ಸಿನಿಮಾಗಳಲ್ಲಿ ಕೈ ಕಾಲಿಗೆ ಬ್ಯಾಂಡೇಜ್ ಹಾಕಿದ್ರೂ ಫೈಟ್ ಮಾಡಬಹುದು. ರೇಸ್ನಲ್ಲಿ ಭಾಗವಹಿಸಬಹುದು. ಯಾಕಂದ್ರೆ ಅದೆಲ್ಲಾ ಡೂಪ್. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದನ್ನೇ ರಿಯಲ್ ಲೈಫ್ನಲ್ಲಿ ಮಾಡೋಕೆ ಹೊರಟಿದ್ದಾರೆ. ವಿಷಯ ಏನಂದ್ರೆ, ಇತ್ತೀಚೆಗಷ್ಟೇ ಮೈಸೂರಿನಲ್ಲಿ ಸಂಭವಿಸಿದ ಕಾರು ಅಪಘಾತದ ವೇಳೆ ದರ್ಶನ್ ಅವರ ಬಲಗೈ ಮೂಳೆ ಮುರಿದಿತ್ತು. ಚಿಕಿತ್ಸೆ ಪಡೆದ ದರ್ಶನ್ ಅವರು ಒಂದು ತಿಂಗಳು ವಿಶ್ರಾಂತಿ ಪಡೆಯಬೇಕಿದೆ. ಹೀಗಿದ್ರೂ ದರ್ಶನ್ ಕಾರ್ ರೇಸ್ ಒಂದರಲ್ಲಿ ಭಾಗವಹಿಸಲು ತಯಾರಿ ನಡೆಸಿದ್ದಾರೆ.
ಮೈಸೂರು ದಸರಾ ಪ್ರಯುಕ್ತ ಇದೇ ಅಕ್ಟೋಬರ್ 6 ಹಾಗೂ 7ನೇ ತಾರೀಕು ಲಲಿತ್ ಮಹಲ್ನ ಹೆಲಿಪ್ಯಾಡ್ ಮೈದಾನದಲ್ಲಿ ಗ್ರಾವೆಲ್ ಫೆಸ್ಟ್ ನಡೆಯಲಿದೆ. ಆ ಗ್ರಾವೆಲ್ ಫೆಸ್ಟ್ನಲ್ಲಿ ಕಾರ್ ರೇಸ್ ಕೂಡ ನಡೆಯುತ್ತೆ. ಆ ಕಾರ್ ರೇಸ್ನಲ್ಲಿ ಪಾಲ್ಗೊಳ್ಳಲು ದರ್ಶನ್ ಮಂಗಳವಾರ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಆ ಮೂಲಕ ಗ್ರಾವೆಲ್ ಫೆಸ್ಟ್ ಕಾರ್ ರೇಸ್ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದಾರೆ.
ದರ್ಶನ್ ಅವರ ಬಲಗೈ ಮುರಿದಿದ್ದು ಅವರು ವಿಶ್ರಾಂತಿ ಪಡೆಯಬೇಕಿದೆ. ಹೀಗಿರುವಾಗ ದರ್ಶನ್ ಹೇಗೆ ರೇಸ್ನಲ್ಲಿ ಭಾಗವಹಿಸುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ. ಏಕೆಂದರೆ ಸಿನಿಮಾದಲ್ಲಿ ಏನೇ ಮಾಡಿದರೂ ನಡೆದು ಹೋಗುತ್ತೆ. ಅದನ್ನೇ ರಿಯಲ್ ಲೈಫ್ನಲ್ಲಿ ಮಾಡೋಕೆ ಹೋದರೆ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿಯೇ ದರ್ಶನ್ ಅವರ ಅಭಿಮಾನಿಗಳು ಆತಂಕದಲ್ಲಿದ್ದಾರೆ. ಆದರೆ ಈ ಕುರಿತು ದರ್ಶನ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೈ ಮುರಿದರೂ ಕಾರ್ ರೇಸ್ ನಲ್ಲಿ ಭಾಗವಹಿಸುತ್ತಾರೆ ದರ್ಶನ್….!
Date: