ಭಾರತ ಕಂಡ ಅತ್ಯುತ್ತಮ ನಟರಲ್ಲೊಬ್ಬರು ಎನಿಸಿಕೊಂಡಿರುವ ಸೂಪರ್ ಸ್ಟಾರ್ ರಜನಿಕಾಂತ್ ರವರು ಇತ್ತೀಚೆಗೆ 65ನೇ ವರ್ಷಕ್ಕೆ ಕಾಲಿಟ್ಟರು. ಆದರೆ ಚೆನ್ನೈ ನಗರ ಪ್ರವಾಹದಿಂದ ತೀವ್ರ ಹಾನಿಗೀಡಾಗಿದ್ದರಿಂದ ಅವರು ತಮ್ಮ ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳಲಿಲ್ಲ. ಅಲ್ಲದೇ ತಮ್ಮ ಅಭಿಮಾನಿಗಳಿಗೂ ಸಹ ತಮ್ಮ ಹುಟ್ಟು ಹಬ್ಬ ಆಚರಿಸದೇ, ಚೆನ್ನೈ ಪ್ರವಾಹದಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದು ಹೇಳಿ ಹೃದಯವಂತಿಕೆಯನ್ನು ಮೆರೆದರು. ಇದಷ್ಟೇ ಅಲ್ಲ. ಅವರ ಜೀವನ ಆಡಂಬರದಿಂದ ಕೂಡಿಲ್ಲ ಎಂಬುದಕ್ಕೆ ಹತ್ತಾರು ಉದಾಹರಣೆಗಳಿವೆ. ಅವರ ಗ್ಯಾರೇಜ್ ನಲ್ಲಿರುವ ಕಾರುಗಳ ಸಂಗ್ರಹವೇ ಅದಕ್ಕೆ ಉದಾಹರಣೆ.
ಯೆಸ್.. ರಜನಿಕಾಂತ್ ರವರು ಯಾವುದೇ ಅದ್ಧೂರಿ ಕಾರುಗಳನ್ನು ಖರೀದಿಸಿಲ್ಲ. ಬದಲಿಗೆ ತಮ್ಮ ಬಳಿ ಇರುವ ಕಪ್ಪು ಬಣ್ಣದ ಫೀಯೆಟ್ ಪ್ರೀಮಿಯರ್ ಪದ್ಮಿನಿಯನ್ನೇ ಇಂದಿಗೂ ಅತಿ ಹೆಚ್ಚಾಗಿ ಇಷ್ಟಪಡುತ್ತಾರೆ..! ಅವರ ಬಳಿ ಇನ್ನೂ ಕೆಲವು ಕಾರುಗಳಿದ್ದರೂ ಕೂಡಾ ಅವರು ಈ ಪ್ರೀಮಿಯರ್ ಪದ್ಮಿನಿ ಕಾರನ್ನೇ ಇಷ್ಟಪಡುತ್ತಾರೆ. ಇನ್ನು ಟೊಯೋಟಾ ಕಂಪನಿಯ ಪ್ರಸಿದ್ಧ ಇನೋವಾ ಕಾರ್ ಕೂಡಾ ರಜಕಿಕಾಂತ್ ರವರಿಗೆ ತುಂಬಾ ಇಷ್ಟ.
ರಾ-1 ಚಿತಕ್ಕೆ ಅತಿಥಿ ಪಾತ್ರಕ್ಕೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ರವರು ರಜನಿಕಾಂತ್ ರಿಗೆ ಬಿಎಂಡಬ್ಲ್ಯೂ 7 ಸಿರೀಜ್ ಕಾರನ್ನು ಗಿಫ್ಟ್ ನೀಡಿದ್ದರು. ಆದರೆ ಅದನ್ನು ಸ್ವೀಕರಿಸದ ರಜನಿಕಾಂತ್, ತಮಗೊಂದು ಬಂದಿದ್ದ ದೊಡ್ಡ ಗಿಫ್ಟ್ ನ್ನು ನಯವಾಗಿಯೇ ತಿರಸ್ಕರಿಸಿದ್ದರು.
ತಮ್ಮ ಸಿಂಪಲ್ ಜೀವನಶೈಲಿಯಿಂದ ಪ್ರಸಿದ್ಧರಾಗಿರುವ ರಜನಿಕಾಂತ್ ತಾವು ವಾಸಿಸುವ ಮನೆಯನ್ನು ತಮ್ಮ ವಾಹನಗಳಿಗೆ ಸರಿಹೊಂದುವಂತೆ ನಿಮರ್ಿಸಿದ್ದಾರೆ. ಅದಲ್ಲೂ ಅವರ ಬಳಿ ಫಿಯೆಟ್, ಇನ್ನೋವಾ, ಟವೇರಾ, ಹೋಂಡಾ ಸಿವಿಕ್ ಮತ್ತು ಭಾರತದ ಪ್ರಸಿದ್ಧ ಕಾರುಗಳಲ್ಲೊಂದಾದ ಅಂಬಾಸಿಡರ್ ನ್ನು ತಮ್ಮ ಗ್ಯಾರೇಜ್ ನಲ್ಲಿ ನಿಲ್ಲಿಸಿಕೊಂಡಿದ್ದಾರೆ.
