ಟೆಸ್ಟ್ ಚಾಂಪಿಯನ್ ಶಿಪ್ ವೇಳಾಪಟ್ಟಿ ಪ್ರಕಟ

admin
By admin
0 Min Read

ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ವೇಳಾಪಟ್ಟಿ ಪ್ರಕಟವಾಗಿದೆ. 2019 ರಿಂದ 2023 ರವರೆಗಿನ ಭವಿಷ್ಯದ ಪ್ರವಾಸ ಕಾರ್ಯಕ್ರಮದ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ‌ ಮಾಡಿದೆ.

ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಟೀಂ ಇಂಡಿಯಾದ ಮೊದಲ ಎದುರಾಳಿ ವೆಸ್ಟ್ ಇಂಡಿಸ್. ಸಾಂಪ್ರದಾಯಿಕ ವೈರಿಗಳಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುವ ಆ್ಯಶಸ್ ಸರಣಿಯೊಂದಿಗೆ ಚಾಂಪಿಯನ್ ಶಿಪ್ ಗೆ ಚಾಲನೆ ಸಿಗಲಿದೆ. ಪ್ರತಿ ತಂಡಗಳು ಎರಡು ವರ್ಷದ ಅವಧಿಯಲ್ಲಿ 6 ಟೂರ್ನಿಗಳನ್ನು ಆಡಲಿವೆ. ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಫೈನಲ್ ನಲ್ಲಿ ಸೆಳೆಸಲಿವೆ.

Share This Article