ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಖ್ಯಾತಿಯ ನಟ ಚಂದ್ರಶೇಖರ್ ವಿಧಿವಶರಾಗಿದ್ದಾರೆ.
ಕೆನಡಾದಲ್ಲಿ ಚಂದ್ರಶೇಖರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನಮ್ಮ ಮಕ್ಕಳು ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಚಂದ್ರಶೇಖರ್ ಡಾ. ರಾಜ್ ಕುಮಾರ್ , ಡಾ.ವಿಷ್ಣುವರ್ಧನ್ ಮೊದಲಾದ ಮಹಾನ್ ನಟರ ಜೊತೆ ನಟಿಸಿದ್ದರು. ಡಾ. ರಾಜ್ ಅವರ ಜೊತೆ ಚಂದ್ರಶೇಖರ್ ‘ರಾಜ ನನ್ನ ರಾಜ’ ಸಿನಿಮಾದಲ್ಲಿ ನಟಿಸಿದ್ದರು.
‘ಪಡುವರಹಳ್ಳಿ ಪಾಂಡವರು’, ‘ಧರಣಿ ಮಂಡಲ’ ಚಂದ್ರಶೇಖರ್ ಅಭಿನಯದ ಪ್ರಮುಖಚಿತ್ರಗಳು. ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಚಂದ್ರಶೇಖರ್ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು.
ಪತ್ನಿ ಶೀಲಾ ಅವರು ಕೆನಡಾದಲ್ಲಿ ವಾಸವಿದ್ದು ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದಾರೆ. ಚಂದ್ರಶೇಖರ್ ಕಳೆದ 10ದಿನಗಳ ಹಿಂದೆ ಕೆನಡಾಕ್ಕೆ ಹೋಗಿದ್ದರು. ಪತ್ನಿ ಶೀಲಾ ಮತ್ತು ಮಗಳು ತಾನಿಯಾ ಅವರನ್ನು ಚಂದ್ರಶೇಖರ್ ಅಗಲಿದ್ದಾರೆ.