No menu items!
20.3 C
Munich
Monday, June 15, 2026

ದೇಶದ ಹಳ್ಳಿಗಳಲ್ಲೂ ಇನ್ನು ಮುಂದೆ ಸಿಗಲಿದೆ ಹೈ ಸ್ಪಿಡ್ ಇಂಟರ್ನೆಟ್ ಸೌಲಭ್ಯ…

Must read

ದೇಶದ ಹಳ್ಳಿಗಳಲ್ಲೂ ಇನ್ನು ಮುಂದೆ ಸಿಗಲಿದೆ ಹೈ ಸ್ಪಿಡ್ ಇಂಟರ್ನೆಟ್ ಸೌಲಭ್ಯ

ಕೆಲವೊಂದು ಕಡೆ ಇಂಟರ್ ನೆಟ್ ಇರಲಿ, ಫೋನ್ ನೆಟ್ ವರ್ಕ್ ಸಹ ಸಿಗೋದಿಲ್ಲ.. ಹೀಗಾಗೆ ಈ ಪರಿಸ್ಥಿಯನ್ನ ನಿಭಾಯಿಸಲು, ಜೊತೆಗೆ ಈ ಇಂಟರ್ನೆಟ್ ಯುಗದಲ್ಲಿ ಕ್ರಾಂತಿ ಎಬ್ಬಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ ನಮ್ಮ ಇಸ್ರೋ ವಿಜ್ಞಾನಿಗಳು.. ಹೀಗಾಗೆ ಭಾರತೀಯ ಕಾಲಮಾನ 3.23ರ ಸುಮಾರಿಗೆ ಫ್ಯ್ರಾನ್ಸ್ ನ ಜಿಯಾನಾದ ಕೌರೌ ನಲ್ಲಿರುವ ಏರಿಯನ್ ಲಾಂಚ್ ಕಾಂಪ್ಲೆಕ್ಸ್ ನಲ್ಲಿ ಜಿಸ್ಯಾಟ್-11 ಉಪಗ್ರಹವನ್ನ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ..

ಭಾರತದ ಅತೀ ಹೆಚ್ಚು ತೂಕವಿರುವ ಮೊದಲ ಉಪಗ್ರಹ ಇದಾಗಿದ್ದು 5870 ಕೆಜಿ ತೂಕವಿದೆ. ಭಾರತದ ಮೂಲೆ ಮೂಲೆಗು ಇಂಟರ್ ನೆಟ್ ಸೇವೆಯನ್ನ ಕಲ್ಪಿಸುವ ನಿಟ್ಟಿನಲ್ಲಿ ಬ್ರಾಡ್ ಬ್ಯಾಂಡ್ ಸೇವೆಯನ್ನ ಉತ್ಕೃಷ್ಟಗೊಳಿಸುವ ನಿಟ್ಟಿನಲ್ಲಿ ಈ ಜಿಸ್ಯಾಟ್ ಉಪಗ್ರಹವನ್ನ ಉಡ್ಡಯನ ಮಾಡಲಾಗಿದೆ.. ಇದರ ಮೂಲಕ ಪ್ರತಿ ಸೆಕೆಂಡ್ ಗೆ 16ಜಿಬಿ ವೇಗದಲ್ಲಿ ಅಂತರ್ಜಾಲ ಸೌಲಭ್ಯ ನೀಡುವ ಸಾಮರ್ಥವನ್ನ ಇದು ಹೊಂದಿದೆ..

500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಉಪಗ್ರಹ ಮೋದಿ ಅವರ ಡಿಜಿಟಲ್ ಇಂಡಿಯಾಗೆ ಬಲ ನೀಡಿದ್ದು, ಭಾರತದ ಮೂಲೆ ಮೂಲೆಯಲ್ಲಿರುವ ಹಳ್ಳಿಗಳಿಗು ಇಂಟರ್ ನೆಟ್ ಸೇವೆಯು ಈ ಮೂಲಕ ಲಭ್ಯವಾಗಲಿದೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article