯಾರ್ ಏನ್ ಅನ್ಕೊಂಡ್ರು ಅನ್ಕೊಳ್ಲಿ ನಾನು ಆಟ್ರ್ಸ್ ತೆಗೆದುಕೊಳ್ತೀನಿ ಅಂತ ಡಿಸೈಡ್ ಮಾಡಿದ್ರು. ಅವಕಾಶವಿದ್ದುದು ‘ಎಚ್ ಕೆ ಜೆ’ (ಹಿಸ್ಟರಿ, ಕನ್ನಡ ಜರ್ನಲಿಸಂ) ಕಾಂಬಿನೇಷನ್ ಗೆ ಮಾತ್ರ…!


ನೀತಿ ಅವರಿಗೆ ಕನ್ನಡದಲ್ಲಿ ಆಸಕ್ತಿ ಇತ್ತು. ಹಾಗಾಗಿ ಎಚ್ ಕೆ ಜೆ ಗೆ ಜಾಯಿನ್ ಆದ್ರು. ಜರ್ನಲಿಸಂ ಬಗ್ಗೆ ಯಾವುದೇ ಕಲ್ಪನೆಗಳು ಇರ್ಲಿಲ್ಲ. ಜರ್ನಲಿಸಿಂನಲ್ಲಿ ಮುಂದುವರೆಯುತ್ತೇನೆಂದು ಕನಸು ಕಂಡಿರಲಿಲ್ಲ, ಗುರಿಯನ್ನೂ ಇಟ್ಟುಕೊಂಡಿರಲಿಲ್ಲ.


ಕನ್ನಡ ಸ್ನಾತಕೋತ್ತರ ಪದವಿ ಮಾಡಿ ಉಪನ್ಯಾಸಕಿ ಆಗ್ಬೇಕೆಂಬ ಆಸೆ ಇತ್ತು. ಆದ್ರೆ, ಡಿಗ್ರಿ ಮುಗಿಯುತ್ತಿದ್ದಂತೆ ತಂದೆಗೆ ಓದಿಸೋಕೆ ಕಷ್ಟ ಆಗುತ್ತೆ ಅಂತ ಕೆಲಸವನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದ್ರು. ಅದೂ ಮಾಧ್ಯಮದಲ್ಲೇ ಕೆಲಸ ಬೇಕೆಂತ ಅಂದುಕೊಂಡಿರಲಿಲ್ಲ. ಯಾವುದಾಯ್ತೋ ಆ ಕೆಲಸ ಅನ್ಕೊಂಡಿದ್ರು. ಜೊತೆಗೆ ಅಮ್ಮನನ್ನು ಕರೆದುಕೊಂಡು ಬಂದಿದ್ರು. ಬರುವಾಗ ತಂದಿದ್ದು ಪಕ್ಕದ ಮನೆಯಲ್ಲಿ ಬಾಡಿಗೆಗೆ ಇದ್ದ ಸುಕೇಶ್ ಎಂಬುವವರು ಕೊಟ್ಟಿದ್ದ 300 ರೂ ಗಳನ್ನು ಮಾತ್ರ…! ಅದು 2014 ನೇ ಇಸವಿ.

ಬೆಂಗಳೂರಿಗೆ ಬರುತ್ತಿದ್ದಂತೆ ಹೊಸದಾಗಿ ಆರಂಭವಾಗುತ್ತಿದ್ದ ಬಿಟಿವಿಗೆ ಇಂಟರ್ ವ್ಯೂಗೆ ಹೋದ್ರು. ಪಾಸೇನೋ ಆದ್ರು.. ಸಂಬಳ ಸಿಗುವ ಕೆಲಸ ಅದಾಗಿರಲಿಲ್ಲ…! ಟ್ರೈನಿಯಾಗಿ ಆಯ್ಕೆಯಾಗಿದ್ರು.


ಆಗಿನ್ನೂ ಡಿಗ್ರಿ ಮುಗಿಸಿದ್ದರಿಂದ ಸ್ವಲ್ಪ ದಿನ ತರಬೇತಿ ಪಡೆದರೆ ಮತ್ತೆ ಕೆಲಸ ಸಿಗುತ್ತೆಂದು ಟ್ರೈನಿಯಾಗಿ ಜಾಯಿನ್ ಆದ್ರು. ಇಂಟರ್ ವ್ಯೂ ನೀಡಿದ ಮರುದಿನವೇ ಕೆಲಸಕ್ಕೆ ಹಾಜರಾಗಬೇಕಿತ್ತು.


