ಕಣ್ಣಾಟದಿಂದ ಸದ್ದು ಮಾಡಿ , ಸುದ್ದಿಯಾಗಿ, ರಾತ್ರಿ ಬೆಳಗಾಗುವುದರಲ್ಲಿ ಚಿರಪರಿಚಿತಳಾದ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಗೀಗ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಿಯಾ ವಿರುದ್ಧ ಇದೀಗ ಮತ್ತೊಮ್ಮೆ ಸುಪ್ರೀಂಕೋರ್ಟನಲ್ಲಿ ದೂರು ದಾಖಲಾಗಿದೆ.
ಒರು ಅಡಾರ್ ಲವ್ ಸಿನಿಮಾದ ಹಾಡೊಂದರಲ್ಲಿ ಪ್ರಿಯಾ ಕಣ್ಣೋಟದಲ್ಲೇ ಎಲ್ಲರನ್ನೂ ಗೆದ್ದಿದ್ದಾರೆ. ಆದರೆ ಈ ಹಾಡನ್ನು ಉತ್ತರ ಕೇರಳದ ಮಲಬಾರ್ ನಲ್ಲಿ ಪ್ರತಿ ಮದುವೆ ಸಮಾರಂಭದ ವೇಳೆ ಈ ಸಾಂಪ್ರದಾಯಿಕ ಹಾಡನ್ನು ಹಾಡಲಾಗುತ್ತದೆ. ಮಲಬಾರ್ ನ ಮುಸ್ಲಿಂಮರು 1978ರಿಂದಲೇ ಈ ಹಾಡನ್ನು ಹಾಡ್ತಿದ್ದಾರೆ.
ಈ ಹಾಡನ್ನು ಸಿನಿಮಾದಲ್ಲಿ ಬೇರೆ ರೀತಿಯಲ್ಲಿ ಬಳಸಿಕೊಂಡು ಮುಸ್ಲೀಂರ ಭಾವನೆಗಳಿಗೆ ದಕ್ಕೆ ತರಲಾಗಿದೆ. ‘ ಮಾಣಿಕ್ಯ ಮಲಯಾಯ ಪೂವಿ…’ ಹಾಡಿನ ಸಾಹಿತ್ಯಕ್ಕೂ ಪ್ರವಾದಿ ಮುಹಮ್ಮದ್ ಅವರ ಜೀವನಕ್ಕು ಸಾಮ್ಯತೆ ಇದೆ ಎಂದು ದೂರಿನಲ್ಲಿ ಹೇಳಲಾಗಿದೆ. ಇಸ್ಲಾಂ ಧರ್ಮದಲ್ಲಿ ಕಣ್ಣು ಹೊಡೆಯುವುದು ನಿಷಿದ್ಧ ಎಂದು ತಿಳಿಸಲಾಗಿದೆ.