ಸಲ್ಲು, ಕೊಹ್ಲಿನಾ ಮುಟ್ಟೋರೆ ಇಲ್ಲ ಶ್ರೀಮಂತಿಕೆಯಲ್ಲಿ..!! ಎಷ್ಟು ಕೋಟಿ ಆದಾಯ ಗೊತ್ತಾ ವರ್ಷಕ್ಕೆ..
2018ನೇ ಸಾಲಿನ ಭಾರತೀಯ ಸೆಲೆಬ್ರಿಟಿ ಪಟ್ಟಿಯನ್ನ ಫೋರ್ಬ್ಸ್ ಇಂದು ಬಿಡುಗಡೆ ಮಾಡಿದೆ.. ಸತತ 3ನೇ ಬಾರಿ ಸಲ್ಮಾನ್ ಖಾನ್ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.. ಇನ್ನು ಕ್ಯಾಪ್ಟನ್ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.. ಬಾಲಿವುಡ್ ನ ಬ್ಯಾಚುಲರ್ ಸಲ್ಮಾನ್ ಖಾನ್ 1-10-2017 ರಿಂದ 30-9-2018 ಅವಧಿಯಲ್ಲಿ ಬರೋಬ್ಬರಿ 253.25 ಕೋಟಿ ಆದಾಯವನ್ನ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.. ವಿರಾಟ್ ಕೊಹ್ಲಿ 228.09 ಕೋಟಿ, ಅಕ್ಷಯ್ ಕುಮಾರ್ 185 ಕೋಟಿ ಪಡೆದು ನಂತರದ ಸ್ಥಾನದಲ್ಲಿದ್ದಾರೆ…
ಇನ್ನುಳಿದಂತೆ ದೀಪಿಕಾಪಡುಕೋಣೆ 112 ಕೋಟಿ, ಎಂ.ಎಸ್.ಧೋನಿ 101.77 ಕೋಟಿ ಪಡೆದು ನಂತರದ ಸ್ಥಾನದಲ್ಲಿದ್ದಾರೆ.. ಅಮಿರ್ ಖಾನ್, ಅಮಿತಾಬ್ ಬಚ್ಚನ್, ರಣವೀರ್ ಸಿಂಗ್, ಸಚಿನ್ ತೆಂಡೂಲ್ಕರ್, ಅಜಯ್ ದೇವಗನ್, ಕ್ರಮವಾಗಿ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ.. ಈ ಬಾರಿ ಶಾರುಖ್ 13 ಸ್ಥಾನದಲ್ಲಿದ್ದಾರೆ..