No menu items!
19.6 C
Munich
Friday, May 1, 2026

ವಿದ್ಯಾರ್ಥಿಗೆ ಪ್ರಧಾನಿ ಮೋದಿಯಿಂದ ಚಿನ್ನದ ಸರ ಗಿಫ್ಟ್….!

Must read

ಇಂಜಿನಿಯರಿಂಗ್ ವಿದ್ಯಾರ್ಥಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನದ ಸರವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಜಾರ್ಖಂಡ್ ಧನ್ ಬಾದ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕ್ ಇಂಜಿನಿಯರಿಂಗ್ ಓದ್ತಿರೋ ರಬೆಶ್ ‌ಕುಮಾರ್ ಅವರು ಮೋದಿಯಿಂದ ಚಿನ್ನದ ಸರ ಗಿಫ್ಟ್ ಪಡೆದವರು…!

ಕಳೆದ ತಿಂಗಳು ಮೋದಿ ಮಧ್ಯಪ್ರದೇಶದಲ್ಲಿ ಜಾಥಾದ ವೇಳೆ ಭಾಷಣ ಮಾಡುವಾಗ ಸರವೊಂದನ್ನು ಧರಿಸಿದ್ದರು.
ಕೆಲವು ದಿನಗಳ ನಂತರ ರಬೆಶ್ ಟ್ವೀಟ್ ಮಾಡಿ ‘ ಪಂಚಾಯತ್ ರಾಜ್ ದಿನದಂದು ನೀವು ಮಾಡಿದ ಭಾಷಣ ಕೇಳಿದ್ದೇನೆ. ನಿಮ್ಮ ಭಾಷಣ ಉತ್ತಮವಾಗಿತ್ತು. ಆ ವೇಳೆ ತಾವು ಧರಿಸಿದ್ದ ಚಿನ್ನದ ಬಣ್ಣದ ಸರ ನನಗೆ‌ ತುಂಬಾ ಇಷ್ಟವಾಯ್ತು. ಆ ಸರವನ್ನು ನಂಗೆ ಕೊಡ್ತೀರ? ಎಂದು ಸಿಂಗ್ ಟ್ವೀಟ್‌ನಲ್ಲಿ ಮನವಿ ಮಾಡಿದ್ದರು.
ಇವರು ಟ್ವೀಟ್ ಮಾಡಿದ ಮರುದಿನವೇ ಪ್ರಧಾನಿಯವರ ಹೆಸರಲ್ಲಿ ರಬೆಶ್ ಕೈಗೆ ಪತ್ರ ಮತ್ತು ಸರ ತಲುಪಿದೆ…!

ನಾನು ಧರಿಸಿದ್ದ ಚಿನ್ನದ ಸರ ನಿನಗೆ ಇಷ್ಟವಾಗಿರುವುದಾಗಿ ಬರೆದಿದ್ದೆ. ಹೀಗಾಗಿ ಪತ್ರದ ಜೊತೆಗೆ ಸರವನ್ನೂ ಕೂಡ ಕಳುಹಿಸಿದ್ದೇನೆ. ನಿನ್ನ ಮುಂದಿನ ಭವಿಷ್ಯ ಉಜ್ವಲವಾಗಿರಲಿ’ ಎಂದು ಪತ್ರದಲ್ಲಿತ್ತು.

ಚಿನ್ನದ ಸರ ಕೈ ಸೇರಿದ ಕೂಡಲೇ ಸಿಂಗ್ ಮತ್ತೆ ಟ್ವೀಟ್ ಮಾಡಿದ್ದು, ಚಿನ್ನದ ಸರ ಹಾಗೂ ಪತ್ರ ನನ್ನ ಕೈ ಸೇರಿದ ಬಳಿಕ ನನಗೆ ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ. ಒಂದು ಸುಂದರವಾದ ಉಡುಗೊರೆ ನೀಡಿದ್ದಕ್ಕೆ ಹಾಗೂ ನಿಮ್ಮ ಗುಡ್ ಲಕ್ ಮೆಸೇಜ್ ಗೆ ಧನ್ಯವಾದಗಳು ಎಂದು ಸಂತಸ ಹಂಚಿಕೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article