Miss ಅಂಡ್ Mrs ಸಾಂಸ್ಕೃತಿಕ ಸುಂದರಿ 2018 ಕಣ್ಮನ ಸೆಳೆದ ನಾರಿಯರು..! ಪ್ರಶಸ್ತಿ ಗೆದ್ದ ಕಿನ್ನರಿಯರು..!!
ಮಿಸ್ ಅಂಡ್ ಮಿಸಸ್ ಇಲ್ಲಿ ಇಬ್ಬರಿಗು ವೇದಿಕೆ ಕಲ್ಪಿಸಲಾಗಿತ್ತು.. ಕರ್ನಾಟಕದ ಉದ್ದಗಲಕ್ಕೂ ಹೋಗಿ ನಾರಿಮಣಿಯರ ಆಡಿಷನ್ ಮಾಡಲಾಗಿತ್ತು.. ನಮ್ಮ ನಾಡಿನ, ನಮ್ಮ ಹಳ್ಳಿ ಸೊಗಡಿನ ನೆಲೆಯಲ್ಲಿಯೇ ನಡೆದ ಕಾರ್ಯಕ್ರಮ ಈ ಮಿಸ್ ಅಂಡ್ ಮಿಸಸ್ ಸಾಂಸ್ಕೃತಿಕ ಸುಂದರಿ 2018..
ಇಲ್ಲಿ ಬರೀ ಕನ್ಯಾಮಣಿಯರಿಗೆ ಮಾತ್ರವಲ್ಲ ಮದುವೆಯಾಗಿ, ಸಂಸಾರವನ್ನ ತೂಗಿಸುತ್ತಿದ್ದ ಸ್ತ್ರೀಯರು ಕೂಡ ಭಾಗವಿಸಿದ್ರು.. ಸೀರೆಯುಟ್ಟು, ಒಡೆವೆ ತೊಟ್ಟು, ಭಾರತೀಯ ಸಂಸ್ಕೃತಿಯನ್ನ ಎತ್ತಿಹಿಡಯುವ ನಿಟ್ಟಿನಲ್ಲಿ ನಡೆದ ಈ ಕಾರ್ಯಕ್ರಮ ಕಳೆದ ಡಿಸೆಂಬರ್ 14,15 ಮತ್ತು 16 ರಂದು ಬೆಂಗಳೂರಿನಲ್ಲೆ ನಡೆದಿದೆ..
ಇದರಲ್ಲಿ ಭಾಗವಹಿಸಿದ್ದ ನೂರಾರು ಹೆಂಗಳೆಯರ ಪೈಕಿ 2018ರ ಪ್ರತಿಷ್ಠಿತ ಮಿಸ್ ಸಾಂಸ್ಕೃತಿಕ ಸುಂದರಿ ಅವಾರ್ಡ್ ಅನ್ನ 1.ಮಿಸ್ ರಸ್ಚಿತಾ, 2.ಶ್ವೇತಾ ಹಾಗು 3. ಐಶ್ವರ್ಯ ಪಡೆದುಕೊಂಡ್ರು..
ಇನ್ನುಳಿದಂತೆ ಕನ್ಯಾಮಣಿಯರಿಗೇನು ಕಡಿಮೆ ಇಲ್ಲ ಎಂಬಂತೆ ಮಿಸಸ್ ಕ್ಯಾಟಗರಿಯಲ್ಲಿ ರ್ಯಾಪ್ ವಾಕ್ ಮಾಡಿ ಕಣ್ಮನ ಸೆಳೆದ ಮಹಿಳೆಯರಲ್ಲಿ, ಮಿಸಸ್ ರೇಖಾ ಮೊದಲ ಸ್ಥಾನ, Mrs.ರೂಪಾ ಎರಡನೇ ಸ್ಥಾನ ಹಾಗು Mrs ರಶ್ಮಿ ಮೂರನೇ ಸ್ಥಾನವನ್ನ ಪಡೆದುಕೊಂಡ್ರು..
ಇನ್ನೂಳಿದಂತೆ ಸೂಪರ್ ಮಿಸಸ್ ಕ್ಯಾಟಗರಿಯಲ್ಲು ಸಹ ಮಹಿಳೆಯರು ಕಂಗೊಳಿಸಿದ್ರು.. ಇದರಲ್ಲಿ ಮೊದಲ ಸ್ಥಾನವನ್ನ ಮಿಸಸ್ ಶಿಲ್ಪ ಪಡೆದುಕೊಂಡ್ರೆ ನಂತರ ಸ್ಥಾನದಲ್ಲಿ ರೂಪಾ ಹಾಗು ಜಯ ಲಕ್ಷ್ಮೀ ಅವಾರ್ಡ್ ಅನ್ನ ತಮ್ಮದಾಗಿಸಿಕೊಂಡ್ರು..