ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ಅಬ್ಬರಿಸಿರುವುದು ಗೊತ್ತೇ ಇದೆ. ಕುರುಕ್ಷೇತ್ರ ರಿಲೀಸ್ ಗೆ ಅಭಿಮಾನಿಗಳು ಕಾಯ್ತಿದ್ದಾರೆ.
ಹೀಗಿರುವಾಗಲೇ ದರ್ಶನ್ ಯಜಮಾನ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಶೂಟಿಂಗ್ ಕೊನೆಯ ಹಂತ ತಲುಪಿದೆ.
ಇಷ್ಟಾದರೂ ಯಜಮಾನದಲ್ಲಿ ದರ್ಶನ್ ಯಾವ ಪಾತ್ರ ಮಾಡ್ತಿದ್ದಾರೆ ಎಂದು ತಿಳಿದಿರಲಿಲ್ಲ. ಇದೀಗ ದರ್ಶನ್ ಪಾತ್ರ ಯಾವುದೆಂಬುದು ರಿವೀಲ್ ಆಗಿದೆ. ದರ್ಶನ್ ಮಾಡ್ರನ್ ಶ್ರೀಕೃಷ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.