ನಾನು ತಾಳಿಕೊಟ್ಟಿಸಿಕೊಳ್ಳಬೇಕು ಅಂದ್ರೆ ನಟ ಗಣೇಶ್ ಬರಲೇಬೇಕು ಅಂತ ಹಠ ಹಿಡಿದ ವಧು..!! ಆಮೇಲೆ ಆಗಿದ್ದೇನು ಗೊತ್ತಾ..?
ಗೋಲ್ಡನ್ ಸ್ಟಾರ್ ಗಣೇಶ್ ಹೆಣ್ಣು ಮಕ್ಕಳ ಹಾರ್ಟ್ ಫೇವರೆಟ್.. ಮದುವೆಗೆ ಮುನ್ನವೇ ಹೆಣ್ಣುಮಕ್ಕಳ ಹಾರ್ಟ್ ನಲ್ಲಿ ಕುಳಿತಿದ್ದ ಗಣಿಗೆ, ಮದುವೆಯಾದ ನಂತರ ಫೀಮೇಲ್ ಫ್ಯಾನ್ಸ್ ಗಳ ಸಂಖ್ಯೆ ಏನು ಕಡಿಮೆ ಆಗಿಲ್ಲ.. ಇದಕ್ಕೆ ಸಾಕ್ಷಿ ಕಳೆದ ದಿನವಷ್ಟೇ ನಡೆದ ಈ ಘಟನೆ.. ಹೌದು, ಬೆಂಗಳೂರಿನ ನಾಯಂಡನಹಳ್ಳಿ ಬಳಿ ನಡೆಯುತ್ತಿದ್ದ ಮದುವೆ ಇದ್ದಕ್ಕೆ ಇದ್ದಹಾಗೆ ಸ್ಟಾಪ್ ಆಯ್ತು.. ವಧು ನಾನು ತಾಳಿ ಕಟ್ಟಿಸಿಕೊಳ್ಳಲ್ಲ ಅಂತ ಹಠ ಹಿಡಿದಿದ್ರಂತೆ.. ಇದಕ್ಕೆ ಕಾರಣವೇನು ಗೊತ್ತಾ..? ನಟ ಗಣೇಶ್ ಬಂದ್ರೇನೆ ಈ ಮದುವೆ ಎಂದಿದ್ದಾರೆ..
ವಧುವಿನ ಹೊಸ ಬೇಡಿಕೆಯಿಂದ ಕಂಗಾಲದ ಕುಟುಂಬ ಕೊನೆಯದಾಗಿ ಹಾಗೋ ಹೀಗೊ ಗಣೇಶ್ ಅವರನ್ನ ಸಂಪರ್ಕಿಸಿ ವಿಷಯವನ್ನ ಮುಟ್ಟಿಸಿದ್ದಾರೆ.. ಆನಂತರ ಗಣೇಶ್ ಆ ಹೆಣ್ಣುಮಗಳ ಮದುವೆ, ತನ್ನ ಶೂಟಿಂಗ್ ಅನ್ನ ಕ್ಯಾನ್ಸಲ್ ಮಾಡಿ ಬಂದಿದ್ದಾರೆ.. ನಂತರ ಫುಲ್ ಖುಷಿಯಾದ ವಧು, ತನ್ನ ನೆಚ್ಚಿನ ಹೀರೊಗೆ ಸನ್ಮಾನ ಮಾಡಬೇಕು ಅಂತ ಹಠ ಮಾಡಿದ್ದಾರಂತೆ.. ಆನಂತರ ಕುಟುಂಬವರೆಲ್ಲ ಸೇರಿ ಗಣಿಗೆ ಸನ್ಮಾನ ಮಾಡಿದ್ದಾರೆ.. ಆ ಬಳಿಕವಷ್ಟೇ ವಧು ತಾಳಿಗೆ ಕಟ್ಟಿಸಿಕೊಳ್ಳಲು ಸಮ್ಮತಿ ನೀಡಿದ್ದಾರೆ..