ಕಣ್ಸನ್ನೆ ಬೆಡಗಿಯ ಹೊಸ ಎಡವಟ್ಟು.. ಬೋನಿಕಪೂರ್ ನೀಡಿದ್ರು ನೋಟಿಸ್..!!
ಪ್ರಿಯಾ ಪ್ರಕಾಶ್ ವಾರಿಯರ್.. ಒರು ಆಡರ್ ಲವ್ ಹೆಸರಿನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.. ಈ ಚಿತ್ರ ಇನ್ನು ಬಿಡುಗಡೆಗೊಂಡಿಲ್ಲ.. ಕೆಲವರಿಗೆ ಈ ಸಿನಿಮಾದ ಬಗ್ಗೆಯೂ ಗೊತ್ತಿಲ್ಲ.. ಆದರೆ ಈ ಚಿತ್ರದ ಅದೊಂದು ಕಣ್ಸನ್ನೆ ದೃಶ್ಯ ಮಾತ್ರ ಫುಲ್ ಫೇಮಸ್.. ಅಲ್ಲಿಂದ ಈ ನಟಿಗೆ ದೊಡ್ಡ ಪ್ರಚಾರ ಸಿಕ್ಕಿದ್ದು, ಭಾರತೀಯ ಚಿತ್ರರಂಗದ ಕಣ್ಸನ್ನೆ ಚೆಲುವೆ ಎಂಬ ಖ್ಯಾತಿಯನ್ನ ಪಡೆದುಕೊಂಡಿದ್ದಾರೆ…
ಮೊದಲ ಚಿತ್ರ ರಿಲೀಸ್ ಗೂ ಮೊದಲೇ ಈಕೆಯ ಮತ್ತೊಂದು ಸಿನಿಮಾ ಟೀಸರ್ ಬಿಡುಗಡೆಗೊಂಡಿದೆ..ಅದೇ ಶ್ರೀದೇವಿ ಬಂಗ್ಲೊ.. ಈ ಟೀಸರ್ ಹಾಗೆ ಸಿನಿಮಾ ಟೈಟಲ್ ಎರಡು ಸಹ ಇದು ದಿವಂಗತ ಶ್ರೀದೇವಿ ಅವರ ಲೈಫ್ ಸ್ಟೋರಿ ಅನ್ನೋದನ್ನ ಸಾರಿ ಹೇಳ್ತಿದೆ.. ಇಲ್ಲಿ ಶ್ರೀದೇವಿ ಹೆಸರಲ್ಲಿ ಕಾಣಿಸಿಕೊಂಡಿರೋದು ಇದೇ ಪ್ರಿಯಾ ಪ್ರಕಾಶ್ ವಾರಿಯರ್..
ಸದಿಲ್ಲದೆ ಟೀಸರ್ ರಿಲೀಸ್ ಮಾಡಿ ಈಗ ಸಮಸ್ಯೆಗೆ ಸಿಲುಕಿಕೊಂಡಿದೆ ಅರಾತ್ ಎಂಟರ್ಟೈನ್ಮೆಂಟ್ ಸಂಸ್ಥೆ.. ಅತಿಲೋಕ ಸುಂದರಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಪ್ರಿಯಾ ಹಾಗೆ ಈ ಚಿತ್ರ ಸಂಸ್ಥೆಗೆ ಲೀಗಲ್ ನೋಟಿಸ್ ಕಳುಹಿದ್ದಾರೆ.. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿನಿಮಾ ಟೀಮ್ ನಮ್ಮ ಕಥೆಯೇ ಬೇರೆ, ಕೇವಲ ನಾವು ಈ ಚಿತ್ರಕ್ಕೆ ಶ್ರೀದೇವಿ ಅಂತ ಹೆಸರಿಟ್ಟಿದ್ದೇವೆ ಎಂದು ಸ್ಪಷ್ಟೀಕರಣ ನೀಡಿದೆ.. ಇದೇ ನೋಡಿ ಶ್ರೀದೇವಿ ಟೀಸರ್..