ಉತ್ತರ ಕರ್ನಾಟಕ ಖದರ್ ನ ಚರಂತಿ ಸಿನಿಮಾ ನಾಳೆ ರಿಲೀಸ್..
ಚರಂತಿ.. ನಾಳೆ ಬಿಡುಗಡೆಗೆ ಸಿದ್ದವಾಗಿರುವ ಉತ್ತರ ಕರ್ನಾಟಕ ಸೊಗಡಿನ ಮಿರ್ಚಿ ಸಿನಿಮಾ.. ಹೇಳಿಕೇಳಿ ಮಹೇಶ್ ರಾವಲ್ ನಿರ್ದೇಶನ ಮಾಡಿರುವ ಸಿನಿಮಾ.. ತನ್ನ ಇಷ್ಟು ವರ್ಷದ ಸಿನಿ ಅನುಭವವನ್ನ ಚರಂತಿ ಚಿತ್ರಕ್ಕೆ ಧಾರೆಯೆರೆದು ಸಿದ್ದ ಮಾಡಿರುವ ಸಿಮಾನೇ ಈ ಚರಂತಿ… ಚರಂತಿ ಅಂದ್ರೆ ಚಲನೆಯಲ್ಲಿ ಇರೋದು ಅಂತ ಅರ್ಥ.. ಈ ಸಿನಿಮಾ ಟ್ರೇಲರ್ ನೋಡಿದ್ರೆ ಚಿತ್ರವು ಇದೇ ವೇಗದಿಂದ ಕೂಡಿರಲಿದೆ ಅನ್ನಿಸುತ್ತೆ… ಹೀಗಾಗೆ ಟ್ಯಾಗ್ ಲೈನ್ ನಲ್ಲಿ ಜರ್ನಿ ಆಫ್ ಲವ್ ಎಂಬ ಬರಹವಿದೆ..
ಪ್ರೇಕ್ಷರಿಗೆ ಬೇಕಾದ ಕಮರ್ಷಿಯಲ್ ಎಲಿಮೆಟ್ಸ್ ಗಳೆಲ್ಲವು ಚರಂತಿಯಲ್ಲಿ ಇದೆ.. ಒಂದು ಮುದ್ದಾದ ಲವ್ ಸ್ಟೋರಿ, ಆಕ್ಷನ್, ಸೆಂಟಿಮೆಂಟ್ ಎಲ್ಲದರ ಪ್ರತಿರೂಪವಾಗಿ ಚರಂತಿ ಸಿನಿಮಾ ಸಿದ್ದವಾಗಿದೆ.. ಮಹೇಶ್ ರಾವಲ್ ಅವರೆ ಮುಖ್ಯ ಭೂಮಿಕೆಯಲ್ಲಿರುವ ಚರಂತಿ ಸಿನಿಮಾದಲ್ಲಿ,ರೇಖಾದಾಸ್ ಸೇರಿದಂತೆ ಹಲವು ನಟ–ನಟಿಯರಿದ್ದಾತೆ.. ಜೊತೆಗೆ ಯುವ ಪಡೆ ಈ ಸಿನಿಮಾದಲ್ಲಿರೋದು ಮತ್ತೊಂದು ವಿಶೇಷ…
ಡಾ.ಪರಶುರಾಮ್ ರಾವಲ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಅವಿನಾಶ್ ಸಂಗೀತ ನೀಡಿದ್ದು ಹಾಡುಗಳು ಈಗಾಗ್ಲೇ ಕೇಳುಗರನ್ನ ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ.. ಇನ್ನೂ 70 ರಷ್ಟು ಸಿನಿಮಾದ ಚಿತ್ರೀಕರಣ ಉತ್ತರ ಕರ್ನಾಟಕದಲ್ಲಿಯೆ ನಡೆದಿದ್ದು, ಅಲ್ಲಿನ ಸ್ವಚ್ಚ ಕನ್ನಡ ಇಂಪು ಸಿನಿಮಾದಲ್ಲಿದೆ.. ನಾಳೆ ರಾಜ್ಯಾದ್ಯಂತ ಚರಂತಿ ಬಿಡುಗಡೆಗೊಳ್ಳುತ್ತಿದೆ..