No menu items!
12.4 C
Munich
Wednesday, April 29, 2026

ಕೇಬಲ್ ಟಿವಿ ಬಂದ್..!!? 29 ರಂದು ನಿಮ್ಮ ಮನೆ ಟಿವಿಯಲ್ಲಿ ಕಾಣಿಸಿಕೊಳ್ಳಲಿದೆ ನೋ ಸಿಗ್ನಲ್..??

Must read

ಕೇಬಲ್ ಟಿವಿ ಬಂದ್..!!? 29 ರಂದು ನಿಮ್ಮ ಮನೆ ಟಿವಿಯಲ್ಲಿ ಕಾಣಿಸಿಕೊಳ್ಳಲಿದೆ ನೋ ಸಿಗ್ನಲ್..??

ಸದ್ಯ ಟೆಲಿಕಾಂ ನಿಯಂತ್ರಣ ಮಂಡಳಿ (ಟ್ರಾಯ್) ಹೊಸ ನಿಯಮವನ್ನ ಜಾರಿಗೆ ತಂದಿದೆ.. ಇದರ ಪ್ರಕಾರ ಗ್ರಾಹಕ ತನಗೆ ಇಷ್ಟ ಬಂದ ಚಾನೆಲ್ ಗಳನ್ನ ಆಯ್ಕೆ ಮಾಡಿಕೊಂಡು ನೋಡುವ ಅವಕಾಶವನ್ನ ಕಲ್ಪಿಸಲಾಗಿದೆ.. ಈ ನಿಮಯ ಇದೇ ಡಿಸಂಬರ್ 29 ರಿಂದ ಜಾರಿಗೆ ಬರಲ್ಲಿದ್ದು, ಡಿಟಿಹೆಚ್ ಹಾಗೆ ಕೇಬಲ್ ಸೇವೆಗಳಲ್ಲಿ ತೀರ್ವ ಬದಲಾವಣೆಯಾಗಲಿದೆ..

ಈವರೆಗೂ ಕೇಬಲ್ ನವರು ಪ್ರಸಾರ ಮಾಡಿದಷ್ಟು ಚಾನೆಲ್ ಗಳಿಗೆ ಹಣ ಪಾವತಿಸಬೇಕಿತ್ತು.. ಇನ್ನು ಡಿಶ್ ಟಿವಿಗಳಲ್ಲು ಒಂದು ಚಾನೆಲ್ ಪಡೆಯಬೇಕೆಂದರೆ ಅದರ ಜೊತೆಗೆ ಸಮೂಹ ಚಾನೆಲ್ ಗಳ ಪ್ಯಾಕ್ ಅನ್ನ ಪಡೆದುಕೊಳ್ಳಬೇಕಿತ್ತು.. ಈಗ ಈ ನಿಯಮದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದು, ಟ್ರಾಯ್ ಈ ಬಗ್ಗೆ ಹೊಸ ನಿಯಮವನ್ನ ರೂಪಿಸಿದೆ..

ಈ ಬಗ್ಗೆ ಕೇಬಲ್ ಆಪರೇಟರ್ ಗಳಿಗೆ ಬೇಕಾದ ತಂತ್ರಜ್ಞಾನ ಇಲ್ಲವಾಗಿದೆ.. ಇದನ್ನ ಹೇಗೆ ಕಾರ್ಯರೂಪಕ್ಕೆ‌ ತರುವುದು ಎಂಬ ಗೊಂದಲದಲ್ಲಿರುವ ಕೇಬಲ್ ಟಿವಿ ಆಪರೇಟರ್ ಗಳು ಟ್ರಾಯ್ ನ ಈ ನಿಯಮದ ವಿರುದ್ದ ತಿರುಗಿ ಬಿದ್ದಿದ್ದಾರೆ.. ಹೀಗಾಗೆ ಇದೇ ಡಿಸಂಬರ್ 29 ರಂದು ಕೇಬಲ್ ಆಪರೇಟರ್ ಗಳು ತಮ್ಮ ಉದ್ಯಮವನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಲು ಚಿಂತನೆ ನಡೆಸಿದ್ದಾರೆ‌‌‌ ಎನ್ನಲಾಗಿದೆ..

ದೇಶದ 80% ಜನತೆ ಕೇಬಲ್ ಟಿವಿಯನ್ನ ಅವಲಂಬಿಸಿದ್ದಾರೆ.. ಈ ಹೊಸ ನಿಯಮದಿಂದ ಗ್ರಾಹಕ ಹಾಗು ಕೇಬಲ್ ಆಪರೇಟರ್ ಗಳಿಗೆ ಹೊರಯಾಗಲಿದ್ದು, ಈ ಬಗ್ಗೆ ಪ್ರತಿಭಟನೆ ಕೈಗೊಳ್ಳಲು ಮುಂದಾಗಿದೆ.. ಹೀಗಾಗೆ 29 ರಂದು ಇಡೀ ಕೇಬಲ್ ಉದ್ಯಮವನ್ನ ಬಂದ್ ಮಾಡಲು ಚಿಂತನೆ ನಡೆಸಲಾಗುತ್ತಿದೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article