ಎಲ್ಲಿಗೆ ಹೋಗೋದು, ಎಲ್ಲಿ ಉಳಿದುಕೊಳ್ಳೋದು ಅಂತ ಗೊತ್ತಾಗಲಿಲ್ಲ. ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ ನಾರಾಯಣ ಗೌಡರ ಪರಿಚಯವಿತ್ತು. ಅವರು ತಮ್ಮ ಗಾಂಧಿನಗರದ ಆಫೀಸಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ರು.


ಅಲ್ಲಿಯೇ ಎಷ್ಟುದಿನ ಅಂತ ಇರೋಕೆ ಸಾಧ್ಯವಾಗುತ್ತೆ…? ‘ನೀನು ಪಿಜಿಯಲ್ಲಿರು ನಾನು ಊರಿಗೆ ಹೋಗಿ, ಹಣ ಹೊಂದಿಸಿ ಕಳುಹಿಸಿ ಕೊಡ್ತೀನಿ’ ಎಂದು ಊರಿಗೆ ಹೋದ್ರು.


ಮರಿಯಪ್ಪನ ಪಾಳ್ಯದ ಪಿಜಿಯೊಂದರಲ್ಲಿ ಉಳಿದುಕೊಂಡ್ರು. ಅಲ್ಲಿ ಸ್ಟೌವ್ ಇಟ್ಕೊಂಡು ತಾವೇ ಅಡುಗೆ ಮಾಡಿಕೊಳ್ಳಬೇಕಿತ್ತು…! ಹಣ ಇಲ್ಲದೇ ಇದ್ದಿದ್ದರಿಂದ ಎಷ್ಟೋ ದಿನ ಉಪವಾಸ ಇರುತ್ತಿದ್ದರು. ಒಮ್ಮೆ ಸತತ 3 ದಿನಗಳ ಕಾಲ ಊಟ-ತಿಂಡಿ ಇಲ್ಲದೆ ಕಾಲ ಕಳೆದಿದ್ದರು.
ಯಾವ ಬಸ್ಸಲ್ಲಿ ಆಫೀಸ್ ಕಡೆಗೆ ಹೋಗಬೇಕು ಅನ್ನೋದು ಗೊತ್ತಿರಲಿಲ್ಲ, ಜೊತೆಗೆ ಕೈಯಲ್ಲಿ ದುಡ್ಡೂ ಇರದ ಕಾರಣ ಮರಿಯಪ್ಪನ ಪಾಳ್ಯದಿಂದ ಬಿಟಿವಿ ಆಫೀಸ್ ಗೆ ನಡೆದುಕೊಂಡೇ ಹೋಗ್ತಿದ್ರು…!


ಮೊದಲೇ ಹೇಳಿರುವಂತೆ ಒಮ್ಮೆ ಸತತ ಮೂರು ದಿನ ಉಪವಾಸವಿದ್ರಲ್ಲಾ, 4ನೇ ದಿನ ಬಿಟಿವಿ ಉದ್ಯೋಗಿ ಹರೀಶ್ ಎಂಬುವವರು ನೀತಿಯನ್ನು ಗಮನಿಸಿ, ಈಕೆ ಊಟ ಮಾಡಿಲ್ಲ ಎನ್ನೋದನ್ನು ತಿಳಿದು, ಪಿಜಿಗೆ ಹೋಗುವಾಗ ಏನಾದ್ರು ತಿನ್ಕೊಂಡು ಹೋಗು ಅಂತ 100 ರೂ ಕೊಟ್ಟಿದ್ದರು…!


ಯಾರತ್ರನೂ 1ರೂ ತೆಗೆದುಕೊಳ್ಳದ ನೀತಿ ಅವತ್ತು ಹರೀಶ್ ಅವರು ಒತ್ತಾಯ ಮಾಡಿ ಕೊಟ್ಟ ದುಡ್ಡನ್ನು ತೆಗೆದುಕೊಂಡ್ರು. ಆದ್ರೆ ಅದರಲ್ಲಿ ಊಟ ಮಾಡಲಿಲ್ಲ…! ಮಾರ್ನಿಂಗ್ ಶಿಫ್ಟ್ ಬರೋಕೆ ಹೇಳಿದ್ರೆ, ಆಟೋದಲ್ಲಿ ಹೋಗೋಕೆ ಬೇಕಾಗಬಹುದು ಅಂತ ಹಾಗೇ ಇಟ್ಕೊಂಡಿದ್ದರು…!


