ಜುಲೈ 19ರಂದು ಅನುಮಾನಾಸ್ಪದ ಮರಣವನ್ನಪ್ಪಿದ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರಾಧನೆ ಇಂದು ನಡೆಯಲಿದೆ.
ಶೀರೂರು ಮೂಲಮಠದಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ. ಪವಮಾನ ಹೋಮ, ನವಕ ಪ್ರಧಾನ ಹೋಮ, ವಿರಾಜ ಮಂತ್ರಹೋಮ ನಡೆಯಲಿದೆ. ಈ ಎಲ್ಲಾ ಪ್ರಕ್ರಿಯೆ ಬಳಿಕ ಮುಖ್ಯ ಪ್ರಾಣ ದೇವರು, ಅನ್ನವಿಠ್ಠಲ ದೇವರಿಗೆ ಎಳನೀರಿನ ಅಭಿಷೇಕ ನಡೆಯಲಿದೆ.
ಆರಾಧನಾ ಪ್ರಕ್ರಿಯೆ ಬಳಿಕ ಅನ್ನದಾನ ನಡೆಯಲಿದೆ. ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠ ಆರಾಧನಾ ಪ್ರಕ್ರಿಯೆ ಜವಬ್ದಾರಿ ಹೊತ್ತಿದೆ.