32 ಕಿಮೀ ನಡೆದುಕೊಂಡು ಬಂದ ಉದ್ಯೋಗಿಗೆ ಸಿಇಓ ಕಾರು ಉಡುಗೊರೆ ನೀಡಿದ್ದಾರೆ.
ಅಮೆರಿಕಾದ ಕಂಪನಿಯೊಂದರಲ್ಲಿ ಈ ಘಟನೆ ನಡೆದಿದೆ.
,ವೋಲ್ಟರ್ ಎಂಬುವವರು ಆಗಷ್ಟೇ ಹೊಸ ಕಂಪನಿಗೆ ಕೆಲಸಕ್ಕೆ ಸೇರಿದ್ದರು. ಮರುದಿನ ಹೊಸದಾಗಿ ಕೆಲಸ ಆರಂಭಿಸಬೇಕಿತ್ತು. ಬೆಳಗ್ಗೆ ಎದ್ದು ಬೇಗನೇ ಆಫೀಸ್ ಗೆ ಹೋಗಬೇಕು. ತಡಮಾಡಬಾರದು ಎಂದು ವೋಲ್ಟರ್ ಅಂದುಕೊಂಡಿದ್ದರು.
ಆದರೆ, ಗ್ರಹಚಾರಕ್ಕೆ ಅದೇ ದಿನ ಕಾರು ಕೆಟ್ಟು ನಿಂತಿತು. ವೋಲ್ಟರ್ ಕ್ಯಾಬ್ ಗಳಿಗೆ ಹುಡುಕಾಟಿದರೂ ಅವು ಸಹ ಸಿಗಲಿಲ್ಲ.
ಬೇರೆಯಾರದರೂ ಆಗಿದ್ದರೆ ಇದೇ ಕಾರಣ ಹೇಳಿಕೊಂಡು ಕೆಲಸಕ್ಕೆ ಹೋಗದೇ ಇರುವುದನ್ನೋ ಅಥವಾ ತಡವಾಗಿ ಹೋಗುವುದನ್ನೋ ಮಾಡ್ತಿದ್ರು. ಆದರೆ ವೋಲ್ಟರ್ 32 ಕಿಮೀ ನಡೆದುಕೊಂಡೇ ಆಫೀಸಿಗೆ ಹೋಗಿದ್ದಾರೆ.
ಸರಿಯಾದ ಟೈಮ್ ಗೆ ಆಫೀಸ್ ತಲುಪಿದ್ದಾರೆ. ಬಳಲಿದ್ದ ಇವರನ್ನು ಕಂಡ ಸಿಇಒ ವಿಚಾರಿಸಿದ್ದಾರೆ. ಇವರು ನಡೆದ ಕಥೆಯನ್ನು ಹೇಳಿದಾಗ ಕುಡಿಯಲು ನೀರು, ತಂಪುಪಾನೀಯ, ತಿಂಡಿ ನೀಡಿ ಉಪಚರಿಸಿದ್ದಾರೆ.ಜೊತೆಗೆ ಕಾರೊಂದನ್ನು ಉಡುಗೊರೆ ಆಗಿ ನೀಡಿದ್ದಾರೆ.