ಹಾಗೋ ಹೀಗೋ ಮಾಡಿ 3 ತಿಂಗಳು ದಬ್ಬಿದ್ರು. ಬಳಿಕ ಬೆಂಗಳೂರು ನಮ್ಮಂತವರಿಗಲ್ಲ ಎಂದು ಊರಿನ ಕಡೆಗೆ ಮರಳಿದ್ರು. ಕೇವಲ 15 ದಿನಗಳಲ್ಲಿ ಪ್ರಜಾ ಟಿವಿಯಲ್ಲಿ ಅವಕಾಶ ಸಿಕ್ತು. ಕೆಲಸಕ್ಕೆ ಸೇರಿದ್ರು.
ಇಲ್ಲಿ ಇವರೇ ಹೇಳುವಂತೆ ಮುಖ್ಯಸ್ಥರಾದ ಮನೋಜ್, ಎಂ.ಆರ್ ಸುರೇಶ್, ಆನಂದ್, ಅವರು, ಅನುಭವಿ, ಹಿರಿಯ ಪತ್ರಕರ್ತ ಗಜಾನನ ಹೆಗ್ಡೆಯವರು, ನಿರೂಪಕಿ ಲಿಖಿತಾ ಗಿರೀಶ್ (ಈಗ ಟಿವಿ5ನಲ್ಲಿದ್ದಾರೆ) ಪ್ರೋತ್ಸಾಹ ನೀಡಿದ್ರು.

ಶೀತಲ್ ಶೆಟ್ಟಿ, ರೆಹಮಾನ್ ಹಾಸನ್ ಮೊದಲಾದ ನಿರೂಪಕರನ್ನು ಟಿವಿಯಲ್ಲಿ ನೋಡುವಾಗ ಇವರನ್ನು ನೋಡಬೇಕು, ಮಾತಾಡಿಸಬೇಕು ಎಂಬ ಆಸೆ ನೀತಿ ಅವರದ್ದಾಗಿತ್ತು.
ನೀತಿ ಬಿಟಿವಿಯಲ್ಲಿ ಟ್ರೈನಿಯಾಗಿದ್ದಾಗ ಶೀತಲ್ ಶೆಟ್ಟಿ ಬಿಟಿವಿಯಲ್ಲಿದ್ದರು. ಒಮ್ಮೆ ಆಫೀಸ್ ಗೆ ಹೋಗುವಾಗ ಶೀತಲ್ ನೀತಿಗೆ ಲಿಫ್ಟ್ ನಲ್ಲಿ ಸಿಕ್ಕರು. ಅವರನ್ನು ಮಾತನಾಡಿಸಿದಾಗ, ಶೀತಲ್ ಅವರೇ, ನೀನು ನೀತು ಅಲ್ವಾ…? ನಿನ್ನೂರು ಎನ್.ಆರ್ ಪುರ ಅಲ್ವಾ…? ನಿನ್ನ ಆಫೀಸಲ್ಲಿ ನೋಡಿದಾಗ ಬೇರೆಯವರಿಂದ ಕೇಳಿ ತಿಳಿದುಕೊಂಡಿದ್ದೀನಿ ಅಂದಾಗ ನೀತಿಗೆ ಆಶ್ಚರ್ಯ…!