ಅದು 1980.. ಆಗ ತಾನೆ ರಜನಿಕಾಂತ್ ರವರು ಪ್ರೀಮಿಯರ್ ಪದ್ಮಿನಿ ಕಾರನ್ನು ಖರೀದಿಸಿದ್ದರು. ಅಲ್ಲದೇ ಕಂಪನಿಯು ರಜನಿಕಾಂತ್ ರವರಿಗಾಗಿಯೇ ವಿಶೇಷ ಫೀಚರ್ ಗಳನ್ನು ನೀಡಿತ್ತು. ಅದರಲ್ಲೂ ರಜನಿಕಾಂತ್ ರವರು ಕಾರು ಖರೀದಿಸಿದ ಕೂಡಲೆ ಪ್ರೀಮಿಯರ್ ಪದ್ಮಿನಿ ಕಾರು ಭರ್ಜರಿಯಾಗಿ ಮಾರಾಟಗೊಂಡಿತ್ತು. ಅಲ್ಲದೇ ಕೆಲವು ಚಿತ್ರಗಳಲ್ಲಿ ರಜನಿಕಾಂತ್ ರವರು ಈ ಕಾರನ್ನು ಬಳಸಿದ್ದು ವಿಶೇಷ..! ಇನ್ನೊಂದು ವಿಶೇಷವೇನೆಂದರೆ `ರಜನಿಕಾಂತ್ ತಮ್ಮ ಪ್ರೀಮಿಯರ್ ಪದ್ಮಿನಿ ಕಾರನ್ನು ಯಾರಿಗೂ ಮುಟ್ಟಲೂ ಕೂಡಾ ಬಿಡುವುದಿಲ್ಲ’ ಎಂದು ಬಿಗ್ ಬಿ ಅಮಿತಾಬ್ ಬಚ್ಚನ್ ರವರು ಹೇಳಿದ್ದರು ಎಂದರೆ ಅವರಿಗೆ ಪ್ರೀಮಿಯರ್ ಪದ್ಮಿನಿ ಕಾರಿನ ಮೇಲೆ ಎಷ್ಟು ಪ್ರೀತಿ ಇದೆ ಎಂಬುದು ಅರ್ಥವಾಗುತ್ತದೆ.
ಬಹುತೇಕ ಎಲ್ಲಾ ಸ್ಟಾರ್ ಗಳು ಇಂದು ಐಶಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದರೆ ಸೂಪರ್ ಸ್ಟಾರ್ ರಜನಿಕಾಂತ್ ರವರು ಸಾಮಾನ್ಯ ಕಾರುಗಳನ್ನೇ ಬಳಸುತ್ತಿರುವುದು ಅವರ ಸರಳ ಜೀವನಕ್ಕೆ ಹಿಡಿದ ಕೈಗನ್ನಡಿ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಶ್ರೀಲಂಕಾದಲ್ಲಿ ಭಾರತದ ಧ್ವಜ ಹಾರಿಸಿದ ಕನ್ನಡಿಗ ರಘು..!
ಸಿನಿಮಾಕಥೆಯಂತಿದ್ದರೂ ಇದು ಸಿನಿಮಾ ಸ್ಟೋರಿಯಲ್ಲ..! ಇದು ಇಂಡಿಯಾ, ಸ್ವೀಡನ್ ಲವ್ ಸ್ಟೋರಿ..!
ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!
ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!
ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!
ಸಲ್ಮಾನ್ ಖಾನ್ ನಿರಪರಾಧಿ..! ಹಾಗಾದರೆ ನಿಜವಾದ ಆಪರಾಧಿ ಯಾರು..?
ಇವರಿಗೆ 25 ವರ್ಷಗಳ ನಂತರ ಅಮ್ಮ ಸಿಕ್ಕಳು..! ಗೂಗಲ್ ಅರ್ಥ್ ಸಹಾಯದಿಂದ ತಾಯಿಯನ್ನು ಹುಡುಕಿದ ಮಗ..!
ಕೈ ಇಲ್ಲದ ಈ ಕ್ರಿಕೆಟಿರ್ ಗೂಗ್ಲೀ ಎಸೆಯುತ್ತಾನೆ..! ಸಿಕ್ಸರ್ ಸಿಡಿಸಿ ಮನೋರಂಜನೆ ಒದಗಿಸುತ್ತಾನೆ..!