ಹಸಿದರಿಗಾಗಿ `ರೋಟಿ ಬ್ಯಾಂಕ್'..! ಶ್ರೀಮಂತರು ದಿನಕ್ಕೆ ಎರಡು ರೊಟ್ಟಿಯನ್ನು ಈ ಬ್ಯಾಂಕಿಗೆ ಡೆಪಾಸಿಟ್ ಮಾಡ್ತಾರೆ..!

Date:

ಅಲ್ಲಿ ಜಾತಿ-ಧರ್ಮದ ಬೇಧವಿಲ್ಲದೇ ಒಬ್ಬರ ಮನೆಯಲ್ಲಿ ತಯಾರಿಸಿದ ಆಹಾರವನ್ನು ಇನ್ನೊಬ್ಬರು ತಿನ್ತಾರೆ. ಹಿಂದೂ ಮನೆಯ ಒಲೆಯಲ್ಲಿ ಬೆಂದ ರೋಟಿಯನ್ನು ಮುಸಲ್ಮಾನರು, ಮುಸಲ್ಮಾನರ ಮನೆಯಲ್ಲಿ ಬೆಂದ ರೋಟಿಯನ್ನು ಹಿಂದೂಗಳು. ದಲಿತರ ಮನೆಯಲ್ಲಿನ ರೋಟಿಯನ್ನು ಬ್ರಾಹ್ಮಣರು ತಿನ್ತಾರೆ..!
ಹೌದು ಉತ್ತರ ಪ್ರದೇಶದ ಲಕ್ನೋದ ಬುಂದೆಲ್ ಖಂಡ್ನ ಹಿಂದುಳಿದ ಜಿಲ್ಲೆ ಮಹೋಬಾದಲ್ಲಿನ ಚಿತ್ರಣವಿದು..! ಅಲ್ಲಿ ದೇಶದಲ್ಲೇ ಹೆಚ್ಚು ಬಡವರು ಇದ್ದಾರೆ..! ದಿನದಲ್ಲಿ ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಭಿಕ್ಷೆ ಮಾಡೋ ಜನರೇ ಅಲ್ಲಿ ಹೆಚ್ಚು..! ಹಸಿವಿನಿಂದ ಸಾಕಷ್ಟು ಜನ ಮೃತ ಪಟ್ಟಿದ್ದನ್ನು ಕಂಡು ಬಡವರ ಹಸಿವನ್ನು ನೀಗಿಸಲು ಮಧ್ಯಮ ವರ್ಗದವರು, ಶ್ರೀಮಂತರು ಪಣ ತೊಟ್ಟಿದ್ದಾರೆ. ಅದಕ್ಕಾಗಿಯೇ ಇಲ್ಲಿ `ರೋಟಿ ಬ್ಯಾಂಕ್’ ನಿರ್ಮಾಣವಾಗಿದೆ..! ರೊಟ್ಟಿ ನೀಡುವವರು ಈ ಬ್ಯಾಂಕಿನಲ್ಲಿ ರೋಟಿ ಡೆಪಾಸಿಟ್ ಮಾಡ್ತಾರೆ..! ಹಸಿದವರು ಇದನ್ನು ವಿತ್ ಡ್ರಾ ಮಾಡಿಕೊಳ್ಳ ಬಹದು..!
ದಿನ ನಿತ್ಯ ಸುಮಾರು 40 ಜನ ಯುವಕರ ಗುಂಪು ರೊಟ್ಟಿ ಬ್ಯಾಂಕ್ ಮೂಲಕ ಬರವರ ಹೊಟ್ಟೆ ತುಂಬಿಸ್ತಾ ಇದ್ದಾರೆ..! ಊರಿನ ಮಧ್ಯಮ ಮತ್ತು ಶ್ರೀಮಂತರ ಮನೆಯಿಂದ ರೊಟ್ಟಿಯನ್ನು ಸಂಗ್ರಹಿಸಿ ಹಸಿದವರಿಗೆ ಕೊಡ್ತಾರೆ..! ಇಲ್ಲಿ ರೊಟ್ಟಿ ನೀಡುವ ಶಕ್ತಿ ಇರುವವರು ದಿನಾಲೂ ಎರಡೆರಡು ರೊಟ್ಟಿಯನ್ನು ರೋಟಿ ಬ್ಯಾಂಕ್ಗೆ ನೀಡ್ತಾರೆ..! ಬ್ಯಾಂಕ್ ನ ಪರವಾಗಿ ರೋಟಿ ಬೇಡಲು ಬಂದವರಿಗೆ ಮನೆಯಲ್ಲಿ ರೋಟಿ ಕೊಡ್ತಾರೆ..! ಎಲ್ಲಾ ರೋಟಿಯೂ ಒಂದೆಡೆ ಸಂಗ್ರಹವಾಗುತ್ತೆ..! ಅದನ್ನು ಹಸಿದವರಿಗೆ ನೀಡ್ತಾ ಹೋಗ್ತಾರೆ..! ರೋಟಿ ದಾನ ಮಾಡೋರು ಹಿಂದಿನ ದಿನದ ರೊಟ್ಟಿಯನ್ನಾಗಲೀ ಅಥವಾ ಹಳಸಲು ರೊಟ್ಟಿಯನ್ನಾಗಲೀ ಕೊಡುವಂತಿಲ್ಲ..! ತಾಜಾ ರೊಟ್ಟಿಯನ್ನೇ ನೀಡಬೇಕು..!
ದಿನ ನಿತ್ಯ ಹೀಗೆ ಸರಿ ಸುಮಾರು 400ಕ್ಕೂ ಹೆಚ್ಚಿನ ಬಡವರಿಗೆ ರೋಟಿ ದಾನ ಮಾಡಲಾಗ್ತಾ ಇದೆ..! ಬುಂದೇಲ್ ಖಂಡ್ನಲ್ಲಿ ಉದಯಿಸಿರೋ ಈ ರೋಟಿ ಬ್ಯಾಂಕ್ ದೇಶದ ಉದ್ದಗಲದಲ್ಲೂ ಜನಪ್ರಿಯತೆ ಪಡೆದಿದೆ..! ಸಾಮಾಜಿಕ ಜಾಲತಾಣಗಳಲ್ಲೂ ಈ ಸ್ಟೋರಿ ವ್ಯಾಪಕವಾಗಿ ಹರಡುತ್ತಿದೆ. ಈ ಬುಂದೇಲ್ ಖಂಡ್ನಲ್ಲಿನ ಹಸಿವು ಎಲ್ಲರನ್ನೂ ಒಂದು ಮಾಡಿದೆ..! ಜಾತಿ ಧರ್ಮ ಅಂತ ಹೊಡೆದಾಡೋ ಬದಲು ಇಡೀ ರಾಷ್ಟ್ರದ ಜನ ಎಲ್ಲರೂ ಎಲ್ಲರಿಗಾಗಿ ಎಲ್ಲರಿಗೋಸ್ಕರ ಬದುಕಿದ್ರೆ ಎಷ್ಟೊಂದು ಚಂದ ಅಲ್ವಾ..? ಸುಮ್ಮನೇ ಕಿತ್ತಾಡ್ತೀವಿ. ಹೊಟ್ಟೆ ಹಸಿವಿಲ್ಲದೇ ಇರೋರು ಮಾತ್ರ ಜಾತಿ-ಧರ್ಮ ಅಂತ ಸಾಯ್ತೀವಿ..! ಅದರ ಬದಲು ಎಲ್ಲರೂ ಒಂದಾಗಿ ಬಾಳಿದರೆ ನಾಲ್ಕು ದಿನದ ಬದುಕು ಎಷ್ಟೊಂದು ಸುಂದರ ಅಲ್ವಾ..