ನೀತಿ, ‘ಮೇಡಂ ನೀವು ಸಾಗರದಲ್ಲಿ ಓದಿದ್ದು ಅಲ್ವಾ..? ಎಂದು ಶೀತಲ್ ಅವರನ್ನು ಕೇಳಿದಾಗ, ಶೀತಲ್, ‘ಹೌದು.. ಸಾಗರ ನನ್ನ ಅಜ್ಜಿ ಮನೆ. ನಾನು ಅಲ್ಲಿಯೇ ಓದಿದ್ದು ಅಂದ್ರು. ಆಗ, ನೀತು, ಮೇಡಂ ನಾನು ಓದಿದ್ದು ಶಿವಮೊಗ್ಗದಲ್ಲಿ ಅಂದಾಗ, ಶೀತಲ್ ಅವರು, ಸಾಗರ-ಶಿವಮೊಗ್ಗ ಎಲ್ಲಾ ಒಂದೇ ಆಯ್ತಲ್ಲಾ ಚಿನ್ನಾ…! ಚೆನ್ನಾಗಿ ಕೆಲಸ ಮಾಡು, ಒಳ್ಳೇದಾಗ್ಲಿ ಅಂತ ಹೇಳಿದ್ದರು. ಆಮೇಲೆ ಆಗಾಗ ಅವರೇ ನೀತಿಯನ್ನು ಮಾತಾಡಿಸ್ತಿದ್ರು. ಇದನ್ನು ತುಂಬಾ ಖುಷಿಯಿಂದ ಹೇಳಿಕೊಳ್ತಾರೆ ನೀತಿ.


ನೀತಿ ಅವರಿದ್ದ ಪಿಜಿ ಮಾಲೀಕರು ಹಾಗೂ ರೆಹಮಾನ್ ಹಾಸನ್ ಅವರಿದ್ದ ಮನೆಯ ಮಾಲೀಕರು ಒಬ್ಬರೇ ಆಗಿದ್ದರು. ಅವರು ರೆಹಮಾನ್ ಅವರತ್ರ ಮಾತಾಡಿ ನೀತಿಗೆ ಟಿವಿ9ನಲ್ಲಿ ಇಂಟರ್ ವ್ಯೂ ಅಟೆಂಡ್ ಮಾಡೋ ಅವಕಾಶ ಮಾಡಿಕೊಟ್ಟಿದ್ರು.
ನೀತಿ ಟಿವಿ9ಗೆ ಇಂಟರ್ ವ್ಯೂ ಗೆ ಹೋದಾಗ ಸ್ಕ್ರೀನ್ ಟೆಸ್ಟ್ ಟೈಮಲ್ಲಿ, ಸಮೀನಾ (ನಿರೂಪಕಿ, ರೆಹಮಾನ್ ಅವರ ಪತ್ನಿ) ಅವರ ಡ್ರೆಸ್ ಅನ್ನೇ ಕೊಡಲು ಮೇಕಪ್‍ಮನ್ ಗೆ ಹೇಳಿದ್ದರಂತೆ.


ಟಿವಿ9ನಲ್ಲಿ ಕೆಲಸ ಆಗದೇ ಇದ್ದಾಗ, ಬೆಜಾರಾಗಬೇಡ, ಮುಂದೆ ಯಾವತ್ತಾದ್ರು ಸಿಗುತ್ತೆ ಎಂದು ರೆಹಮಾನ್ ಅವರು ನೀತಿಗೆ ಶುಭಹಾರೈಸಿದ್ದರಂತೆ ಇದನ್ನು ನೀತು ಸ್ಮರಿಸುತ್ತಾರೆ.
ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿರೋ ಬಿಗ್‍ಬಾಸ್ ಸೀಸನ್ 5ರಲ್ಲಿ ನಟಿ ಸಂಯುಕ್ತಾ ಹೆಗಡೆ ಕಿರಿಕ್ ಮಾಡ್ಕೊಂಡು ಮನೆಯಿಂದ ಆಚೆ ಬಂದಾಗ ಸಂದರ್ಭದಲ್ಲಿ ನೀತಿ ‘ಪ್ರಜಾ’ ಪ್ರತಿನಿಧಿಯಾಗಿ ನಟ, ನಿರೂಪಕ ಸೀಸನ್ 4ರ ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದ ರೆಹಮಾನ್ ಅವರ ಸಂದರ್ಶನವನ್ನು ನೀತಿ ಮಾಡಿದ್ದರು…! ಇಂಟರ್ ವ್ಯೂ ಗೆ ಅವಕಾಶ ಮಾಡಿಕೊಟ್ಟಿದ್ದ ಸ್ಟಾರ್ ನಿರೂಪಕನ ಇಂಟರ್ ವ್ಯೂ ಮಾಡಿದ ಸಂತೋಷ ನೀತಿ ಅವರದ್ದು.


