ಬಿಡುಗಡೆಗೆ ಸಿದ್ದವಾದ ಉತ್ತರ ಕರ್ನಾಟಕ ಸೊಗಡಿನ “ಚರಂತಿ“
ನಿರ್ದೇಶಕ ಮಹೇಶ ರಾವಲ ಅವರು ಕಳೆದ ಕೆಲ ತಿಂಗಳ ಹಿಂದಷ್ಟೇ ತಮ್ಮ “ಚರಂತಿ” ಸಿನಿಮಾದ ಮುಹೂರ್ತ ವನ್ನ ಮಾಡಿದ್ರು.. ಈಗಾಗ್ಲೇ ಚಿತ್ರವನ್ನ ತೆರೆಗೆ ತರೋಕೆ ಸಿದ್ದವಾಗಿ ಬಿಟ್ಟಿದ್ದಾರೆ ಈ ಡೈರೆಕ್ಟರ್.. “ಚರಂತಿ” ಜರ್ನಿ ಆಫ್ ಲವ್.. ಟ್ಯಾಲೆಂಟೆಡ್ ಯುವ ಕಲಾವಿದರು ಸೇರಿ ಸಿದ್ದ ಮಾಡಿರುವ ಚಿತ್ರವಿದು..
ಬಾಗಲಕೋಟೆ ಜಿಲ್ಲೆ ಬನಹಟ್ಟಿಯ ರಾವಲ್ ಸಿನಿ ಫೋಕಸ್ ಲಾಂಛನದಡಿ ಡಾ.ಪರಶುರಾಮ ರಾವಲ್ ಅವರು ನಿರ್ಮಾಣ ಮಾಡಿದ್ದಾರೆ.. ನಾಯಕನಾಗಿ ಸಚಿನ ಪುರೋಹಿತ ಹಾಗು ನಾಯಕಿಯಾಗಿ ಆಲ್ಮಾಸರವರು ಕಾಣಿಸಿಕೊಂಡಿದ್ದಾರೆ.. ಹಿರಿಯ ಕಲಾವಿದರಾದ ರೇಖಾದಾಸ್, ಎಂಎಸ್ ಸುರೇಶ್, ಸದಾನಂದ ಕಾಳೆ, ಸೇರಿದಂತೆ ಉತ್ತರ ಕರ್ನಾಟಕದ ಹಲವು ಹೊಸ ಪ್ರತಿಭೆಗಳು ಚಿತ್ರದಲ್ಲಿ ಅಭಿನಯಿಸಿದ್ದಾರೆ..ಇನ್ನೂ ಉತ್ತರ ಕರ್ನಾಟಕದ ಜವಾರಿ ಸಂಭಾಷಣೆ ಚಿತ್ರದಲ್ಲಿ ಇರೋದು ಈ ಸಿನಿಮಾದ ವಿಶೇಷ..
ಮುಂಬೈ, ಪುಣೆ, ಬೆಂಗಳೂರು ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಶೂಟಿಂಗ್ ನಡೆಸಲಾಗಿದೆ.. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಉತ್ತಮ ರೆಸ್ಪಾನ್ಸ್ ಅನ್ನ ಗಿಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದೆ.. ಸದ್ಯ ಬಿಡುಗಡೆಗೆ ಸಿದ್ದವಾಗಿರುವ ಚರಂತಿ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ..