ಪ್ರೇಮ್ ನಿರ್ದೇಶನ ಮುಂದಿನ ಚಿತ್ರದಲ್ಲಿ ಹೆಸರಾಂತ ಕನ್ನಡ ನಟಿಯ ಪುತ್ರಿಯೆ ನಾಯಕಿ..!!
ನಿರ್ದೇಶಕ ಪ್ರೇಮ್ ದಿ ವಿಲನ್ ಸಿನಿಮಾ ತೆರೆಗೆ ತಂದಾಗಿದೆ.. ಈಗ ಮತ್ತೆ ಪ್ರೇಮ್ ಯಾವ ಚಿತ್ರವನ್ನ ಕೈಗೆತ್ತಿಕೊಳ್ಳಲ್ಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.. ಯಾಕಂದ್ರೆ, ಪ್ರೇಮ್ ಸದ್ಯ ನಾಯಕನಾಗಿ ನಟಿಸುತ್ತಿರುವ ಗಾಂಧಿಗಿರಿ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ..
ಹೀಗಾಗೆ ಪ್ರೇಮ್ ಮತ್ತೆ ಯಾವಾಗ ಆಕ್ಷನ್ ಕಟ್ ಹೇಳ್ತಾರೆ ಅಂತ ಕಾದವರಿಗೆ, ಈಗ ಹೊಸ ಸುದ್ದಿಯೊಂದು ಬಂದಿದೆ.. ಹೌದು, ಪ್ರೇಮ್ ತನ್ನ ಪತ್ನಿ ರಕ್ಷಿತಾ ಪ್ರೇಮ್ ಸಹೋದರನನ್ನ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯ ಮಾಡಲ್ಲಿದ್ದಾರೆ.. ಈಗಾಗ್ಲೇ ವಿಲನ್ ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡಿರುವ ಅಭಿಷೇಕ್ ರಾವ್ ಈ ಚಿತ್ರದ ನಾಯಕ..
ನಾಯಕಿಯಾಗಿ ನಟಿ ಸುಧಾರಾಣಿ ಪುತ್ರಿ ನಿಧಿ ಕಾಣಿಸಿಕೊಳ್ಳಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.. ಈಗಾಗ್ಲೇ ನಿಧಿ ಸಹ ನಟನ ಕೌಶಲ್ಯವನ್ನ ಕರಗತ ಮಾಡಿಕೊಂಡಿದ್ದು, ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ರೆಡಿಯಾಗಿಬಿಟ್ಟಿದ್ದಾರೆ.. ಅಂದಹಾಗೆ ಈ ಸಿನಿಮಾ ಪ್ರೇಮಿಗಳ ದಿನದಂದು ಸೆಟ್ಟೇರಲಿದೆಯಂತೆ..