ನೀತಿ ಬರಗಾರ್ತಿ ಕೂಡ ಹೌದು. ಕಾಲೇಜು ದಿನಗಳಲ್ಲಿ ಇವರ ಸಾಕಷ್ಟು ಲೇಖನಗಳು ಪ್ರಕಟವಾಗಿವೆ. ‘ಕವನ ಸಂಕಲನಗಳು’ ಎಂಬ ಕೃತಿ ಕೂಡ ಪ್ರಕಟವಾಗಿದೆ. ‘ಚಾಲುಕ್ಯ ವಿಕ್ರಮಾಧಿತ್ಯ’, ‘ಕರುನಾಡ ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕೆಲಸಕ್ಕೆ ಸೇರಿದ ಮೊದ ಮೊದಲಲ್ಲಿ ತುಂಬಾ ತೆಳ್ಳಗಿದ್ದಾಳೆ. ನ್ಯೂಸ್ ಆ್ಯಂಕರ್ ಆಗೋಕೆ ಸಾಧ್ಯವಿಲ್ಲ. ವಾಯ್ಸ್ ನ್ಯೂಸ್‍ಗೆ ಹೊಂದಿಕೆ ಆಗಲ್ಲ ಅಂತ ಕೆಲವರು ಮನಸ್ಸಿಗೆ ನೋವಾಗುವಂತೆ ನಡೆದುಕೊಂಡಿದ್ದರು. ಇವತ್ತು ಅವರುಗಳಿಗೆ ಕಾಲವೇ ಉತ್ತರಿಸಿದೆ. ನೀತಿ ತನ್ನ ಸಾಮರ್ಥ್ಯ ಏನೆಂಬುದನ್ನು ಸಾಭೀತು ಪಡಿಸಿದ್ದಾರೆ.

ಸಿನಿಮಾ ಕಾರ್ಯಕ್ರಮಗಳು ಸೇರಿದಂತೆ ಎಲ್ಲಾ ರೀತಿಯ ಪ್ರೋಗ್ರಾಂಗಳನ್ನು ನಡೆಸಿಕೊಡುತ್ತಾರೆ. ಸ್ಕ್ರಿಪ್ಟ್ ಬರೀತಾರೆ, ಸೆಗ್ಮೆಂಟ್, ಪ್ಯಾಕೇಜ್ ರೆಡಿ ಮಾಡ್ತಾರೆ. ನೀತಿ ಗೆಲುವಿನ ಹಾದಿಯಲ್ಲಿ ಮುನ್ನುಗುತ್ತಿದ್ದಾರೆ…ಯಶಸ್ಸಿನ ಶಿಖರವನ್ನು ಏರಿಯೇ ಏರುತ್ತಾರೆ…ಇದರಲ್ಲಿ ಅನುಮಾನವೇ ಇಲ್ಲ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ

48) 27ಡಿಸೆಂಬರ್ 2017 :ವಾಣಿ ಕೌಶಿಕ್

49) 28ಡಿಸೆಂಬರ್ 2017 : ಸುಗುಣ

50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ

ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.

51) 01ಜನವರಿ 2018 :ಐಶ್ವರ್ಯ ಎ.ಎನ್

52) 02ಜನವರಿ 2018 :ಶ್ರೀಧರ್ ಆರ್

53) 03ಜನವರಿ 2018 : ದಿವ್ಯಶ್ರೀ

54) 04ಜನವರಿ 2018 : ಮಂಜುಳ ಮೂರ್ತಿ

55) 05ಜನವರಿ 2018 : ಅಭಿಷೇಕ್ ರಾಮಪ್ಪ

56) 06ಜನವರಿ 2018 : ರೋಹಿಣಿ ಅಡಿಗ

57) 07ಜನವರಿ 2018 :ಮಾದೇಶ್ ಆನೇಕಲ್

58) 08ಜನವರಿ 2018 :ಶ್ರುತಿ ಕಿತ್ತೂರು

59) 09ಜನವರಿ 2018 : ಕೆ.ಸಿ ಶಿವರಾಂ

ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

60)  11ಜನವರಿ 2018 : ಮಾರುತೇಶ್

61)  12ಜನವರಿ 2018 :ನೀತಿ ಶ್ರೀನಿವಾಸ್

1 COMMENT

LEAVE A REPLY

Please enter your comment!
Please enter your name here