ಜ್ಯೋತಿಷ್ಯ ಪ್ರಕಾರ ಎಲ್ಲದಕ್ಕೂ ಒಂದೊಳ್ಳೆ ಸೂಕ್ತವಾದ ದಿನ ಅಂತ ನೋಡ್ತಾರೆ. ಅದೇ ರೀತಿ ಚಿನ್ನ ಖರೀದಿಗೂ ಈ ದಿನ ಸೂಕ್ತ ಎಂದಿದೆ. ದುಡಿದ ಹಣದಲ್ಲಿ ಲಕ್ಷ್ಮಿ ಸ್ವರೂಪದ ಚಿನ್ನಾಭರಣವನ್ನು ತರುವಾಗ ಸೂಕ್ತ ದಿನ, ಸಮಯ ಯಾವುದು ಅಂತ ತಿಳಿದುಕೊಳ್ಳುವ ಕುತೂಹಲ ಕೆಲವರಿಗಿರುತ್ತದೆ. ಅಂತಹ ಕುತೂಹಲ ನಿಮಗೂ ಇದ್ದಲ್ಲಿ ಮುಂದೆ ಓದಿ….
ಪುಷ್ಯ, ಮೃಗಶಿರಾ, ಅನುರಾಧ, ಶ್ರವಣ, ಶತಭೀಷಾ, ರೇವತಿ, ಅಶ್ವಿನಿ, ಪುನರ್ವಸು , ವಿಶಾಖ ನಕ್ಷತ್ರಗಳಲ್ಲಿ ನಿಮ್ಮ ತಾರಾನುಕೂಲಕ್ಕೆ ಸೂಕ್ತವಾದ ದಿನದಲ್ಲಿ ಚಿನ್ನ ಕೊಳ್ಳಬಹುದು. ಅದೇ ರೀತಿ ಶುಕ್ಲಪಕ್ಷದಲ್ಲಿ ಖರೀದಿಸೋದು ಉತ್ತಮ.
ಶನಿವಾರದಂದು ಚಿನ್ನದ ಆಭರಣ ಖರೀದುಸುವುದು ಸೂಕ್ತವಲ್ಲ. ಶನಿವಾರ ಖರೀದಿಸಿದರೆ ಪದೇ ಪದೇ ಅಡ ಇಡಬೇಕಾಗುತ್ತದೆ.