ಇಂದೇ ಬ್ಯಾಂಕ್ ವ್ಯವಹಾರ ಮುಗಿಸಿಕೊಳ್ಳಿ.. ನಾಳೆಯಿಂದ 5 ದಿನ ಬ್ಯಾಂಕ್ ರಜೆ..!!
ಹೌದು, ನಾಳೆ ಅಂದ್ರೆ ಡಿಸಂಬರ್ 21 ರಂದು ರಾಷ್ಟ್ರವ್ಯಾಪಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ವೇತನ ಪರಿಷ್ಕರಣೆ ಬೇಡಿಕೆಯನ್ನ ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಿದೆ.. ಡಿಸೆಂಬರ್ 22 ನಾಲ್ಕನೇ ಶನಿವಾರ ಆಗಿರುವುದರಿಂದ ಬ್ಯಾಂಕ್ ರಜೆ ಇದೆ.. ಡಿಸೆಂಬರ್ 23 ಭಾನುವಾರ ಮತ್ತೆ ಬ್ಯಾಂಕ್ ರಜೆ.. ಡಿಸೆಂಬರ್ 25 ಕ್ರಿಸ್ಮಸ್ ಪ್ರಯುಕ್ತ ಬ್ಯಾಂಕ್ ಗಳಿಗೆ ರಜೆ ಇದೆ.. ಇದಾದ ಬಳಿಕ ಮತ್ತೆ 26 ರಂದು ಬ್ಯಾಂಕ್ ಸಿಬ್ಬಂದಿಯಿಂದ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಉದ್ದೇಶಿಲಾಗಿದೆ.. ಹೀಗಾಗೆ ಸೋಮವಾರ ಒಂದು ದಿನ ಬಿಟ್ಟು ಉಳಿದ 5 ದಿನಗಳು ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.. ಹೀಗಾಗೆ ಇಂದೇ ನಿಮ್ಮ ಎಲ್ಲ ಬ್ಯಾಂಕ್ ವ್ಯವಹಾರಗಳನ್ನ ಮುಗಿಸಿಕೊಳ್ಳುವುದು ಉತ್ತಮ.