ರಾಜಕೀಯವಾಯ್ತು ಟೆಲಿವಿಷನ್ ಮಾಧ್ಯಮಕ್ಕು ಕಾಲಿಡ್ತಿದ್ದಾರೆ ಸೂಪರ್ ಸ್ಟಾರ್..!
ಹೌದು ಸೂಪರ್ ಸ್ಟಾರ್ ರಜನಿಕಾಂತ್ ತಮಿಳು ನಾಡಿನ ಸಿನಿ ಪ್ರೇಮಿಗಳ ಆರಾಧ್ಯ ದೈವ.. ಈಗಾಗ್ಲೇ ರಾಜಕೀಯಕ್ಕೆ ಎಂಟ್ರಿ ನೀಡಿ ಸಂಚಲ ಸೃಷ್ಟಿಸಿರುವ ಸೂಪರ್ ಸ್ಟಾರ್, ಈಗ ಕಿರುತೆರೆಯಲ್ಲಿ ತಮ್ಮದೇ ಚಾನೆಲ್ ಅನ್ನ ಲಾಂಚ್ ಮಾಡೋಕೆ ಮುಂದಾಗಿದ್ದಾರೆ..
ರಜನಿಕಾಂತ್ ರಾಜಕೀಯವಾಗಿ ಗುರುತಿಸಿಕೊಂಡಿರುವ ರಜಿನಿ ಫೋರಂ ಸುಪರ್ದಿಯಲ್ಲಿ ಈ ಚಾನೆಲ್ ಗಳು ಆರಂಭವಾಗಲಿವೆ.. ನ್ಯೂಸ್ ಚಾನೆಲ್ ಹಾಗೆ ಎಂಟ್ರಟೈನ್ಮೆಂಟ್ ಚಾನೆಲ್ ಎರಡನ್ನ ಶುರು ಮಾಡಲ್ಲಿದ್ದಾರೆ.. ಈಗಾಗ್ಲೇ ಇದಕ್ಕೆ ಸೂಪರ್ ಸ್ಟಾರ್ ಟಿವಿ, ತಲೈವರ್ ಟಿವಿ, ರಜಿನಿ ಟಿವಿ ಹೆಸರಗಳು ಕೇಳಿಬಂದಿದ್ದು, ಇದರಲ್ಲಿ ಯಾವುದಾದರೊಂದು ಫೈನಲ್ ಆಗಲಿದೆ..