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ನೀವೂ ಸಂಚಾರಿ ನಿಯಮ ಪಾಲಿಸೋದಿಲ್ವಾ ಹಾಗಾದ್ರೆ ಈ ವೀಡಿಯೋ ನೋಡಿ..!

ಒಂದು ಕಾಲದ ವಿಜ್ಞಾನಿ ಇಂದು ಭಿಕ್ಷುಕ..! ಭಾರತದ ಐನ್ ಸ್ಟೀನ್ ನ ದುರಂತ ಕಥೆ ಇದು..!

ನಾನು ಒಬ್ಬ ನಟನ ಅಭಿಮಾನಿ ಅಂತ ಹೇಳ್ಕೊಂಡು ಇನ್ನೊಬ್ಬ ನಟನ ಪೋಸ್ಟರ್ ಗೆ ಚಪ್ಪಲಿಯಲ್ಲಿ ಹೊಡೆಯೋದು ಯಾವ ಅಭಿಮಾನ..?

ಬೋರ್ ವೆಲ್ ನಲ್ಲಿ ನೀರಿನ ಬದಲು ಗ್ಯಾಸ್..! ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲ್ಲೂಕಿನ ಸೋರಂಗಾಂವಿ ಗ್ರಾಮದಲ್ಲೊಂದು ವಿಸ್ಮಯ..!

18 ವರ್ಷದಿಂದ ಒಂದೇ ಕಾಲಲ್ಲಿ ದುಡಿಯುತ್ತಿರುವ ರೈತ..! ಈತನ ಛಲದ ಮುಂದೆ ವಿಧಿಯೂ ಶರಣಾಗಿದೆ..!

50 ಕೋಟಿ ಬೆಲೆಬಾಳುವ ಕಂಪನಿ ಕಟ್ಟಿದ ಹುಟ್ಟು ಕುರುಡರಾದ ಶ್ರೀಕಾಂತ್…! ಇದು ಅಂಧನ ಯಶೋಗಾಥೆ..!

ರಷ್ಯಾದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಮೋದಿ..! #Video

ಮಾಸ್ಟರ್ ಪೀಸು… ಹಿಂಗೈತಿ ಬಾಸು..! – ಕಿರಿಕ್ ಕೀರ್ತಿ ..!

ಬರಲಿದೆ ವಾಟ್ಸ್ ಆ್ಯಪ್ ನಲ್ಲಿ ವೀಡಿಯೋ ಕಾಲಿಂಗ್..! ಅಚ್ಚರಿಗಳನ್ನು ಹೊತ್ತು ತರಲಿದೆ ಹೊಸ ಮಾದರಿ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...