‘ಮದಗಜ‘ ಟೈಟಲ್ ಬಿಟ್ಟು ಕೊಟ್ಟ ‘ಗಜ‘.. ಕಾರಣವೇನು ಗೊತ್ತಾ..?
ಮದಗಜ ಈ ಹಿಂದೆ ಈ ಟೈಟಲ್ ಸ್ಯಾಂಡಲ್ ವುಡ್ ನಲ್ಲಿ ವಿವಾದವನ್ನ ಹುಟ್ಟು ಹಾಕಿತ್ತು.. ಈ ಮಾಸ್ ಶೀರ್ಷಿಕೆಯಲ್ಲಿ ಸಿನಿಮಾ ಮಾಡಲು ಇಬ್ಬರು ಸಿದ್ದವಾಗಿದ್ರು.. ಒಂದು ಕಡೆ ಅಯೋಗ್ಯ ನಿರ್ದೇಶಕ ಶ್ರೀಮುರುಳಿಯನ್ನ ಮದಗಜ ಮಾಡೋಕೆ ಹೊರಟಿದ್ರು.. ಇದರ ನಡುವೆ ದರ್ಶನ್ ಅವರ ಕಾಲ್ ಶೀಟ್ ಪಡೆದ ನಿರ್ಮಾಪಕರೊಬ್ಬರು ದರ್ಶನ್ ಗೆ ಮದಗಜ ಟೈಟಲ್ ಎಂದಿದ್ರು..
ಈ ವಿವಾದ ಬಗೆ ಹರಿಯದೆ ಹಾಗೆ ಉಳಿದಿತ್ತು.. ಸದ್ಯ ದರ್ಶನ್ ಅವರು ಈ ಸಿನಿಮಾದ ಟೈಟಲ್ ಅನ್ನ ಬಿಟ್ಟುಕೊಟ್ಟಿದ್ದಾರೆ.. ಸ್ವತಃ ತಾವೇ ನಿರ್ಮಾಪಕರ ಮನವೊಲಿಸಿದ್ದು, ಈ ಚಿತ್ರದ ಟೈಟಲ್ ಅನ್ನ ಶ್ರೀಮುರುಳಿಗಾಗಿ ಬಿಟ್ಟುಕೊಟ್ಟಿದ್ದಾರೆ.. ಸ್ವತಃ ದರ್ಶನ್ ಹಾಗೆ ಶ್ರೀಮುರುಳಿ ಅವರ ನಡುವೆ ಉತ್ತಮ ಗೆಳತನವಿದೆ.. ಹೀಗಾಗೆ ಮಹೇಶ್ ನಿರ್ದೇಶನದ ಮದಗಜ ಚಿತ್ರದ ಟೈಟಲ್ ಅನ್ನ ದಚ್ಚು ಲಾಂಚ್ ಮಾಡುತ್ತಿದ್ದಾರೆ.. ಅದೇ ಈ ಮದಗಜ..







