ಬ್ಯಾಂಕಿನಿಂದ ಹೊರಟ ಮಹಿಳೆಯೊಬ್ಬರು ತನ್ನ ಬ್ಯಾಗ್ ಪಕ್ಕದಲ್ಲೇ ಇಟ್ಟುಕೊಂಡಿದ್ದರೂ, ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಳ್ಳನೊಬ್ಬ ಅದನ್ನು ಕದ್ದು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ವಿನೋಬಾ ನಗರದ ಮಮತಾ ಎಂಬುವವರು ಬ್ಯಾಂಕಿಗೆ ಹೋಗಿ 25 ಸಾವಿರ ರೂ ಹಣ ಡ್ರಾ ಮಾಡಿ ಹೋಟೆಲ್ ಗೆ ಹೋಗಿದ್ದರು. ಇವರನ್ನು ಫಾಲೋ ಮಾಡಿಕೊಂಡು ಬಂದಿದ್ದ ಮೂವರು ಕಳ್ಳರು ಮಹಿಳೆಯ ಪಕ್ಕದ ಟೇಬಲ್ ಲಿ ಕುಳಿತಿದ್ದರು.ಇದರಲ್ಲೊಬ್ಬ ಕೆಳಗೆ ನೋಟ್ ಬೀಳಿಸಿ ಮಹಿಳೆಯ ಗಮನ ಬೇರೆಡೆಗೆ ಸೆಳೆದಿದ್ದಾನೆ.

ಅಷ್ಟರಲ್ಲಿ ಇನ್ನೊಬ್ಬ ಮಹಿಳೆಯ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾನೆ…! ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






