ದುನಿಯಾ ವಿಜಿ ಬದುಕಿನಲ್ಲಿ ಸಿಡಿ ಸೆನ್ಸೇಷನ್….!

Date:

ದುನಿಯಾ ವಿಜಿ ಬದುಕಿನಲ್ಲಿ ಸಿಡಿ ಸೆನ್ಸೇಷನ್​..!

“ಇನ್ನೆರಡು ದಿನ ಕಾದು ನೋಡಿ, ನನ್ನ ಪತಿ ದುನಿಯಾ ವಿಜಯ್​ ಜೊತೆಯಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ ಕೀರ್ತಿಯ ಬಣ್ಣವನ್ನ ಬಯಲು ಮಾಡುತ್ತೇನೆ. ಅವಳ ಫೋಟೋ ಹಾಗೂ ವೀಡಿಯೋಗಳ ಸಿಡಿಯನ್ನೇ ಜಗತ್ತಿನ ಮುಂದೆ ಇಡುತ್ತೇನೆ”. ದುನಿಯಾ ವಿಜಯ್​ ಅವರ ಪತ್ನಿ ನಾಗರತ್ನ ಸಿಡಿಸಿರುವ ಸೆನ್ಷೇನಲ್ ಬಾಂಬ್​ ಇದು. ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ಗುದ್ದಾಟಕ್ಕೆ ಕೆಲವೇ ದಿನಗಳಲ್ಲಿ ತೆರೆ ಎಳೆಯುವುದಾಗಿಯೂ ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಕೀರ್ತಿ ಗೌಡ ಹೆಸರಿನ ಹುಡುಗಿ ಸ್ಲಮ್​ನಲ್ಲಿ ಬೆಳೆದು ಬಂದವಳು. ಹಣಕ್ಕಾಗಿ ನನ್ನ ಪತಿಯನ್ನ ಬುಟ್ಟಿಗೆ ಹಾಕಿಕೊಂಡಿದ್ದಾಳೆ ಎಂದು ನಾಗರತ್ನ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಕೀರ್ತಿ ಈ ಹಿಂದೆ ಯಾರ ಜೊತೆಯಲ್ಲಿ ಇದ್ದರು. ಏನೆಲ್ಲಾ ಮಾಡಿದ್ದರು ಎನ್ನುವ ಫೋಟೋ ಹಾಗೂ ವೀಡಿಯೋಗಳ ಸಿಡಿಯೊಂದನ್ನ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆಲ್ಲಾ ಕಾದು ನೋಡಿ ಎನ್ನುವ ಉತ್ತರ ಕೊಟ್ಟ ನಾಗರತ್ನ, ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ. ಆ ಮೂಲಕ ದುನಿಯಾ ವಿಜಯ್​ ಪತ್ನಿಯರ ಜಡೆ ಜಗಳ ಇನ್ನೂ ಎರಡು ದಿನ ಮುಂದುವರೆಯಲಿದೆ ಎನ್ನುವ ಸೂಚನೆ ಸಿಕ್ಕಿದೆ..
ಇತ್ತ ನಾಗರತ್ನ ಅವರು ಕೀರ್ತಿ ಗೌಡ ವಿರುದ್ಧ ಮಾಧ್ಯಮಗಳ ಮುಂದೆ ಕುಳಿತು ಆರೋಪ ಮಾಡುತ್ತಿದ್ದರೆ, ಅತ್ತ ಕೀರ್ತಿ ತನ್ನ ಪತಿ ವಿಜಯ್​ ಜೊತೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಮಡಿಕೇರಿಯ ರೆಸಾರ್ಟ್​ಗೆ ತೆರಳಿರುವ ಅವರು ಜಾಲಿ ಮೂಡ್​ನಲ್ಲಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...