ಸ್ನೇಹಿತನ ಹುಟ್ಟುಹಬ್ಬದಂದು ಡಿಜೆ ಸಾಂಗಿಗಾಗಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು , ವಿಜಯ್ ದೀಪ್ ಮೃತ ದುರ್ದೈವಿ.
ಇಶ್ಮಿತ್ ಎಂಬಾತ ಬಾರೊಂದರಲ್ಲಿ ತನ್ನ 10 ಮಂದಿ ಗೆಳೆಯರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದನು. ಇವರುಗಳಲ್ಲಿ ಒಬ್ಬನಾದ ವಿಜಯ್ ದೀಪ್ ಡಿಜೆ ದೀಪಕ್ ಬಿಶ್ತ್ ಬಳಿ ಹೋಗಿ ಹಾಡನ್ನು ಬದಲಿಸುವಂತೆ ಹೇಳಿದ್ದಾನೆ. ಆಸರೆ ಬಿಶ್ತ್ ಹಾಡು ಬದಲಿಸಲು ನಿರಾಕರಿಸಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಜಗಳ ವೀಕೋಪಕ್ಕೆ ಹೋಗಿದೆ. ಇಶ್ಮಿತ್ ಮತ್ತವನ ಸ್ನೇಹಿತರು ಡಿಜೆ ಮತ್ತು ಇತರೆ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ.
ಡಿಜೆ ಚಾಕು ತೆಗೆದು ವಿಜಯ್ ದೀಪ್ ಗೆ ಇರಿದಿದ್ದಾನೆ. ಪರಿಣಾಮ ವಿಜಯ್ ದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಬ್ ನಲ್ಲಿದ್ದ ಯುವತಿಯೊಬ್ಬಳಿಗೆ ತಲೆಗೆ ಪೆಟ್ಟಾಗಿದೆ. ಆಕೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಡಿಜೆ ಪೊಲೀಸರ ಅತಿಥಿಯಾಗಿದ್ದಾನೆ.