ರಾಕಿಂಗ್ ಸ್ಟಾರ್ ಯಶ್…ಸದ್ಯ ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ನಟ. ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಸಾಲಿನಲ್ಲಿರುವ ಗೆಲ್ಲುವ ಕುದುರೆ.
ಸಿನಿಮಾದಿಂದಾಚೆಗೆ ಯಶ್ ಅವರನ್ನು ಮತ್ತೆ ಕಿರುತೆರೆಗೆ ತರಬೇಕು, ಯಶ್ ಅವರನ್ನು ಬಳಿಸಿಕೊಂಡು ಟಿಆರ್ ಪಿ ಪಡೆಯಬೇಕು ಎಂಬ ಆಸೆ ಬಹುತೇಕ ಚಾನಲ್ ಗಳದ್ದು.
ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ನಡೆಸಿಕೊಡುವಂತೆ ಯಶ್ ಅವರನ್ನು ಕೇಳಿಕೊಳ್ಳಲಾಗಿತ್ತು. ಹಿಂದಿನ ಎಲ್ಲಾ ಸ್ಟಾರ್ ನಟರಿಗೆ ಕಿರುತೆರೆಯಲ್ಲಿ ನೀಡಿದ್ದ ಸಂಭಾವನೆಗಿಂತ ಹೆಚ್ಚಿನ ಸಂಭಾವನೆಯನ್ನು ಯಶ್ ಗೆ ನೀಡುವುದಾಗಿ ಹೇಳಿದ್ದರೂ ಯಶ್ ಮಾತ್ರ ಈ ರಿಯಾಲಿಟಿ ಶೋ ನಡೆಸಿಕೊಡಲು ನಿರಾಕರಿಸಿದ್ದಾರೆ.
ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾದಿದ್ದಾರೆ. ಕೆಜಿಎಫ್ ಬಳಿಕ ರಾಣಾ ಸಿನಿಮಾ ಅದಾದ ಬಳಿಕ ಮಫ್ತಿ ಡೈರೆಕ್ಟರ್ ನರ್ತನ್ ಅವರ ನಿರ್ದೇಶನದ ಚಿತ್ರದಲ್ಲಿ ಯಶ್ ಅಭಿನಯಿಸಲಿದ್ದಾರೆ.
ವರ್ಷಕ್ಕೆ ಕನಿಷ್ಠ ಎರಡು ಸಿನಿಮಾ ಮಾಡಬೇಕೆಂದಿರುವ ಯಶ್ ಕನ್ನಡದ ಕೋಟ್ಯಾಧಿಪತಿ ನಡೆಸಿಕೊಡಲು ಒಪ್ಪಿಲ್ಲ.