ಮೂರು ವರ್ಷದ ಮಕ್ಕಳು ನೆಟ್ಟಗೆ ಮಾತನಾಡುವುದನ್ನೂ ಕಲಿತಿರುವುದಿಲ್ಲ. ಶಾಲೆ ದರ್ಶನವಂತೂ ಆಗಿರುವುದೇ ಇಲ್ಲ. ಮನೆಯಲ್ಲಿ ಪಾಠ ಮಾಡಿದರಂತೂ ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಿಂದ ಬಿಡುವ ವಯಸ್ಸದು. ಆದರೆ ಇಲ್ಲೋರ್ವ ಬಾಲಕನಿದ್ದಾನೆ. ನಮ್ಮದೇ ದೇಶದ ಈ ಹುಡುಗ ತನ್ನ ಬುದ್ದಿಶಕ್ತಿಯಿಂದ ಗೂಗಲ್ ಬಾಯ್ ಎಂಬ ಹೆಸರನ್ನು ಪಡೆದಿದ್ದು, ವಿಶ್ವವಿಖ್ಯಾತನಾಗಿದ್ದಾನೆ..!
ಯೆಸ್.. 3ನೇ ವಯಸ್ಸಿನಲ್ಲಿ ಚೆಂದ ಚೆಂದವಾಗಿ ಮಾತನಾಡುತ್ತಿದ್ದ ಆ ಹುಡುಗನ ಮೆದುಳು ಇಂದು ದೊಡ್ಡವರ ರೀತಿ ಬೆಳೆದಿದೆ. ಹೌದು.. ಉತ್ತರ ಪ್ರದೇಶದ ಮೀರಟ್ ನ ಗಾಂಧಿನಗರ ಕಾಲೋನಿಯ ಅನ್ಮೋಲ್ ಎಂಬ ಪುಟ್ಟ ಬಾಲಕ ತನ್ನ 3 ವರ್ಷದಲ್ಲೇ ಜಗತ್ತಿನ ಎಲ್ಲಾ ರಾಷ್ಟ್ರಗಳ ರಾಜಧಾನಿಗಳ ಹೆಸರು ನೆನಪಿಟ್ಟಿದ್ದ ಕಾರಣ 2014ರಲ್ಲಿ ಶಾಲೆಯೊಂದು ಈತನಿಗೆ `ಗೂಗಲ್ ಬಾಯ್’ ಎಂಬ ಹೆಸರು ನೀಡಿದೆ.
ಇನ್ನು ಭಾರತದ ಪ್ರಧಾನಿಗಳ ವಿಷಯಕ್ಕೆ ಬಂದರೆ ದೇಶದ ಪ್ರಥಮ ಪ್ರಧಾನಿ ಪಂ.ಜವಾಹರ್ಲಾಲ್ ನೆಹರು ಅವರಿಂದ ಈಗಿನ ಪ್ರಧಾನಿ ನರೇಂದ್ರ ಮೋದಿವರೆಗಿನ ಎಲ್ಲಾ ಪ್ರಧಾನಿಗಳ ಹೆಸರುಗಳನ್ನೂ ಹೇಳುತ್ತಾನೆ. ಈ ಬಾಲಕನ ನೆನಪಿನ ಶಕ್ತಿ ಮತ್ತು ಪ್ರತಿಭೆಯನ್ನು ಕಂಡು ಉತ್ತರ ಪ್ರದೇಶ ಬಿಜೆಪಿಯ ಸಚಿವ ಲಕ್ಷ್ಮೀಕಾಂತ್ ಬಾಜಪೇಯಿಯವರು ಅನ್ಮೋಲ್ಗೆ ಅಗತ್ಯ ಸಹಾಯ ನೀಡುವಂತೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೆ ಪತ್ರ ಬರೆದಿದ್ದಾರೆ. ಅನ್ಮೋಲ್ ನ ಶಿಕ್ಷಣ ಪೂರ್ಣಗೊಳ್ಳುವ ವರೆಗೂ ಉಚಿತ ಶಿಕ್ಷಣ ಹಾಗೂ ಅಗತ್ಯ ನೆರವು ನೀಡುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ.
