ಯುಟ್ಯೂಬ್ ನಲ್ಲಿ ಕನ್ನಡ ಸಿನಿಮಾಗಳೇ ಇಂದು ಸಾರ್ವಭೌಮ… ಹತ್ತರಲ್ಲಿ ಮೂರು ನಮ್ಮವೆ..!!
ಸಂಕ್ರಾಂತಿಯಿಂದ ಇಲ್ಲಿವರೆಗೂ ಯೂಟ್ಯೂಬ್ ಅಂಗಳದಲ್ಲಿ ಕನ್ನಡ ಸಿನಿಮಾಗಳು ಪಳಪಳ ಹೊಳೆಯುತ್ತಿವೆ.. ನೆರೆ ಭಾಷೆಯ ಚಿತ್ರರಂಗದ ಕಣ್ಣುಗಳನ್ನ ಕುಕ್ಕುತ್ತಿವೆ.. ಅಷ್ಟೇ ಅಲ್ಲ ಅಲ್ಲಿನ ಸಿನಿ ಪ್ರೇಮಿಗಳಿಗು ಇಷ್ಟವಾಗಿವೆ.. ಹೀಗಾಗೆ ಮೂರು ದಿನಗಳಿಂದ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಕನ್ನಡದ ದೊಡ್ಡ ನಟರಾದ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಅವರದ್ದೆ ಸೌಂಡು…
ಹೌದು, ದರ್ಶನ್ ಅಭಿನಯದ ಯಜಮಾನ ಸಿನಿಮಾದ ಶಿವನಂದಿ ಹಾಡು, ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಟೀಸರ್ ಹಾಗು ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಹಾಡು ಟ್ರೆಂಡಿಂಗನಲ್ಲಿದೆ.. ಟಾಪ್ ಹತ್ತರಲ್ಲಿ ಕನ್ನಡದ ಈ ಮೂರು ಸ್ಟಾರ್ ಗಳು ತಮ್ಮ ಸ್ಥಾನವನ್ನ ಆವರಿಸಿಕೊಂಡಿದೆ.. ಪೈನ್ವಾಲ್ ಟಾಪ್ ಒಂದರಲ್ಲಿದ್ರೆ, ಶಿವನಂದಿ ಹಾಡು ಎರಡನೇ ಸ್ಥಾನದಲ್ಲಿದೆ.. ಇನ್ನು ಪವರ್ ಸ್ಟಾರ್ ಚಿತ್ರದ ಹಾಡು 8 ಸ್ಥಾನದಲ್ಲಿದೆ.. ಈ ಮೂಲಕ ಕನ್ನಡದ ಕಂಪನ್ನ ದೇಶವ್ಯಾಪಿ ಹರಡುತ್ತಿವೆ..