ಪಾಪ್ಯುಲರ್ ಮ್ಯೂಸಿಕ್ ಡೈರೆಕ್ಟರ್ ಎ. ಆರ್ ರೆಹಮಾನ್ ಎಲ್ಲರಿಗೂ ಚಿರಪರಿಚಿತ. ಇವರ ಬಗ್ಗೆ ಗೊತ್ತಿಲ್ದೇ ಇರೋರೆ ಇಲ್ಲ. ಆದರೆ, ಇವರು ಸೂಸೈಡ್ ಮಾಡ್ಕೋಬೇಕು ಅಂತ ಅನ್ಕೊಂಡಿದ್ರು ಅನ್ನೋದು ಎಷ್ಟೋ ಜನರಿಗೆ ಗೊತ್ತಿಲ್ಲ.
ಈ ವಿಷಯವನ್ನು ಸ್ವತಃ ರೆಹಮಾನೇ ಹೇಳಿದ್ದಾರೆ. ಕೃಷ್ಣ ತಿಲೋಕ್ ಅವರು ರೆಹಮಾನ್ ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಇದರಲ್ಲಿ ಈ ಸಂಗತಿ ಇದೆ.
ಮುಂಬೈನಲ್ಲಿ ಜೀವನ ಚರಿತ್ರೆ ಬಿಡುಗಡೆ ಬಳಿಕ ಇಂಟರ್ ವ್ಯೂ ನಲ್ಲಿ ರೆಹಮಾನ್ ತಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದುಕೊಂಡಿದ್ದೆ ಅನ್ನೋದನ್ನು ಹೇಳಿದ್ದಾರೆ.
ಅವರನ್ನು 9 ನೇ ವಯಸ್ಸಿನಲ್ಲಿ ಕಳೆದುಕೊಂಡೆ, ಸಂಗೀತ ಉಪಕರಣಗಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದೆವು. ಈ ಮೂಲಕ ಸಂಗೀತ ಕ್ಷೇತ್ರಕ್ಕೆ ಅತ್ಯಂತ ಸಣ್ಣ ವಯಸ್ಸಿನಲ್ಲೇ ಪ್ರವೇಶಿಸಿದೆ. 12-22 ವಯಸ್ಸಿನ ವೇಳೆಗೆ ಎಲ್ಲವನ್ನೂ ನೋಡಿಯಾಗಿತ್ತು, 25 ನೇ ವರ್ಷದವರೆಗೂ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆಯೇ ಚಿಂತಿಸುತ್ತಿದ್ದೆ ಎಂದು ತಿಳಿಸಿದ್ದಾರೆ.