ಅನ್ಮೋಲ್ ಹುಟ್ಟಿದ ಮೂರು ವರ್ಷದವರೆಗೂ ಮಾತನಾಡಲು ಬರುತ್ತಿರಲಿಲ್ಲ. ಆದ್ದರಿಂದ ಪೋಷಕರು ಚಿಂತಿತರಾಗಿದ್ದರು. ಆದರೆ ವೈದ್ಯರ ಸಲಹೆಯ ಮೇರೆಗೆ ಆತನನ್ನು ಶಾಲೆಗೆ ಸೇರಿಸಲಾಗಿತ್ತು. ಆತನ ತಾಯಿ, ಅಕ್ಕನಿಗೆ ವಿವಿಧ ದೇಶಗಳು ಮತ್ತು ಅದರ ರಾಜಧಾನಿಗಳ ಹೆಸರನ್ನು ಕಲಿಸುತ್ತಿದ್ದ ಸಂದರ್ಭ ಗಮನಿಸಿದ್ದ ಅನ್ಮೋಲ್, ಮರುದಿನ ಅಕ್ಕನಿಗೆ ಮರು ಪ್ರಶ್ನಿಸಿದಾಗ ಅನ್ಮೋಲ್ ಉತ್ತರಿಸಲು ಆರಂಭಿಸಿದನು. ಇದನ್ನು ಕಂಡು ಆತನ ತಾಯಿ ಬೆರಗಾದರಲ್ಲದೇ, ಅನ್ಮೋಲ್ ಗೆ ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ತಿಳಿ ಹೇಳಿದರು. ಅಚ್ಚರಿ ಎಂದರೆ ಅನ್ಮೋಲ್ ಅದೆಲ್ಲವನ್ನೂ ಕಂಠಪಾಠ ಮಾಡಿದ. ಯಾವುದೇ ಪ್ರಶ್ನೆಯನ್ನು ಕೇಳಿದರೂ ಕೂಡಾ ಅದನ್ನು ಥಟ್ ಅಂತ ಹೇಳುತ್ತಿದ್ದ. ಅದೇ ಅನ್ಮೋಲ್ ಗೆ ಇಂದು ದೊಡ್ಡ ಹೆಸರು ತಂದು ಕೊಡಲು ಕಾರಣವಾಗಿದೆ.
ಅನ್ಮೋಲ್ ನ ಕೀರ್ತಿ ಹೇಗಿದೆ ಎಂದರೆ ಆತ ಈಗ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ದಿಗ್ಗಜ ನಟ ಅಮಿತಾಬ್ ಬಚ್ಚನ್ ರನ್ನೂ ಭೇಟಿ ಮಾಡಿದ್ದಾನೆ. ಅಲ್ಲದೇ ಇನ್ನೂ ಹತ್ತು ಹಲವು ನಾಯಕರು ಹಾಗೂ ಸ್ಟಾರ್ ಗಳು ಅನ್ಮೋಲ್ ನನ್ನು ಭೇಟಿ ಮಾಡಿದ್ದಾರೆ. ಇದರಿಂದ ಅನ್ಮೋಲ್ ನ ಕೀರ್ತಿ ಮುಗಿಲೆತ್ತರಕ್ಕೆ ಏರಿದೆ.
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
78 ವರ್ಷದ ಅಜ್ಜಿಯನ್ನು ರಕ್ಷಿಸಿದ 8ರ ಹುಡುಗಿ..! ಕಾಡಿನ ಮಧ್ಯೆ 4.5 ಕಿಮೀ ನಡೆದಿದ್ದಳಂತೆ ಆ ಪುಟ್ಟ ಬಾಲೆ..!
ರಷ್ಯಾದಲ್ಲಿ ನಡೆಯಿತು ಕೂದಲಿಗಾಗಿ 8 ಕೊಲೆ..! ಕೂದಲಿನ ವಿಷಯಕ್ಕೆ ಪತ್ನಿ, ಮಕ್ಕಳು, ತಾಯಿಯನ್ನೇ ಕೊಂದ..!
ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!
ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!
ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !
ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!